CONNECT WITH US  

ವಿಚಾರಣೆ ಗೆ ಬಂದ ವೇಳೆ ಕೋರ್ಟ್‌ ಕಟ್ಟಡದಿಂದ ಜಿಗಿದ ಕೈದಿ ದಾರುಣ ಸಾವು 

ಸಾಂದರ್ಭಿಕ ಚಿತ್ರ

ತುಮಕೂರು: ವಿಚಾರಣೆಗಾಗಿ ಕೋರ್ಟ್‌ಗೆ ಕರೆ ತಂದಿದ್ದ ವೇಳೆ 3ನೇ  ಮಹಡಿಯಿಂದ ಕೈದಿಯೊಬ್ಬ ಜಿಗಿದಿದ್ದು,ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. 

ಕಟ್ಟಡದಿಂದ ಜಿಗಿದಿದ್ದ ಕೊಲೆ ಯತ್ನ ಆರೋಪಿ ಚಂದ್ರಯ್ಯ(29) ಸ್ಥಿತಿ ಗಂಭೀರವಾಗಿತ್ತು. ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ್ದಾನೆ. 

ತುಮಕೂರು ಕೇಂದ್ರ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆತಂದಿದ್ದ ವೇಳೆ ಏಕಾಏಕಿ 3 ನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾನೆ ಎಂದು ತಿಳಿದು ಬಂದಿದೆ. 

ಹಿರಿಯ ಪೊಲೀಸರು ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. 

Trending videos

Back to Top