ಅನಂತು ಗಾನಬಜಾನ


Team Udayavani, Nov 9, 2018, 6:00 AM IST

33.jpg

ಇಲ್ಲಿಯವರೆಗೆ ತನ್ನ ಶೀರ್ಷಿಕೆ, ಫ‌ಸ್ಟ್‌ಲುಕ್‌ ಪೋಸ್ಟರ್‌ ಮೂಲಕ ಗಮನ ಸೆಳೆಯುತ್ತಿದ್ದ “ಅನಂತು ವರ್ಸಸ್‌ ನುಸ್ರತ್‌’ ಚಿತ್ರದ ಹಾಡುಗಳು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆಯಾದವು. ಇತ್ತೀಚೆಗೆ ನಡೆದ ಅದ್ದೂರಿ ಸಮಾರಂಭದಲ್ಲಿ, ನಟ ಪುನೀತ್‌ ರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ಮಂಗಳಾ ರಾಘವೇಂದ್ರ ರಾಜಕುಮಾರ್‌, ಶ್ರೀಮತಿ ಲಕ್ಷ್ಮೀ, ಗೋವಿಂದರಾಜು, ಹಿರಿಯ ನಟ ದತ್ತಣ್ಣ, ಅರಸು , ಧೀರನ್‌ ರಾಮಕುಮಾರ್‌, ಯುವ ರಾಜಕುಮಾರ್‌, ನಟಿ ಹರಿಣಿ, ಸೇರಿದಂತೆ ಚಿತ್ರರಂಗದ
ಅನೇಕ ಗಣ್ಯರು  ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ತಂತ್ರಜ್ಞರ ಸಮ್ಮುಖದಲ್ಲಿ ಚಿತ್ರದ ಹಾಡುಗಳನ್ನು ಹೊರತರಲಾಯಿತು. ಚಿತ್ರ¨

ಹಾಡುಗಳ ಬಗ್ಗೆ ಮಾತನಾಡಿದ ಪುನೀತ್‌ ರಾಜಕುಮಾರ್‌, “ಚಿತ್ರದ ಹಾಡುಗಳಲ್ಲಿ ಮೆಲೋಡಿ ಹೆಚ್ಚಾಗಿದ್ದು, ಎಲ್ಲ
ಹಾಡುಗಳು ತುಂಬ ಚೆನ್ನಾಗಿ ಮೂಡಿ ಬಂದಿದೆ. ಚಿತ್ರದ ಕಥೆ ಮತ್ತು ಹಾಡುಗಳು ಪ್ರೇಕ್ಷಕರಿಗೂ ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ’ ಎಂದರು. “ಪಿಆರ್‌ಕೆ ಆಡಿಯೋ’ ಚಿತ್ರದ ಆಡಿಯೋ ರೈಟ್ಸ್‌ ಕೊಂಡುಕೊಂಡಿದ್ದು, ಹಾಡುಗಳನ್ನು ಕೇಳುಗರ ಮುಂದೆ ತಂದಿದೆ. ಸುನಾದ್‌ ಗೌತಮ್‌ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ವಿಜಯ್ ಪ್ರಕಾಶ್‌, ನಿನಾಧ ನಾಯಕ್‌, ಕೈಲಾಶ್‌ ಖೇರ್‌, ರಜತ್‌ ಹೆಗ್ಡೆ, ಡಾ.ನಿತಿನ್‌ ಆಚಾರ್ಯ ಮೊದಲಾದ ಗಾಯಕರು ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಚಿತ್ರದಲ್ಲಿ ಖ್ಯಾತ ಉರ್ದು ಕವಿ ಆಮಿರ್‌ ಖುಸ್ರೂ ಅವರ ಜನಪ್ರಿಯ “ಜಿಹಲ್‌ -ಇ-ಮಿಸ್ಕಿನ್‌’ ಘಜಲ್‌ ಮತ್ತು ರಾಷ್ಟ್ರಕವಿ ಕುವೆಂಪು ಅವರ ಪದ್ಯವೊಂದನ್ನು ಬಳಸಿಕೊಳ್ಳಲಾಗಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸುಧೀರ್‌, “ತುಂಬಾ ಚಿಕ್ಕ ಚಿಕ್ಕ ವಿಷಯಗಳನ್ನು ಇಟ್ಟುಕೊಂಡು ಡೈವೋರ್ಸ್ಗಾಗಿ ಕೋರ್ಟ್‌ ಮೆಟ್ಟಿಲೇರುವವರು ಇದ್ದಾರೆ. ಇದೇ ಸಂಗತಿ ಈ ಸಿ ನಿಮಾದ ಕಥೆಗೆ ಕಾರಣವಾಯ್ತು. ಪ್ರೀತಿ, ವಿಶ್ವಾಸ, ನಂಬಿಕೆ, ಸಂಬಂಧಗಳ ಸುತ್ತ ಚಿತ್ರ ಸಾಗುತ್ತದೆ. ಹೊಂದಾಣಿಕೆ ಮಾಡಿಕೊಂಡರೆ ಬದುಕು ಎಷ್ಟು ಸುಂದರವಾಗಿರುತ್ತದೆ ಅನ್ನೋದನ್ನ ಸಿನಿಮಾದಲ್ಲಿ ಹೇಳಿದ್ದೇವೆ’ ಎಂಬ ಚಿತ್ರದ ತಿರುಳನ್ನ ತರೆದಿಡುತ್ತಾರೆ.

ಅಂದಹಾಗೆ, ಡೈವೋರ್ಸ್‌ ನಂತಹ ಗಂಭೀರ ವಿಷಯವನ್ನು ಸಿನಿಮಾದ ಕಥೆಯಲ್ಲಿ ಇಟ್ಟುಕೊಂಡರೂ, ಸಿನಿಮಾ ಮಾತ್ರ ಸಂಪೂರ್ಣ ಕಾಮಿಡಿ ಮತ್ತು ಎಮೋಷನ್ಸ್‌ ಎಳೆಯಲ್ಲಿ ಸಾಗಲಿದೆ ಎನ್ನುತ್ತದೆ ಚಿತ್ರತಂಡ. ಕಿರಿಯರು, ಹಿರಿಯರು ಎನ್ನದೆ ಸಂಪೂರ್ಣ ಫ್ಯಾಮಿಲಿ ಕುಳಿತು ನೋಡಬಹುದಾದ ಸಿನಿಮಾ ಎನ್ನಲು ಅವರು ಮರೆಯುವುದಿಲ್ಲ. “ಮಾಣಿಕ್ಯ ಪ್ರೊಡಕ್ಷನ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಅನಂತು ವರ್ಸಸ್‌ ನುಸ್ರತ್‌’ ಚಿತ್ರಕ್ಕೆ ಸುಧೀರ್‌ ಶಾನುಭೋಗ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿ¨ªಾರೆ. ವಿನಯ್‌ ರಾಜಕುಮಾರ್‌ ಅಭಿನಯದ ಮೂರನೇ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಇದೇ ಮೊದಲ ಬಾರಿಗೆ ವಿನಯ್‌ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ಹುಡುಗನಾಗಿ, ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿನಯ್‌ ಅವರಿಗೆ ಲತಾ ಹೆಗ್ಡೆ ನಾಯಕಿಯಾಗಿ ನುಸ್ರತ್‌ ಫಾತಿಮಾ ಬೇಗ್‌ ಎಂಬ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ರವಿಶಂಕರ್‌, “ಮಠ’ ಗುರುಪ್ರಸಾದ್‌, ಅಶೋಕ್‌ , ಬಿ. ಸುರೇಶ್‌, ಸುಚೀಂದ್ರ ಪ್ರಸಾದ್‌, ನಯನಾ ಮೊದಲಾದ ಕಲಾವಿದರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಭಿಷೇಕ್‌ ಜಿ. ಕಾಸರಗೋಡು ಚಿತ್ರದ ದೃಶ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.”ಅನಂತು ವರ್ಸಸ್‌ ನುಸ್ರತ್‌’ ಚಿತ್ರ ಡಿಸೆಂಬರ್‌ ಅಂತ್ಯದೊಳಗೆ ತೆರೆಗೆ ಬರುವ ಸಾಧ್ಯತೆ
ಇದೆ. 

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.