ಹಗಲು-ರಾತ್ರಿ ಮಂಗ-ಹಂದಿಗಳ ಕಾಟ


Team Udayavani, Dec 16, 2018, 3:23 PM IST

16-december-15.gif

ಹೊನ್ನಾವರ: ಜನ ಕಾಡಿಗೆ ಹೋಗಿ ಅತಿಕ್ರಮಣ ಮಾಡಿ ಕುಟುಂಬ ವಿಸ್ತರಿಸಿಕೊಂಳ್ಳುತ್ತಿದ್ದಂತೆ ಕಾಡಿನಲ್ಲಿದ್ದ ಮಂಗ, ಹಂದಿಗಳು ಪೇಟೆಗೆ ಬಂದು ತಮ್ಮ ಕುಟುಂಬ ವಿಸ್ತರಿಸಿಕೊಂಡಿವೆ. ಇವುಗಳನ್ನು ಕೊಲ್ಲುವುದು ಅಪರಾಧವೆಂಬ ಕಾನೂನು ಇರುವುದರಿಂದ ಇವುಗಳ ಸಂಖ್ಯೆ ಹೆಚ್ಚಿ ವರ್ತನೆ ಅಂಕೆ ಮೀರಿದೆ.

ನಗರದ ಹೊರವಲಯದ ಮರಗಳ ಮೇಲೆ ವಾಸ್ತವ್ಯ ಮಾಡುವ ಮಂಗಗಳು ದೂರವಾಣಿ, ಟಿವಿ ಕೇಬಲ್‌ ಗಳ ಮೇಲೆ ನಡೆಯುತ್ತಾ ತೆಂಗಿನ ಮರ ಕಂಡಲ್ಲಿ ಏರಿ ಕುಳಿತು ಬೆಳೆದ, ಎಳೆಯ ಕಾಯಿಗಳನ್ನು ಕಿತ್ತು ಅರೆಬರೆ ತಿಂದು ಎಸೆಯುತ್ತವೆ. ಗರ್ನಲ್‌ ಹೊಡೆದರೆ, ನಾಯಿ ಬಿಟ್ಟರೆ ಹೆದರುವುದಿಲ್ಲ. ಬಂದೂಕು ಕಂಡರೆ ತೆಂಗಿನ ಗರಿಯ ಮಧ್ಯೆ ಕೂರುತ್ತವೆ. ಹಳ್ಳಿಗಳಲ್ಲಿ ಇವುಗಳ ಕಾಟ ತಡೆಯಲಾರದೆ ಕೊಲ್ಲಿಸಿದವರಿದ್ದಾರೆ. ಹಿಡಿಸಿ ದೂರ ಬಿಟ್ಟವರಿದ್ದಾರೆ. ಯಾವುದೂ ಪರಿಣಾಮಕಾರಿಯಾಗಿಲ್ಲ. ಮಂಗ ಬಿಟ್ಟು ಉಳಿದದ್ದು ನಮಗೆ ಎಂದು ಸುಮ್ಮನಿದ್ದಾರೆ. ಪೇಟೆಗೆ ಬಂದ ಮನುಷ್ಯನಂತೆ ಪೇಟೆಗೆ ಬಂದ ಮಂಗಗಳು ಕಾಡಿಗೆ ಹೋಗುವುದಿಲ್ಲ.

ಗುಡ್ಡ, ಬೆಟ್ಟ ಅಲೆದಾಡುತ್ತಾ ಗಡ್ಡೆ, ಗೆಣಸು, ತೆಂಗಿನ ಸಸಿ ತಿಂದು ಹೊಟ್ಟೆ ತುಂಬಿಕೊಳ್ಳುತ್ತಿದ್ದ ಕಾಡು ಹಂದಿಗಳಿಗೆ ಗಡ್ಡೆ, ಗೆಣಸು ಸಿಗುತ್ತಿಲ್ಲ, ತೆಂಗಿನ ಸಸಿಯನ್ನು ಹೇಗೋ ರೈತರು ರಕ್ಷಿಸುತ್ತಾರೆ. ಆದ್ದರಿಂದ ಪೇಟೆಗೆ ಬಂದಿವೆ. ಊರ ಜನ ತ್ಯಾಜ್ಯ ಎಸೆಯಬಾರದು ಎಂದು ಉಚಿತವಾಗಿ ಪ.ಪಂ ಎರಡು ಬಕೇಟ್‌ ಕೊಟ್ಟಿದೆ, ನಿತ್ಯ ವಾಹನ ಕಳಿಸುತ್ತದೆ. ಆದರೂ ಜನ ತ್ಯಾಜ್ಯವನ್ನು ಬೆಳಗಿನ ಜಾವ ರಸ್ತೆಗೆ ಎಸೆಯುವುದನ್ನು ಬಿಟ್ಟಿಲ್ಲ. ಬಕೇಟನ್ನು ಬಟ್ಟೆತೊಳೆಯಲು ಬಳಸುತ್ತಾರೆ. ಬೈಕ್‌, ಕಾರು, ಹೊಟೇಲ, ಗೂಡಂಗಡಿ ಇದ್ದವರು ತ್ಯಾಜ್ಯವನ್ನು ಚೀಲ ತುಂಬಿ ಹೆದ್ದಾರಿಯ ಅಕ್ಕಪಕ್ಕಕ್ಕೆ ಎಸೆದು ಯಾರು ಕಂಡರೋ ಎಂದು ಹಿಂದೆಮುಂದೆ ನೋಡಿ ಹೊರಟು ಹೋಗುತ್ತಾರೆ. ಇದು ಕಾಡು ಹಂದಿಗಳಿಗೆ ಸಮೃದ್ಧ ಆಹಾರವಾಗಿದೆ. ಪ್ರಭಾತನಗರದಿಂದ ಆರಂಭವಾಗಿ ಬಂದರದವರೆಗೆ ಬೆಳಗಿನಜಾವ ಹಂದಿಗಳ ದರ್ಬಾರು. ಒಂಟಿಯಾಗಿ, ಗುಂಪಾಗಿ, ಮರಿಗಳೊಂದಿಗೆ ಓಡಾಡುವ ಹಂದಿಗಳು ಮುಂಜಾನೆ ವಾಕಿಂಗ್‌ಗೆ ಹೋಗುವವರ ಮೈಮೇಲೆ ಎರಗುವ ಸಂಭವ ಇದೆ. ಆರೊಳ್ಳಿ ತಿರುವಿನಲ್ಲಿ ಚಿರತೆಯನ್ನು ಕಂಡಿರುವುದಾಗಿ ವಾಹನ ಚಾಲಕರೊಬ್ಬರು ಹೇಳಿದ್ದು ನಸುಕಿನಲ್ಲಿ ಓಡಾಡುವವರನ್ನು ಎಚ್ಚರಿಸಿದ್ದಾರೆ. ಇವುಗಳ ಕಾಟದಿಂದ ಹಳ್ಳಿಗಳಲ್ಲಿ ಅಡಕೆ, ತೆಂಗು, ಭತ್ತ, ಕಬ್ಬು, ತರಕಾರಿ, ಹಣ್ಣ-ಹಂಪಲು ಯಾವುದನ್ನು ಬೆಳೆದರೂ ಪೂರ್ತಿ ರೈತನ ಕೈ ಸೇರುವುದಿಲ್ಲ. ಸರ್ಕಾರವು ಕಾಡು ಪ್ರಾಣಿಗಳ ಪರವಾಗಿದೆ. ಇವುಗಳ ಸಂತತಿ ಹೀಗೆ ಬೆಳೆದರೆ ಬದುಕುವುದು ಕಷ್ಟವಾಗಲಿದೆ.

ಅರಣ್ಯ ಇಲಾಖೆ ಹಾನಿಗೆ ಪರಿಹಾರ ಕೊಡುತ್ತದೆಯೇ ವಿನಃ ಶಾಶ್ವತ ಪರಿಹಾರ ಹುಡುಕುವುದಿಲ್ಲ. ರೈತರ ಈ ಕಷ್ಟವನ್ನು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಗಮನ ಸೆಳೆದಾಗ ಇಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ಧ್ವನಿ, ಬೆಳಕು ಪ್ರಯೋಗಿಸಿ ಪ್ರಾಣಿಗಳನ್ನು ಕಾಡಿಗೆ ಕಳಿಸುವಂತ ಉಪಕರಣ ಶೋಧಿಸಲು ತಮ್ಮ ಇಂಜಿನಿಯರಿಂಗ್‌ ಕಾಲೇಜುಗಳಿಗೆ ಆದೇಶ ನೀಡಿದ್ದಾರೆ. ಇದೊಂದು ಆಶಾದಾಯಕ ಸಂಗತಿ.

ಜೀಯು, ಹೊನ್ನಾವರ 

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

Bhatkal: ಇಬ್ಬರು ಸಮುದ್ರಪಾಲು

Bhatkal: ಇಬ್ಬರು ಸಮುದ್ರಪಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.