ಗಂಧದ ಚಿತೆ


Team Udayavani, Nov 12, 2017, 6:45 AM IST

gandada-chite.jpg

ತೀರಿಹೋದ ಹೆಂಗಸಿಗೆ ಗಂಧದ ಚಿತೆ ತಯಾರಿಸಿಕೊಟ್ಟದ್ದು ಅವರ ಸಿರಿವಂತನಾದ ದೊಡ್ಡ ಮಗನಾಗಿದ್ದ. ದಕ್ಷಿಣ ದಿಕ್ಕಿನ ಗ¨ªೆಯಲ್ಲಿ ಸಾವಿರಾರು ಚೆಂಡುಮಲ್ಲಿಗೆಯ ಹೂಗಳು ಅರಳಿದಂತೆ ಬೆಂಕಿ ಉರಿಯುವುದನ್ನು ನೋಡಿಕೊಂಡೇ ಆಗಿತ್ತು, ಸಣ್ಣಮಗ ತನ್ನ ಮಡದಿ ಮತ್ತು ಮಗುವಿನ ಜೊತೆ ಮೆಟ್ಟಿಲ ಬಾಗಿಲು ದಾಟಿ ಒಳಬಂದಿದ್ದು.

ನೆರೆಹೊರೆಯವರೂ, ಸಂಬಂಧಿಕರೂ ಹಿಂತಿರುಗಲು ತಯಾರಾಗುತ್ತಿದ್ದರು. ಸಣ್ಣಮಗನನ್ನೂ ಆತನ ಚೆಲುವೆಯಾದ ಹೆಂಡತಿಯನ್ನೂ ಆಕೆ ಎತ್ತಿಕೊಂಡಿದ್ದ ಹೆಣ್ಣುಮಗುವನ್ನೂ ನೋಡಿದ್ದರಿಂದಲೋ ಏನೋ ಅವರು ಅಲ್ಲಿ ಇನ್ನೂ ಸ್ವಲ್ಪ ಹೊತ್ತು ತಂಗಲು ನಿರ್ಧರಿಸಿದರು.

ಸಣ್ಣಮಗ ಮತ್ತೆ ಮತ್ತೆ  ಚಿತೆಯ ಕಡೆಗೆ ಒಣಗಿದ ಕಣ್ಣುಗಳಿಂದ ನೋಡಿದ. 
“”ನಾನು ಬರುವವರೆಗೆ ಕಾಯಬಹುದಿತ್ತÇÉಾ?” ಆತ ತನ್ನ ಅಣ್ಣಂದಿರಲ್ಲಿ ಕೇಳಿದ.
“”ಅಮ್ಮ ತೀರಿಕೊಂಡದ್ದು ನಿನ್ನೆ ಸಾಯಂಕಾಲ. ಎಷ್ಟು ಹೊತ್ತು ಕೆಡದಂತೆ ಇಡಬಹುದು? ನೀನು ಮಧ್ಯಾಹ್ನದ ಮೊದಲು ಬರುತ್ತೀಯಾ ಎಂದು ನಾವು ಎದುರು ನೋಡುತ್ತಿ¨ªೆವು” ದೊಡ್ಡ ಮಗ ಹೇಳಿದ.

ಎರಡೋ ಮೂರೋ ದಿನ ûೌರ ಮಾಡಿರದಿದ್ದರಿಂದ ಆತನ ಮುಖದ ಅಡಿಭಾಗ ಕಪ್ಪುಗಟ್ಟಿತ್ತು. ಆತ ಒಂದು ಪಂಚೆ ಮತ್ತೆ ಬನಿಯನ್‌ ಧರಿಸಿದ್ದ. ಆತನ ಹತ್ತು ವಯಸ್ಸು ಬರುವ ಮಗಳು ಸಣ್ಣಮಗನ ಮಗುವನ್ನು ನೋಡಿ ಮುಗುಳ್ನಕ್ಕಳು. 
“”ಅಂಜಲೀ, ಅಂಜೂ ನನ್ನನ್ನು ನೋಡು, ನನ್ನ ನೋಡಿ ನಗು…” ಅವಳು ಮಗುವಿಗೆ ಹೇಳಿದಳು, ಮಗು ನೀರಸದಿಂದ ಮುಖತಿರುಗಿಸಿತು.

“”ಅಮ್ಮನ ಮುಖ ಇನ್ನು ನೋಡಲು ಸಾಧ್ಯವಿಲ್ಲವಲ್ಲ. ನಾನು ಬೆಳಗ್ಗೆ ವಿಮಾನ ಹತ್ತಲು ಏರ್‌ಪೋರ್ಟಿಗೆ ತಲುಪಿ¨ªೆ. ವಿಮಾನದಲ್ಲಿ ಯಾರೋ ಒಬ್ಬ ಒಂದು ಬಾಂಬ್‌ ಅಡಗಿಸಿಟ್ಟಿದ್ದ ಎಂದು ವಿಮಾನ ನಿಲ್ದಾಣಕ್ಕೆ ಒಬ್ಬ ಫೋನ್‌ ಮಾಡಿ ಹೇಳಿದ. ನಂತರ ಸಾಮಾನುಗಳನ್ನೆಲ್ಲ ವಿಮಾನದಿಂದ ಹೊರಗೆ ತೆಗೆದರು. ನಮ್ಮನ್ನು ಕೆಳಗಿಳಿಸಿ ಮತ್ತೆ ಶರೀರವಿಡೀ ಚೆಕ್‌ ಮಾಡಿದರು. ಮೂರೂವರೆ ಗಂಟೆಯ ನಂತರ ವಿಮಾನ ಮತ್ತೆ ಹೊರಟಿದ್ದು” ಸಣ್ಣಮಗ ಹೇಳಿದ. “”ಅಮ್ಮನ ಮುಖ ನೀನು ನೋಡದಿದ್ದದ್ದು ಒಳ್ಳೆಯದೇ ಆಯಿತು. ನೀನು ನೆನಪಿಟ್ಟಿರುವ ಆ ಚಂದದ ಮುಖ ಆಗಿರಲಿಲ್ಲ , ಸಾಯುವಾಗ.

ಏನೋ ನೋಡಿ ಭಯಪಟ್ಟಂಥ ಒಂದು ಲಕ್ಷಣ ಮುಖದಲ್ಲಿತ್ತು. ಬಣ್ಣ ಕಪ್ಪಾಯಿತು. ಕಣ್ಣುಗಳು ಹೊರಗೆ ನೆಗೆದು ಕಂಡುಬಂತು. ಆ ಕೊನೆಯ ನಿಮಿಷದ ನೋಟ ನೋಡದ ನೀನು ಭಾಗ್ಯವಂತ. ನನಗೆ ಅದು ಮರೆಯಲು ಸಾಧ್ಯವೇ ಇಲ್ಲ” ಎರಡನೆಯ ಮಗ ಹೇಳಿದ.

“”ಅಪ್ಪು ಹೇಳುವುದು ಸರಿ. ಆ ಮುಖದ ಭಾವನೆ ನೋಡಬಾರದಿತ್ತು ಎಂದು ನನಗೆ ತೋರಿತು. ದಿಟದಲ್ಲಿ ಈ ವಯಸ್ಸಲ್ಲೂ ಅಮ್ಮ ಎಷ್ಟು ಚಂದವಿದ್ದಳು! ಆದರೆ ಸಾಯುವಾಗ ಮತ್ತೂಬ್ಬ ವ್ಯಕ್ತಿಯಾಗಿ ಬದಲಾಗಿದ್ದಳು ಅಮ್ಮ” ದೊಡ್ಡ ಮಗನ ಹೆಂಡತಿ ಹೇಳಿದಳು.

“”ಅಮ್ಮ ನನ್ನನ್ನು ಕೇಳಿದಳೇ?” ಕೊನೆಯ ಮಗ ಕೇಳಿದ.
“”ಅದು ಹೇಗೆ? ಅಮ್ಮನಿಗೆ ಎರಡು ದಿನ ಪ್ರಜ್ಞೆಯಿರಲಿಲ್ಲ. ಮತ್ತೆ, ಮರಣದ ಸಮಯದಲ್ಲಿ ಮಾತ್ರ ಅವರು ಕಣ್ಣುತೆರೆದು ಸುತ್ತಲೂ ನೋಡಿದ್ದು. ಯಾರನ್ನೋ ಹುಡುಕುವಂತೆ ಅನಿಸಿತು. ನಿನ್ನನ್ನಾಗಿರಬಹುದು” ದೊಡ್ಡ ಮಗ ಹೇಳಿದ.
ನಾನು ಅದೃಷ್ಟಹೀನ ಸಣ್ಣಮಗ ಗುಣುಗುಣಿಸಿದ.

“”ಅಮ್ಮನಿಗೆ ಉಸಿರಾಟದ ತೊಂದರೆ ಶುರುವಾದಾಗ ನಾನು ಮೈಸೂರಿಗೆ ಎಸ್‌ಟಿಡಿ ಕರೆದೆ- ತಂಗಯ್ಯನಿಗೆ. ಗಂಧದ ಕಟ್ಟಿಗೆಗಳನ್ನು ಕಳಿಸಬೇಕೆಂದು ನಾನು ಹೇಳಿದೆ. ರಾತ್ರಿಯೇ ಲಾರಿಯಲ್ಲಿ ಕಳುಹಿಸಿದ.ಇಲ್ಲಿಗೆ ತಲುಪಿದಾಗ ಹತ್ತೂಕಾಲು ಗಂಟೆ. ಕೂಡಲೇ ಶವಸಂಸ್ಕಾರ ಆರಂಭವಾಯಿತು” ದೊಡ್ಡಮಗ ಹೇಳಿದ.

“”ದಾರಿಯಲ್ಲಿ ಮಳೆ ಬರಬಹುದು ಎಂದು ಭಯವಾಯಿತು. ಮಳೆಯಲ್ಲಿ ನೆನೆದರೆ ಕಟ್ಟಿಗೆ ಉರಿಯಲಾರದು. ಟರ್ಪೊàಲಿನ್‌ ಇದ್ದೂ ಫ‌ಲವಿಲ್ಲ. ಭಾರೀ ಮಳೆಯಾದರೆ ಸ್ವಲ್ಪ ಒ¨ªೆಯಾಗುತ್ತದೆ. ಅದೃಷ್ಟಕ್ಕೆ ಮಳೆ ಸುರಿಯಲಿಲ್ಲ” ಎರಡನೆಯ ಮಗ ಹೇಳಿದ.

“”ಅಪ್ಪ ಎಲ್ಲಿ?” ಕೊನೆಯ ಮಗ ಕೇಳಿದ.
“”ಅಪ್ಪ ಸ್ನಾನ ಮಾಡಲು ಹೊರಟು ನಿಂತಿದ್ದರು. ಅಪ್ಪನಿಗೆ ಶೀತ ಮತ್ತು ಜ್ವರವಿದೆ. ಸ್ನಾನ ಮಾಡುವುದು ಬೇಡ ಎಂದು ಹೇಳಿನೋಡಿದೆ. ಅಪ್ಪ ಯಾರು ಹೇಳಿದರೂ ಕೇಳುವುದಿಲ್ಲ. ಅಮ್ಮನಿಗೆ ಮಾತ್ರ ಅಪ್ಪನನ್ನು ನಿಯಂತ್ರಿಸಲು ಸಾಧ್ಯವಿತ್ತು” ದೊಡ್ಡ ಮಗನ ಹೆಂಡತಿ ಹೇಳಿದಳು.

“”ಅಮ್ಮ ಇಲ್ಲದೆ ಈ ದೊಡ್ಡಮನೆಯಲ್ಲಿ ಅಪ್ಪ ಹೇಗೆ ಬದುಕುತ್ತಾರೆ?” ಸಣ್ಣಮಗನಾಕೆ ಕೇಳಿದಳು.
“”ಬದುಕದೆ ಮಾಡುವುದೇನು? ಈ ಇಳಿವಯಸ್ಸಿನಲ್ಲಿ ಅಪ್ಪನಿಂದ ಪ್ರಯಾಣ ಮಾಡಿಸುವುದು ಸರಿಯಲ್ಲ” ದೊಡ್ಡಮಗ ಹೇಳಿದ.

“”ನಾನು ಹೇಳಿದೆ ಎಂದು ತಪ್ಪು ತಿಳಿಯಬೇಡ. ಅಣ್ಣ, ನೀನು  ಅಪ್ಪನನ್ನು  ಕರೆದೊಯ್ಯುವುದು ಒಳ್ಳೆಯದು” ಎರಡನೆಯ ಮಗ ಹೇಳಿದ.  

“”ಬಾಂಬೆಗಾ? ಅಪ್ಪನಿಗೆ ಪರಾಶ್ರಯವಿಲ್ಲದೆ ಬದುಕಲಾಗದು. ಕಳೆದ ಬಾರಿ ನೋಡಿದರಿಂದಲೂ ಹೆಚ್ಚಿದೆ ಅಪ್ಪನ ವಾತದ ನಡುಗುವಿಕೆ.ಊಟ ಮಾಡುವಾಗ ಶರ್ಟಿಗೆ ಅನ್ನ-ಪದಾರ್ಥ ಬೀಳುತ್ತದೆ…” ದೊಡ್ಡ ಮಗ ಹೇಳಿದ.

“”ಬಾಂಬೆಯಲ್ಲಿ ಸಮರ್ಥರಾದ ನ್ಯೂರೋಸರ್ಜನ್ಸ್‌ ಇರುತ್ತಾರೆ. ಅಪ್ಪನನ್ನು ಚಿಕಿತ್ಸೆ ನೀಡಿ ಅವರು ಗುಣಪಡಿಸುತ್ತಾರೆ” ಎರಡನೆಯ ಮಗ ಹೇಳಿದ.

“”ಈ ಅಪ್ಪು ಹೇಳುವುದು ಎಂಥಾ ಅಸಂಬದ್ಧ! ನಾನು ಮತ್ತೆ ವಿಮಲಾ ಬೆಳಗ್ಗೆಯೇ ಫ್ಯಾಕ್ಟರಿಗೆ ಹೊರಟುಹೋಗುತ್ತೇವೆ. ಮಗು ಅವಳ ಶಾಲೆಗೂ ಹೋಗುತ್ತದೆ. ನಮಗಂತೂ ಮಿಕ್ಕ ದಿನಗಳಲ್ಲೂ ಡಿನ್ನರ್‌ ಇರುತ್ತದೆ. ಮನೆಗೆ ಬರುವಾಗ ಅರ್ಧರಾತ್ರಿ ಮೀರಿರುತ್ತದೆ. ಕೆಲಸದವರನ್ನು ನಂಬಿ ನಾವು ಅಪ್ಪನನ್ನು ಮನೆಯಲ್ಲಿ ಬಿಟ್ಟು ಹೋದರೆ ಊರವರು ಏನು ಹೇಳುತ್ತಾರೆ?” ದೊಡ್ಡ ಮಗ ದನಿಯೇರಿಸಿ ಕೇಳಿದ. “”ನಿಜ, ಅಪ್ಪ ಬಾಂಬೆ ನಗರವನ್ನು ದ್ವೇಷಿಸದೇ ಇರಲಾರರು” ದೊಡ್ಡ ಮಗನ ಹೆಂಡತಿ ಹೇಳಿದಳು. 

“”ಅಪ್ಪ ಆ ನಗರದಲ್ಲಿ ನಲವತ್ತು ವರ್ಷ ವಾಸವಿದ್ದರು ಎಂಬ ಸತ್ಯ ನಿಮಗೆ ಮರೆತು ಹೋಯ್ತಾ?” ಎರಡನೆಯವನು ಕೇಳಿದ. 

“”ಅಪ್ಪ ನೋಡಿದ ಬಾಂಬೈ ಅಲ್ಲ ಈಗಿನ ಮುಂಬೈ. ಸೂಜಿ ಚುಚ್ಚಲೂ ಜಾಗವಿಲ್ಲ. ದಾರಿಯಿಡೀ ಜನರು. ರೋಡ್‌ಕ್ರಾಸ್‌ ಮಾಡುವಾಗ ಭಯದಿಂದ ನನ್ನ ಕಾಲು ಥರಗುಟ್ಟುತ್ತದೆ” ದೊಡ್ಡ ಮಗನ ಹೆಂಡತಿ ಹೇಳಿದಳು.

“”ರೋಡ್‌ ಕ್ರಾಸ್‌ ಮಾಡುವಾಗ ನನ್ನ ಕೈ ಐಸಿನಂತೆ ತಣ್ಣಗಾಗುತ್ತದೆ” ಹತ್ತು ವರ್ಷ ಪ್ರಾಯದ ಹುಡುಗಿ ಹೇಳಿದಳು.
“”ಅಮ್ಮನ ಕಪಾಟುಗಳಿಗೆ ಬೀಗ ಹಾಕಿಯಾಯಿತೆ?” ಸಣ್ಣಮಗ ದೊಡ್ಡ ಮಗನ ಹೆಂಡತಿಯಲ್ಲಿ ಕೇಳಿದ. ಆಕೆ ತಲೆಯಾಡಿಸಿದಳು.

“”ಅಮ್ಮ ಹೇಳಿದ್ದಳು, ವಜ್ರದ ಕಿವಿಯೋಲೆ ನನ್ನ ಮಗಳಿಗೆ ಕೊಡಬಹುದು- ಎಂದು. ಅವಳಿಗೆ ಅಮ್ಮನ ಹೆಸರÇÉಾ ನಾವು ಇಟ್ಟಿದ್ದು?” ದೊಡ್ಡ ಅಣ್ಣ ಕೇಳಿದ.

“”ನಿನ್ನ ಮಗುವಿಗೆ ಅಂಜು ಎಂಬ ಹೆಸರÇÉಾ ನೀನು ಇಟ್ಟದ್ದು?” ದೊಡ್ಡ ಅಣ್ಣ ಕೇಳಿದ.
“”ಅಂಜು ಎಂದು ಕರೆಯುತ್ತೇವೆ. ಆದರೆ ಅವಳ ನಿಜವಾದ ಹೆಸರು ಅಮ್ಮನ ಹೆಸರು- ಸೌದಾಮಿನಿ” ಕೊನೆಯ ಮಗ ಹೇಳಿದ. 

“”ಕಿವಿಯೋಲೆ ಅಂಜುವಿಗೆ ಕೊಡುತ್ತೇನೆ ಎಂದು ಅಮ್ಮ ಯಾವತ್ತೂ ನನ್ನಲ್ಲಿ ಹೇಳಿರಲಿಲ್ಲ. ಹಾಗೆ ಒಂದು ಆಸೆ ಇರುತ್ತಿದ್ದರೆ ಅಮ್ಮ ನಮ್ಮ ಜೊತೆ ಹೇಳುತ್ತಿದ್ದಳು” ದೊಡ್ಡ ಮಗ ಹೇಳಿದ.

“”ನಾನು ಕಿವಿಯೋಲೆ ಬೇಕು ಎಂದು ಹಠ ಮಾಡುತ್ತಿಲ್ಲ. ಅಮ್ಮ ನನ್ನ ಮಗಳಿಗೆ ಕೊಡುತ್ತೇನೆ ಎಂದಿದ್ದಳು. ಅದು ಸುಮ್ಮನೇ ನೆನಪು ಬಂತು”

ಅವರೆಲ್ಲ ಕುಳಿತಿದ್ದದ್ದು ಊಟದ ಮೇಜಿನ ಸುತ್ತಲೂ. ಕಪ್ಪುಗಳಲ್ಲಿ ಬಾಕಿ ಬಂದ ಚಹಾದ ಮೇಲೆ ನೊಣಗಳು ಮುತ್ತಿಹಾರುತ್ತಿದ್ದವು.

ಸಣ್ಣಮಗನ ಮಡದಿ ತನ್ನ ಜಂಬದ ಚೀಲದಿಂದ ಅರ್ಧ ತುಂಬಿಸಿದ ಒಂದು ಮೊಲೆಹಾಲಿನ ಬಾಟಲನ್ನು ಹೊರತೆಗೆದಳು. ಮಡಿಲಲ್ಲಿದ್ದ ಮಗುವಿಗೆ ಹಾಲೂಡಿಸತೊಡಗಿದಳು.

“”ಈಗಲೂ ಹಾಲು ಮಾತ್ರ ಉಣಿಸುವುದೆ? ಒಂದು ವರ್ಷ ತುಂಬಿತÇÉಾ?” ಎರಡನೆಯ ಮಗನ ಹೆಂಡತಿ ಕೇಳಿದಳು.

“”ನಡುವಲ್ಲಿ ಫಾರೆಕ್ಸ್‌ ಕೊಡುತ್ತೇನೆ. ಪ್ರಯಾಣದ ಸಂದರ್ಭದಲ್ಲಿ ಹಾಲೇ ಅನುಕೂಲ” ಮಗುವಿನ ತಾಯಿ ಉತ್ತರಿಸಿದಳು.
“”ಅಮ್ಮನ ವಜ್ರದ ಕಿವಿಯೋಲೆ ಬ್ಲೂಜಾಗರ್‌. ಈಗ ತಪಸ್ಸುಮಾಡಿದರೂ ಕಾಣಲೂ ಕೂಡ ಸಿಗದ ಕಲ್ಲುಗಳವು. ಕಾಮನಬಿಲ್ಲಿನ ಎÇÉಾ ಬಣ್ಣಗಳನ್ನೂ ಅದರಲ್ಲಿ ನೋಡಬಹುದು” ದೊಡ್ಡ ಮಗನ ಹೆಂಡತಿ ಹೇಳಿದಳು.

ಮೂಲ; ಕಮಲಾ ದಾಸ್‌
ಅನುವಾದ : ಕೃಷ್ಣಮೂರ್ತಿ ಪಿ. ಎಸ್‌.

ಟಾಪ್ ನ್ಯೂಸ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.