ವಿಶ್ವ ಸಂ-ವಾದಿನಿ ಶೃಂಗ


Team Udayavani, Jan 21, 2018, 6:15 AM IST

music.jpg

ಹಾರ್ಮೋನಿಯಂ 19ನೆಯ ಶತಮಾನದಲ್ಲಿ ಯುರೋಪ್‌ನಿಂದ ನಮ್ಮ ದೇಶಕ್ಕೆ ಬಂದ ಗಾಳಿ(ಸುಷಿರ) ವಾದ್ಯ. ಈ ವಾದ್ಯದ ಗುಣಧರ್ಮ ನಮ್ಮ ಭಾರತೀಯ ಸಂಗೀತದಲ್ಲಿನ ಗುಣಧರ್ಮಕ್ಕಿಂತ ಬೇರೆಯದೇ ಆಗಿದ್ದರೂ ಇಂದು ಹಾರ್ಮೋನಿಯಂ ಇಲ್ಲದ ಗಾಯನದ ಕಚೇರಿಯೊಂದನ್ನು ಊಹಿಸಲಾಗದಷ್ಟು ನಮ್ಮ ಸಂಗೀತದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.
ಭಾರತೀಯ ಸಂಗೀತ ಹಾಗೂ ಹಾರ್ಮೋನಿಯಂ ಬಗೆಗಿನ‌ ಹಲವು ಚರ್ಚೆ-ವಿವಾದಗಳ ಮಧ್ಯೆಯೂ ಸಂಗೀತ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಪಡೆದಿರುವ ಈ ವಾದ್ಯದ ಕುರಿತಾದ ಚಾರಿತ್ರಿಕವೆನಿಸುವ ಕಾರ್ಯಕ್ರಮವೊಂದು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು.
 

ಹಿರಿಯ ಹಾರ್ಮೋನಿಯಂ ವಿದ್ವಾಂಸರಾದ ಡಾ.ರವೀಂದ್ರ ಕಾಟೋಟಿಯವರ ಬಹುಕಾಲದ ಪ್ರಯತ್ನದ ಫ‌ಲವಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಮೂರುದಿನ ಗಳ ಕಾಲ ನಡೆದ ಈ ವಿಶ್ವ ಸಂವಾದಿನಿ ಶೃಂಗ (World Harmonium Summit) ಮೊದಲೆರಡು ದಿನ ಕೃಷ್ಣದೇವರಾಯ ಕಲಾಮಂದಿರ ಹಾಗೂ ಮೂರನೆಯ ದಿನ ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮ, ಏಕಕಾಲಕ್ಕೆ ದೇಶದೆÇÉೆಡೆ ಇರುವ ಸಂಗೀತಾಸಕ್ತರ ಗಮನ ಸೆಳೆದಿದೆ ಹಾಗೂ ಕುತೂಹಲ ಕೆರಳಿಸಿದೆ. 

ಮೂರು ದಿನಗಳಲ್ಲಿ ಬರಿಯ ಹಾರ್ಮೋನಿಯಂ ಸ್ವತಂತ್ರವಾದನ ಮಾತ್ರವಲ್ಲದೇ, ಚರ್ಚೆ, ಸಂಶೋಧನೆ, ಪ್ರಯೋಗಗಳೊಂದಿಗೆ ಶತ ಹಾರ್ಮೋನಿಯಂ ವಾದನಗಳು ಒಡಗೂಡಿದ ಹಾರ್ಮೋನಿಯಂ ಬಗ್ಗಿನ ಸಮಗ್ರ ನೋಟವನ್ನು ನೀಡಲಾಯಿತು. ಹೆಚ್ಚಿನ ಸಂದರ್ಭದಲ್ಲಿ ಕೇವಲ ಪಕ್ಕವಾದ್ಯವಾಗಿ, ಕೆಲವೊಮ್ಮೆ ಮಾತ್ರ ಸ್ವತಂತ್ರ ವಾದನದಲ್ಲಿ ಕಾಣಿಸಿಕೊಳ್ಳುವ ಈ ವಾದ್ಯದ ಗುಣಧರ್ಮ, ಸಾಧ್ಯತೆ, ಸಾಮರ್ಥ್ಯ,ಉದ್ದೇಶ, ಸಂಶೋಧನೆ, ಭವಿಷ್ಯ ಇತ್ಯಾದಿಗಳ ಕುರಿತು ಹಲವು ನುರಿತ ವಾದಕರು ಸೇರಿ ಮಾಹಿತಿ-ಚಿಂತನೆಗಳನ್ನೊದಗಿಸಿದರು.

ಈ ಕಾರ್ಯಕ್ರಮವನ್ನು ರೂಪಿಸಿದ ಬಿಜಾಪುರೆ ಹಾರ್ಮೋನಿಯಂ ಫ‚ೌಂಡೇಷನ್‌ ಇದು ಡಾ. ಕಾಟೋಟಿಯವರ ಕನಸಿನ ಕೂಸು. ತಮ್ಮ ಗುರುಗಳಾದ ಪಂ. ಗುರುವರ್ಯ ರಾಮಭಾವು ಬಿಜಾಪುರೆ ಅವರ ನೆನಪಿನಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿ¨ªಾರೆ. ಬಿಜಾಪುರೆ ಅವರು ಬೆಳಗಾವಿಯಲ್ಲಿ ನೆಲೆಯಾಗಿದ್ದ ಅಪರೂಪದ ಹಾರ್ಮೋನಿಯಂ ವಾದಕರು. ಒಳ್ಳೆಯ ಗಾಯಕರೂ ಆಗಿದ್ದ ಇವರಿಗೆ ಕಂಪೆನಿ ನಾಟಕಗಳ ಅನುಭವವೂ ಇತ್ತು. ಬಿಜಾಪುರೆ ಅವರು ನಿಸ್ವಾರ್ಥ, ಸರಳ, ಸಜ್ಜನರು. ವಾದ್ಯದಲ್ಲಿನ ಗಾಯಕಿ ಅಂಗದ ಬಗ್ಗೆ ಹೊಸ ಶೋಧ ನಡೆಸಿ, ಹಾರ್ಮೋನಿಯಂ ವಾದನಕ್ಕೆ ಹೊಸ ಆಯಾಮವೊಂದನ್ನು ತಂದುಕೊಡಲು ಪ್ರಯತ್ನಿಸಿದ ವರು. ಹಾರ್ಮೋನಿಯಂ ನಲ್ಲಿನ ಮಿತಿಯಿಂದಾಗಿ ಅದನ್ನು ನಿರ್ಲಕ್ಷಿಸದೆ  ಅದರಲ್ಲಿನ ಹಲವು ರೀತಿಯ ಸಾಧ್ಯತೆಗಳನ್ನು ಕಂಡುಕೊಂಡು, ಹಾರ್ಮೋನಿಯಂನ ಸ್ವತಂತ್ರವಾದನವನ್ನು ಮುಂಚೂಣಿಗೆ ತರಲು ಪ್ರಯತ್ನಿಸಿದವರು, ಪಂ. ಬಿಜಾಪುರೆ . ತಮ್ಮ ಗುರುಗಳ ಈ ಪ್ರಯತ್ನವನ್ನು ಅಷ್ಟೇ ಶೃದ್ಧೆಯಿಂದ ಮುಂದುವರಿಸಿದವರು, ಡಾ. ಕಾಟೋಟಿಯವರು.

ಬೆಂಗಳೂರಿನಲ್ಲಿ ನೆಲೆನಿಂತು, ವಾಣಿಜ್ಯ ವಿಷಯದ ಅಧ್ಯಾಪಕರಾಗಿದ್ದುಕೊಂಡು, ದೇಶದೆÇÉೆಡೆ ಹಾಗೂ ವಿದೇಶಗಳಲ್ಲೂ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿ¨ªಾರೆ. ಜೊತೆಗೆ ಇವರ ತರಬೇತಿಯಿಂದ ಅನೇಕ ವಿದ್ಯಾರ್ಥಿಗಳು ಪ್ರತಿಭಾವಂತರಾಗಿ ಹೊರಹೊಮ್ಮಿ¨ªಾರೆ.

ತಮ್ಮ ವಾದ್ಯದ ಬಗ್ಗೆ ಬಹು ದೊಡ್ಡ ಕಾಣೆR (vision) ಹೊಂದಿರುವ ಕಾಟೋಟಿಯವರು, ಅವುಗಳ ಕಾರ್ಯಸಾಧನೆಗಾಗಿ ಹದಿನೈದು ವರ್ಷಗಳ ಹಿಂದೆ ತಮ್ಮ ಗುರುಗಳ ಉಪಸ್ಥಿತಿಯಲ್ಲಿ ಫ‚ೌಂಡೇಷನ್‌ ನ್ನು ಆರಂಭಿಸಿದರು. ಅದರ ಮೂಲಕ ಪ್ರತಿ ವರ್ಷ ಹಾರ್ಮೋನಿಯಂ ಹಬ್ಬವನ್ನು ನಡೆಸಿಕೊಂಡು ಬರುತ್ತಿ¨ªಾರೆ. ಅವುಗಳಲ್ಲಿ  ಸಮರಸ ಸಂವಾದಿನಿ, ನಾದ ವಿಠuಲ, ಜರ್ನಿ ಇನ್‌ ಹಾರ್ಮೋನಿಯಂ ಮೊದಲಾದ ವಿಷಯಾಧಾರಿತ ಕಾರ್ಯಕ್ರಮಗಳನ್ನು ಇಲ್ಲಿ ಉಲ್ಲೇಖೀಸಬಹುದು.

ಫೌಂಡೇಷನ್‌, ಕಳೆದ ಕೆಲವು ವರ್ಷಗಳಲ್ಲಿ ಸುಷಿರ ವಾದ್ಯವಾದ ಹಾರ್ಮೋನಿಯಂ ಉಳಿದ ತಂತಿ ಅಥವಾ ಪಾಶ್ಚಾತ್ಯ ವಾದ್ಯಗಳ ಜೊತೆ ಹೇಗೆ ಹೊಂದುತ್ತವೆ ಎನ್ನುವ ಅಧ್ಯಯನದ ಜೊತೆ, ತಮ್ಮ ಗುರುಗಳ ಜೀವನ ಚರಿತ್ರೆ ಹಾಗೂ ವೀಡಿಯೋ ಸಾಕ್ಷ್ಯಚಿತ್ರ ಬಿಡುಗಡೆ, ಕಾರ್ಯಾಗಾರಗಳು ಹಾಗೂ ಉಪನ್ಯಾಸಗಳನ್ನು ನಡೆಸಿದೆ. ಗುರುವರ್ಯ ರಾಮಭಾವು ಬಿಜಾಪುರೆ ಅವರ ಜನ್ಮ ಶತಮಾನೋತ್ಸವದ ಪ್ರಸ್ತುತ ವರ್ಷದಲ್ಲಿ  ಈ ಕಾರ್ಯಕ್ರಮ ನಡೆದಿದೆ.

ವಿಶ್ವ ಸಂವಾದಿನಿ ಶೃಂಗದ ಮೊದಲ ಎರಡು ದಿನಗಳಲ್ಲಿ ಕರ್ನಾಟಕಿ ಹಾರ್ಮೋನಿಯಂ ವಾದನ, ರಂಗ ಸಂಗೀತ, ಪ್ರಾತ್ಯಕ್ಷಿಕೆ, ಉಪನ್ಯಾಸ,  ಹಾರ್ಮೋನಿಯಂ-ಸಿತಾರ್‌ ಜುಗಲ್‌ಬಂದಿ, ಸಾಕ್ಷ್ಯಚಿತ್ರ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳಿದ್ದವು. 

ಎರಡನೆಯ ದಿನ, ಹಲವು ಕಾರ್ಯಕ್ರಮಗಳ ಜೊತೆಗೆ, ಡಾ.ವಿದ್ಯಾಧರ ಓಕ್‌ ಅವರು ಪ್ರಸ್ತುತಪಡಿಸಿದ ಹಾರ್ಮೋನಿಯಂ ಮೇಲೆ 22 ಶ್ರುತಿಗಳ ಪ್ರಸ್ತುತಿ. ತಾವು ಈ ಕುರಿತು ಸಂಶೋಧನೆ ನಡೆಸಿ ಶ್ರುತಿ ಹಾರ್ಮೋನಿಯಂ ಒಂದನ್ನು ಕಂಡುಹಿಡಿದು ಅದರ ಮೇಲೆ 22 ಶ್ರುತಿಗಳನ್ನು ಸ್ಥಾಪಿಸಿ ತೋರಿಸಿದ ಡಾ.ಓಕ್‌ ಅವರು ಈ ಬಗ್ಗೆ ಪೇಟೆಂಟ್‌ ಅನ್ನೂ ಹೊಂದಿದವರಾಗಿ¨ªಾರೆ. 

ಮೂರನೆಯ ದಿನ ಬಹು ಅಪರೂಪದ ಗಮನಾರ್ಹ ಕಾರ್ಯಕ್ರಮ ನಡೆಯಿತು. ಹಾರ್ಮೋನಿಯಂನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಪಲ್ಲಕ್ಕಿಯಲ್ಲಿ ವೇದಿಕೆಗೆ ಕರತರಲಾಯಿತು. ಮೊದಲೇ ನೂರು ಹಾರ್ಮೋನಿಯಂಗಳನ್ನು ವೇದಿಕೆ ಮೇಲಿಟ್ಟು ಸಜ್ಜುಗೊಳಿಸಲಾಗಿತ್ತು. ಬೆಳಗಾವಿಯ ಶ್ರೀಮತಿ ಅರ್ಚನ ಬೆಳಗುಂದಿ ಅವರ ನೇತೃತ್ವದಲ್ಲಿ ನೂರು ಜನರು ಒಟ್ಟಿಗೆ ಶತಕಂಠ ಗಾಯನವನ್ನು ಪ್ರಸ್ತುತ ಪಡಿಸಿದರು. ನೂರು ಕಂಠದಲ್ಲಿ ಬಿಹಾಗ್‌ ರಾಗದ ಖ್ಯಾಲ್‌ ಗಾಯನ ಆಕರ್ಷಕವಾಗಿತ್ತು. ಆ ಬಳಿಕ ಬಹು ನಿರೀಕ್ಷೆಯ, ಸಾಕಷ್ಟು ಸಿದ್ಧತೆಯೊ ಡನೆ ಮೂಡಿಬಂದ ಕಾರ್ಯಕ್ರಮ ಶತ ಹಾರ್ಮೋ ನಿಯಂ ವಾದನ. ಇದರಲ್ಲಿ ಡಾ. ಕಾಟೋಟಿ ಯವರ ಶಿಷ್ಯರು ಹಾಗೂ ರಾಜ್ಯದ ಅನೇಕ ಹಾರ್ಮೋ ನಿಯಂ ವಾದಕರ ಜೊತೆ, ಮೊದಲೆರಡು ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಕಲಾವಿದರೂ ಉಳಿದವರೊಡನೆ ಸೇರಿ ನುಡಿಸಿದ್ದು ವಿಶೇಷ. ಕೊನೆಯದಾಗಿ ಪ್ರಸ್ತುತಗೊಂಡು ಮುದ ನೀಡಿದ್ದು, ಕಾಟೋಟಿಯವರು ಹಲವು ಇತರ ಭಾರತೀಯ ಹಾಗೂ ಪಾಶ್ಚಾತ್ಯ ವಾದ್ಯಗಳ ಜೊತೆಗೂಡಿ ನಡೆಸಿಕೊಟ್ಟ, ಜರ್ನಿ ಇನ್‌ ಹಾರ್ಮೋನಿಯಂ ಕಾರ್ಯಕ್ರಮ. 

ಸಂಗೀತವನ್ನು ವಿಭಿನ್ನ ನೆಲೆಗಳಿಂದ ನೋಡುವ ಇಂಥ ಪ್ರಯತ್ನ ನಮ್ಮ ತಿಳಿವಿನ ಪರಿಧಿಯನ್ನು ವಿಸ್ತರಿಸುತ್ತದೆ.

 – ಶ್ರೀಮತೀದೇವಿ ಮೈಸೂರು

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.