CONNECT WITH US  

ನಾಳೆ ಪ್ರಣಾಳಿಕೆ : ಬಿಎಸ್‌ವೈ

ಗದಗ: ಬಿಜೆಪಿ ಪ್ರಣಾಳಿಕೆ ಎ.30ರಂದು ಮಧ್ಯಾಹ್ನ 12ಕ್ಕೆ ಬಿಡುಗಡೆಯಾಗಲಿದೆ. ಪ್ರಣಾಳಿಕೆಯಲ್ಲಿ ಕೃಷಿಕರು, ನೇಕಾರರು ಮತ್ತು  ಕೃಷಿ ಕಾರ್ಮಿಕರಿಗೆ ಒತ್ತು ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ಶನಿವಾರ ನಗರದಲ್ಲಿ  ಆಯೋಜಿಸಲಾಗಿದ್ದ  ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಣಾಳಿಕೆಯಲ್ಲಿ ರೈತರ ಆಗ್ರಹದ ಮೇರೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲಮನ್ನಾ ಮಾಡುವ ಭರವಸೆ ನೀಡಲಾಗುವುದು. ಈ ಬಾರಿ ಬಿಜೆಪಿ ಪ್ರಣಾಳಿಕೆಯಿಂದ ಮತ್ತೆ ಶೇ.2ರಿಂದ 3ರಷ್ಟು ಮತಗಳು ಹೆಚ್ಚಾಗುವ ನಿರೀಕ್ಷೆಯಿದೆ. ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು. 

ರಾಜ್ಯದಲ್ಲಿ  ಬಿಜೆಪಿ ಅಧಿಕಾರಕ್ಕೆ ಬಂದರೆ ಆಲಮಟ್ಟಿ ಜಲಾಶಯವನ್ನು 519 ಮೀ.ನಿಂದ 524 ಮೀ.ಗೆ ಹೆಚ್ಚಿಸಿ ನೀರಾವರಿಗೆ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಅನುದಾನ ಖರ್ಚು ಮಾಡಲಾಗುವುದು. ಅದರೊಂದಿಗೆ ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲರ ಮಾಸಾಶನಗಳು, ಭಾಗ್ಯಲಕ್ಷ್ಮೀ ಹಣ ಹೆಚ್ಚಿಸಲಾಗುವುದು ಎಂದವರು ಹೇಳಿದರು. 

Trending videos

Back to Top