CONNECT WITH US  

ಎಫ್ಐಆರ್ ದಾಖಲು; ನಟ ದುನಿಯಾ ವಿಜಯ್ ಪರಾರಿ, ಏನಿದು ಪ್ರಕರಣ?

ಬೆಂಗಳೂರು:ಮಾಸ್ತಿಗುಡಿ ಚಿತ್ರೀಕರಣದ ವೇಳೆ ಖಳನಟರಾದ ಅನಿಲ್ ಹಾಗೂ ಉದಯ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ಮಾಪಕ ಸುಂದರ್ ಗೌಡ ಪರಾರಿಯಾಗಲು ಸಹಕರಿಸಿದ ಆರೋಪದ ಮೇಲೆ ನಟ ದುನಿಯಾ ವಿಜಯ್ ಮೇಲೆ ಎಫ್ ಐಆರ್ ದಾಖಲಾಗಿದೆ.

ಖಳನಟರಿಬ್ಬರ ಸಾವಿನ ಪ್ರಕರಣ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ನಿರ್ಮಾಪಕ ಸುಂದರ್ ಗೌಡ ಪದೇ, ಪದೇ ವಿಚಾರಣೆಗೆ ಗೈರು ಹಾಜರಾಗಿದ್ದರಿಂದ ರಾಮನಗರ ಜೆಎಂಎಫ್ ಸಿ ಕೋರ್ಟ್ ನಿನ್ನೆ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

ಏತನ್ಮಧ್ಯೆ ಸುಂದರ ಗೌಡ ದುನಿಯಾ ವಿಜಿ ಮನೆಯಲ್ಲಿ ಆಶ್ರಯ ಪಡೆದಿದ್ದಾರೆಂಬ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಲು ಹೋದ ವೇಳೆ ದುನಿಯಾ ವಿಜಿ ಅವರು ಸುಂದರ್ ಗೌಡ ಪರಾರಿಯಾಗಲು ಸಹಕರಿಸಿದ್ದಲ್ಲದೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ದೂರಿ ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಗೋವಿಂದರಾಜು ಪ್ರಕರಣ ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರು ದುನಿಯಾ ವಿಜಿ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಬಹುಕೋಟಿ ವಂಚನೆ ಪ್ರಕರಣ..235 ಕೋಟಿ ರೂಪಾಯಿ ವಂಚನೆ ಠೇವಣಿ ಹಣ ವಾಪಸ್ ಕೊಡದೇ ವಂಚಿಸಿದ್ದ ಆನಂದ್ ಅಪ್ಪುಗೋಳ್. 2017ರ ಆಗಸ್ಟ್ ನಿಂದ ಠೇವಣಿ ಹಣ ಸಂಗೊಳ್ಳಿ ರಾಯಣ್ಣ ಭೀಮಾಂಬಿಕಾ ಸೊಸೈಟಿ ಮೂಲಕ ವಂಚನೆ. ಖಡೇಬಜಾರ್ ಪೊಲೀಸರಿಂದ ಬಂಧನ.


Trending videos

Back to Top