CONNECT WITH US  

ತಹಶೀಲ್ದಾರ್‌ ಬೆಂಬಲಿಗರಿಂದ ಸಿಎಂ ಕಾರಿಗೆ ಮುತ್ತಿಗೆ ; ಹೈಡ್ರಾಮಾ 

ಬೇಕೆ ಬೇಕು ಟಿಕೆಟ್‌ ಬೇಕು...ರಸ್ತೆಯಲ್ಲೆ  ಉರುಳು ಸೇವೆ 

ಮೈಸೂರು: ಕಾಂಗ್ರೆಸ್‌ನಲ್ಲಿ ಟಿಕೆಟ್‌ ವಂಚಿತ ಶಾಸಕರು ಮತ್ತು ಮುಖಂಡರ ಆಕ್ರೋಶ ತೀವ್ರವಾಗಿದ್ದು  ಮಂಗಳವಾರ ಹಾನಗಲ್‌ ಶಾಸಕ ಮನೋಹರ್‌ ತಹಶೀಲ್ದಾರ್‌ ಅವರ ನೂರಾರು ಬೆಂಬಲಿಗರು ಸಿಎಂಗೆ ಮುತ್ತಿಗೆ ಹಾಕಿ ಹೈಡ್ರಾಮಾ ಮಾಡಿದ್ದಾರೆ. 

ಟಿ.ಕೆ.ಬಡವಾಣೆ ಬಳಿಯಿರುವ ಸಿಎಂ ನಿವಾಸದ ಎದುರು ಜಮಾವಣೆಗೊಂಡ ನೂರಾರು ಬೆಂಬಲಿಗರು ಟಿಕೆಟ್‌ ಬೇಕು ಟಿಕೆಟ್‌ ಎಂಬ ಘೋಷಣೆಗಳನ್ನು ಕೂಗಿದರು. 

ಕಾರನ್ನು ಅಡ್ಡಗಟ್ಟಿ ರಸ್ತೆಯಲ್ಲೇ ಮಲಗಿ ಉರುಳಾಡಿದ ಕಾರ್ಯಕರ್ತರು ಟಿಕೆಟ್‌ ಗಾಗಿ ಪಟ್ಟು ಹಿಡಿದರು. 

ಸಿಎಂ ಆಕ್ರೋಶಿತ ಕಾರ್ಯಕರ್ತರ ಬಳಿ ತೆರಳಿದರು, ಪೊಲೀಸರು ದಾರಿ ಅನುವು ಮಾಡಿಕೊಟ್ಟರು. 

4 ಬಾರಿ ಶಾಸಕ ರಾಗಿ ಆಯ್ಕೆಯಾಗಿರುವ ಬಲಿಜ ಸಮುದಾಯದ ನಾಯಕ ಮನೋಹರ್‌ ತಹಶೀಲ್ದಾರ್‌ ಅವರಿಗೆ ಟಿಕೆಟ್‌ ತಪ್ಪಿಸಿ ಶ್ರೀನಿವಾಸ್‌ ಮಾನೆ ಅವರಿಗೆ ನೀಡಲಾಗಿದೆ. 

Back to Top