ಮೇಘ ಬಂತು ಮೇಘನಾ


Team Udayavani, Dec 9, 2018, 6:00 AM IST

meghana-gaonkar.jpg

ನಮ್‌ ಏರಿಯಾಲ್‌ ಒಂದಿನ ಚಿತ್ರದ ಮೂಲಕ ಚಂದನವನಕ್ಕೆ ಪರಿಚಯವಾದ ಚೆಲುವೆ ಮೇಘನಾ ಗಾಂವ್ಕರ್‌. ಮೊದಲ ಚಿತ್ರದಲ್ಲೇ ತನ್ನ ಅಭಿನಯದ ಮೂಲಕ ಕನ್ನಡ ಸಿನಿಪ್ರಿಯರ ಗಮನ ಸೆಳೆದ ಮೇಘನಾ, ನಂತರ ವಿನಾಯಕ ಗೆಳೆಯರ ಬಳಗ, ತುಘಲಕ್‌, ಚಾರ್‌ ಮಿನಾರ್‌, ಸಿಂಪಲ್ಲಾಗ್‌ ಇನ್ನೊಂದ್‌ ಲವ್‌ಸ್ಟೋರಿ ಚಿತ್ರಗಳಲ್ಲಿ ಅಭಿನಯಿಸಿ ಸ್ಯಾಂಡಲ್‌ವುಡ್‌ನ‌ಲ್ಲಿ ತನ್ನದೇ ಆದ ಸ್ಥಾನವನ್ನು ಗಿಟ್ಟಿಸಿಕೊಂಡರು. ಮೇಘನಾ ಇಲ್ಲಿಯವರೆಗೆ ಅಭಿನಯಿಸಿದ್ದು, ಬೆರಳೆಣಿಕೆಯಷ್ಟು ಚಿತ್ರಗಳಾದರೂ, ಅಭಿನಯಿಸಿದ ಪಾತ್ರಗಳು ಸಾಕಷ್ಟು ಹೆಸರನ್ನು ತಂದುಕೊಡುವಲ್ಲಿ ಯಶಸ್ವಿಯಾದವು.

ಕಳೆದ ಮೂರ್‍ನಾಲ್ಕು ವರ್ಷಗಳಿಂದ ಮೇಘನಾ ಹಿರಿತೆರೆ ಮೇಲೆ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಹೇಳಿ ಕೊಳ್ಳುವಂತಹ ಯಾವ ದೊಡ್ಡ ಚಿತ್ರಗಳ ಅವಕಾಶಗಳೂ ಮೇಘನಾಗೆ ಸಿಗಲಿಲ್ಲ. ಒಂದಷ್ಟು ಚಿತ್ರಗಳಲ್ಲಿ ಮೇಘನಾ ಹೆಸರು ಕೇಳಿ ಬಂದರೂ, ಆನಂತರ ಅದ್ಯಾವುದೂ ಸುದ್ದಿಯಾಗಲೇ ಇಲ್ಲ. ಅದನ್ನು ಬಿಟ್ಟರೆ ಆಗಾಗ್ಗೆ ಕಿರುತೆರೆ ಶೋಗಳು, ಫ್ಯಾಷನ್‌ ಶೋಗಳು, ಸಿನಿಮಾ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಮೇಘನಾ ಗಾಂವ್ಕರ್‌, ಇನ್ನು ತಮ್ಮ ಬಿಡುವಿನ ಸಮಯವನ್ನು ಯೋಗ, ಫಿಸಿಕಲ್‌ ಫಿಟೆ°ಸ್‌, ಡ್ಯಾನ್ಸಿಂಗ್‌, ಟ್ರಾವೆಲಿಂಗ್‌ ಹೀಗೆ ಹತ್ತಾರು ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುತ್ತಿದ್ದಾರೆ. ಅಲ್ಲದೆ ಸಣ್ಣ ಕಥೆ ಮತ್ತು ಕವಿತೆಗಳ ಬರವಣಿಗೆಯನ್ನೂ ರೂಢಿಸಿ ಕೊಂಡಿದ್ದಾರೆ. 

ಇನ್ನು ಚಿತ್ರರಂಗದಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳದಿರುವುದರ ಬಗ್ಗೆ ಮಾತನಾಡುವ ಮೇಘನಾ, “ಈಗಾಗಲೇ ಸುಮಾರು ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಆಫ‌ರ್ ಬಂದಿದ್ದವು. ಆದ್ರೆ ಕೆಲವೊಂದು ಪಾತ್ರಗಳು, ಇಷ್ಟವಾದರೆ ಕಥೆ ಇಷ್ಟವಾಗುತ್ತಿರಲಿಲ್ಲ. ಇಷ್ಟವಾಗಿ ಒಪ್ಪಿಕೊಂಡರೆ ಬೇರೆ ಕಾರಣ ಗಳಿಂದ ಆ ಚಿತ್ರಗಳು ಶುರುವಾಗಲೇ ಇಲ್ಲ. ಹೀಗಾಗಿ ಸ್ವಲ್ಪ ಗ್ಯಾಪ್‌ ಆಯಿತು’ ಎನ್ನುತ್ತಾರೆ. 
ಇಂಗ್ಲೀಷ್‌ ಸಾಹಿತ್ಯದಲ್ಲಿ ಮಾಸ್ಟರ್ ಮಾಡಿರುವ ಮೇಘನಾ, ಇವೆಲ್ಲದರ ಜೊತೆ ಜೊತೆಗೆ ಪಿಹೆಚ್‌.ಡಿ ಮಾಡುತ್ತಿದ್ದಾರೆ. ಮೊದಲಿನಿಂದಲೂ ಸಾಹಿತ್ಯದ ಕಡೆಗೆ ಅಭಿರುಚಿ ಇರುವುದರಿಂದ, ಅದೇ ವಿಷಯದ ಮೇಲೆ ಪಿ.ಹೆಚ್‌.ಡಿ ಮಾಡಲು ಮುಂದಾದೆ ಅನ್ನೋದು ಮೇಘನಾ ಮಾತು.  

ಸದ್ಯ ಮದುವೆಯ ಮಮತೆಯ ಕರೆಯೋಲೆ ಚಿತ್ರದ ಬಳಿಕ ಗೀತಸಾಹಿತಿ ಕವಿರಾಜ್‌ ನಿರ್ದೇಶನ ಮಾಡುತ್ತಿರುವ ಎರಡನೇ ಚಿತ್ರ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರದಲ್ಲಿ ಮೇಘನಾ ಗಾಂವ್ಕರ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.  ಈ ಚಿತ್ರದಲ್ಲಿ ಜಗ್ಗೇಶ್‌ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಮೇಘನಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದ್ದು, ಇದೇ ಡಿಸೆಂಬರ್‌ ಎರಡನೆಯ ವಾರದಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ. ಇನ್ನು ಈ ಚಿತ್ರದಲ್ಲಿ ಮೇಘನಾ ಅವರ ಪಾತ್ರವೇನು? ಮೇಘನಾ ಯಾವ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ? ಎಂಬ ಪ್ರಶ್ನೆಗಳಿಗೆ ಚಿತ್ರ ಸೆಟ್ಟೇರಿದ ಮೇಲಷ್ಟೇ ಉತ್ತರ ಸಿಗಲಿದೆ.

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.