CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಎಚ್‌1ಬಿ ವೀಸಾ ಪರಿಷ್ಕರಣೆಗೆ  ಆದೇಶಿಸಿದ ಅಧ್ಯಕ್ಷ ಟ್ರಂಪ್‌ 

ವಾಷಿಂಗ್ಟನ್: ಭಾರತೀಯ ಐಟಿ ಉದ್ಯೋಗಿಗಳಿಗೇ ಹೆಚ್ಚು ನೀಡಲಾಗುತ್ತಿದ್ದ ಎಚ್‌-1ಬಿ ವೀಸಾ ವ್ಯವಸ್ಥೆಯ ಸಂಪೂರ್ಣ ಪರಿಷ್ಕರಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶ ನೀಡಿದ್ದಾರೆ. ಎಚ್‌-1ಬಿ ನಿಯಮಾವಳಿಗಳನ್ನು ಕಠಿಣಗೊಳಿ ಸಲು ಆದೇಶಿಸಿದ್ದು, ಇದರೊಂದಿಗೆ ಹೆಚ್ಚು ಕೌಶಲ್ಯವಿರುವ ಮತ್ತು ಹೆಚ್ಚು ಸಂಬಳ ನೀಡುವ ನಿಯಮ ಅಳವಡಿಸುವಂ ತೆಯೂ ಹೇಳಿದ್ದಾರೆ. ಇದು ಪರೋಕ್ಷವಾಗಿ ಭಾರತೀಯ ಐಟಿ ಉದ್ಯೋಗಿಗಳಿಗೆ, ಭಾರತೀಯರನ್ನೇ ನೇಮಕ ಮಾಡುವ ಐಟಿ ಕಂಪನಿಗಳಿಗೆ ಮಾರಕವಾಗಲಿದೆ. 

ಅಮೆರಿಕದಲ್ಲಿ ತಯಾರಿಸಿದ್ದನ್ನೇ ಖರೀದಿಸಿ, ಅಮೆರಿಕನ್ನ ರನ್ನೇ ನೇಮಿಸಿ ಎಂಬ ಧ್ಯೇಯವನ್ನು ಟ್ರಂಪ್‌ ಹೊಂದಿದ್ದು, ಅದನ್ನು ಜಾರಿಗೊಳಿಸುವತ್ತ ಹೊಸ ಆದೇಶಕ್ಕೆ ಮಂಗಳವಾರ ಸಹಿ ಹಾಕಿದ್ದಾರೆ. ಕೆಲಸಗಳಲ್ಲಿ ಅಮೆರಿಕನ್ನರನ್ನು ಹಿಂದೆ ಕೂರಿಸುವ, ಕಡಿಮೆ ಸಂಬಳಕ್ಕೆ ವಿದೇಶಿಯರನ್ನೇ ನೇಮಿಸುವ ಕ್ರಮ ನಿಲ್ಲಬೇಕು ಎಂದು ಹೇಳಿದ್ದಾರೆ. ವೀಸಾ ನಿರ್ಧಾರಗಳ ಸಂಬಂಧ ಅಮೆರಿಕ ಮತ್ತು ಆಸ್ಟ್ರೇಲಿಯಾ ಸರಕಾರಗಳ ಜತೆ ಸಂಪರ್ಕದಲ್ಲಿದ್ದು, ಸೂಕ್ತ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಇಂದು ಹೆಚ್ಚು ಓದಿದ್ದು

Back to Top