CONNECT WITH US  

ಚಂದ್ರಗ್ರಹಣ ಭಯದ ಲಾಭ ಪಡೆದ ಕಳ್ಳರು! ದೇವಸ್ಥಾನ, 8 ಅಂಗಡಿಗೆ ಕನ್ನ

Representational Image

ಮಂಡ್ಯ/ಮೈಸೂರು:ಶತಮಾನದ ಅತೀ ದೀರ್ಘ ಚಂದ್ರಗ್ರಹಣ ಶುಕ್ರವಾರ ರಾತ್ರಿ ಸಂಭವಿಸಿದ್ದರೆ, ಮತ್ತೊಂದೆಡೆ ಖಗ್ರಾಸ ಚಂದ್ರಗ್ರಹಣದ ಲಾಭ ಪಡೆದ ಕಳ್ಳರು ದೇವಸ್ಥಾನ ಹಾಗೂ ಅಂಗಡಿಗಳನ್ನು ದೋಚಲು ಉಪಯೋಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ!

ದೇವಾಲಯದ ಚಿನ್ನಾಭರಣ, ಹುಂಡಿ ಹಣ ಕಳವು:

ಚಂದ್ರಗ್ರಹಣದ ವೇಳೆ ಜನರು ಯಾರೂ ಹೊರಗಡೆ ಬರುವುದಿಲ್ಲ ಎಂಬುದನ್ನು ಅರಿತ ಕಳ್ಳರು..ಕೈಚಳಕ ತೋರಿಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮದ ಲಕ್ಷ್ಮೀ ದೇವಾಲಯಕ್ಕೆ ನುಗ್ಗಿದ ಕಳ್ಳರು ಬಾಗಿಲು ಮುರಿದು ಚಿನ್ನಾಭರಣ ಹಾಗೂ ಹುಂಡಿಯ ಹಣವನ್ನು ದೋಚಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಮೈಸೂರಿನಲ್ಲಿ 8 ಅಂಗಡಿಗಳಿಗೆ ಕನ್ನ!

ಮೈಸೂರಿನ ಕನಕದ ದಾಸ ನಗರದ ನೇತಾಜಿ ವೃತ್ತದಲ್ಲಿರುವ ಸ್ಟೇಶನರಿ, ಮೆಡಿಕಲ್ ಸ್ಟೋರ್ ಸೇರಿದಂತೆ ಸುಮಾರು 8 ಅಂಗಡಿಗಳ ರೋಲಿಂಗ್ ಶಟರ್ ಮುರಿದು ಲಕ್ಷಾಂತರ ರೂಪಾಯಿ ದೋಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.  

Trending videos

Back to Top