CONNECT WITH US  

2 ದಿನದಲ್ಲಿ ಕೆಎಂಎಫ್ ನಿರ್ದೇಶಕರ ಸಭೆ 

ವಿಧಾನಸಭೆ: ಹಾಲಿನ ದರ ವ್ಯತ್ಯಾಸ ಮತ್ತು ಸರ್ಕಾರದ ಪ್ರೋತ್ಸಾಹ ಧನದ ಗೊಂದಲ ಬಗ್ಗೆ ಚರ್ಚಿಸಲು ಎರಡು ದಿನಗಳಲ್ಲಿ ಕೆಎಂಎಫ್ಆಡಳಿತ ಮಂಡಳಿ ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಹಾಸನದಲ್ಲಿ ಹಾಲಿನ ಉತ್ಪಾದನೆ ಹೆಚ್ಚಳವಾಗಿದ್ದರಿಂದ ಮೆಗಾ ಡೇರಿ ಸ್ಥಾಪಿಸುವ ಪ್ರಸ್ತಾಪ ಬಂದಿತ್ತು. ಅದನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೇನೆ. ಇದರಿಂದ ಚಿಕ್ಕಮಗಳೂರಿಗೂ ಅನುಕೂಲವಾಗಲಿದೆ ಎಂದು ಹೇಳಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿಯ ಸಿ.ಟಿ. ರವಿ, ಹಾಲು ಉತ್ಪಾದಿಸುವ ರೈತರು ಎಲ್ಲರೂ ಒಂದೇ ಆದರೆ, ಹಾಲಿನ ದರ ಮಂಗಳೂರಿನಲ್ಲಿ ಪ್ರತಿ ಲೀಟರ್‌ಗೆ 28 ರೂ. ನೀಡದರೆ ರಾಮನಗರದಲ್ಲಿ 21 ರೂ.ನೀಡಲಾಗುತ್ತಿದೆ. ಇದರಿಂದ ರೈತರಿಗೆ ತಾರತಮ್ಯ ಮಾಡಿದಂತಾಗುತ್ತದೆ. ಎಲ್ಲ ರೈತರಿಗೂ ಏಕ ರೂಪದ ಹಾಲಿನ ದರ ನಿಗದಿ ಪಡಿಸಬೇಕು ಎಂದರು. 

ಅವರಿಗೆ ಬೆಂಬಲವಾಗಿ ಮಾತನಾಡಿದ ಮಾಧುಸ್ವಾಮಿ, ರಾಜ್ಯ ಸರ್ಕಾರ ಹಾಲಿನ ಮೆಗಾ ಡೇರಿ ಮಾಡುವ ಉದ್ದೇಶವಿದ್ದರೆ ಕೋಲಾರದಲ್ಲಿ ಮಾಡಬೇಕು. ಅಲ್ಲಿಯ ರೈತರು ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಇದರಿಂದ ಕೋಲಾರ ರೈತರಿಗೆ ಬೆಂಗಳೂರಿಗೆ ಸಾಗಿಸುವ ಸಾರಿಗೆ ವೆಚ್ಚ ಉಳಿತಾಯವಾಗಲಿದೆ ಎಂದು ಹೇಳಿದರು. 
ಇದಕ್ಕೆ ಸ್ಪಂದಿಸಿದ ಸಿಎಂ ಕೋಲಾರದಲ್ಲಿ ಮೆಗಾ ಡೇರಿ ತೆರೆಯುವ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

Trending videos

Back to Top