ಬಿಜೆಪಿ ಸೇರಲ್ಲ: ಭೀಮಾ ನಾಯ್ಕ ಸ್ಪಷ್ಟನೆ
Team Udayavani, Sep 13, 2018, 6:05 AM IST
ಹಗರಿಬೊಮ್ಮನಹಳ್ಳಿ: “ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಯಾರೂ ನನ್ನನ್ನು
ಸಂಪರ್ಕಿಸಿಲ್ಲ. ನಾನು ಬಿಜೆಪಿ ಸೇರೋದಿಲ್ಲ’ ಎಂದು ಶಾಸಕ ಭೀಮಾ ನಾಯ್ಕ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ನ ಹಲವು ಶಾಸಕರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ವದಂತಿ
ಹಬ್ಬಿಸಲಾಗುತ್ತಿದೆ. ಅಲ್ಲದೆ, ವಿನಾಕಾರಣ ತಮ್ಮ ಹೆಸರನ್ನು ಎಳೆದು ತರಲಾಗುತ್ತಿದೆ. ಆದರೆ, ತಾವು ಬಿಜೆಪಿ ಸೇರುವ
ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕೂ ಸರಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿದರು.