CONNECT WITH US  

ಮಂಗಳೂರು ದಕ್ಷಿಣ; ಕೊಡಿಯಾಲ್‌ಬೈಲ್‌ ಎಂಎಲ್‌ಎ!

ತುಳು ಚಲನಚಿತ್ರ ಕ್ಷೇತ್ರದಲ್ಲಿ ಯಶಸ್ವಿ ದಾಖಲೆಗಳನ್ನು ಬರೆದ ವಿಜಯ್‌ ಕುಮಾರ್‌ ಕೊಡಿಯಾಲ್‌ ಬೈಲ್‌ ಇನ್ನು ಮುಂದೆ ಶಾಸಕರು! ಅದೂ ಕೂಡ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಎಂಎಲ್‌ಎ. ಇದು ಸತ್ಯ. ಆದರೆ, ಫುಲ್‌ ಟೈಮ್‌ ಶಾಸಕರಲ್ಲ. ಬದಲಾಗಿ ಪಾರ್ಟ್‌ ಟೈಮ್‌ ಎಂಎಲ್‌ಎ!

ಅರೆ, ಎಲೆಕ್ಷನ್‌ಗೆ ನಿಲ್ಲದೆ, ಕೊಡಿಯಾಲ್‌ಬೈಲ್‌ ಎಂಎಲ್‌ಎ ಆಗುವುದೇ ಇಂಟ್ರೆಸ್ಟಿಂಗ್‌. ಅಂದಹಾಗೆ, ಇಲ್ಲಿ ಹೇಳಲು ಹೊರಟಿರುವ ವಿಷಯ ರಾಜೇಶ್‌ ಬ್ರಹ್ಮಾವರ್‌ ನಿರ್ಮಾಣದ ಬಹುನಿರೀಕ್ಷಿತ ಸಿನೆಮಾ 'ಕಟಪಾಡಿ ಕಟ್ಟಪ್ಪೆ'ಯಲ್ಲಿ ಕೊಡಿಯಾಲ್‌ಬೈಲ್‌ ಅವರ ಶಾಸಕನ ಪಾತ್ರದ ಬಗ್ಗೆ. ನೆಗೆಟಿವ್‌ ರೋಲ್‌ನಲ್ಲಿ ಕಂಡುಬರುವ ಶಾಸಕರ ಪಾತ್ರದಲ್ಲಿ ಕೊಡಿಯಾಲ್‌ ಬೈಲ್‌ ಕಾಣಿಸಲಿದ್ದಾರೆ. ವಿಶೇಷ ಅಂದರೆ, ಕೊಡಿಯಾಲ್‌ಬೈಲ್‌ ಮೊದಲ ಬಾರಿಗೆ ಸಿನೆಮಾದಲ್ಲಿ ಸ್ವತಃ ಆ್ಯಕ್ಟಿಂಗ್‌ ಗೆ ಮುಂದಾಗಿದ್ದಾರೆ. ಸ್ವಲ್ಪ ನೆಗೆಟಿವ್‌ ಹಾಗೂ ಸ್ವಲ್ಪ ಕಾಮಿಡಿ ಲುಕ್‌ನಲ್ಲಿ ಈ ಪಾತ್ರ ಬರಲಿದೆ. 

ಅಂದಹಾಗೆ, ಬರ್ಕೆಯದ್ದು ಅವರು ಕೂಡ ಇದೇ ಚಿತ್ರದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಪಾತ್ರ ಮಾಡಿದ್ದಾರೆ. ಉಳಿದಂತೆ, ಬಿರುವೆರ್‌ ಕುಡ್ಲದ ಉದಯ್‌ ಪೂಜಾರಿ, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು ಮುಂತಾದವರು ಬಣ್ಣ ಹಚ್ಚಲಿದ್ದಾರೆ. ಜೆ.ಪಿ.ತೂಮಿನಾಡ್‌ ಈ ಚಿತ್ರದ ನಿರ್ದೇಶಕರು.

ಇಂದು ಹೆಚ್ಚು ಓದಿದ್ದು

Trending videos

Back to Top