CONNECT WITH US  

ಸ್ಪೇನ್‌ನಲ್ಲಿ ಉಗ್ರರ ಹೊಂಚು ದಾಳಿ:13 ಸಾವು,ಹಲವರಿಗೆ ಗಾಯ 

ಬಾರ್ಸಿಲೋನಾ: ಸ್ಪೇನ್‌ನ ಕ್ಯಾಂಬ್ರಿಲ್ಸ್‌ನಲ್ಲಿ  ಉಗ್ರರು  ಗುರುವಾರ ರಾತ್ರಿ ಅಟ್ಟಹಾಸಗೈದಿದ್ದು, ಕಾರೊಂದನ್ನು ಜನರ ಮೇಲೆ ಅಡ್ಡಾದಿಡ್ಡಿ ಹತ್ತಿಸಿದ ಪರಿಣಾಮ 13 ಮಂದಿ ಸಾವನ್ನಪ್ಪಿ, 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಆಡಿ ಕಾರಿನಲ್ಲಿ ಬಂದ ಐವರು ಉಗ್ರರು ಜನರ ಮೇಲೆ ಕಾರನ್ನು ಹತ್ತಿಸಿ ಕ್ರೂರ ಕೃತ್ಯ ಎಸಗಿದ್ದಾರೆ . ಪ್ರತಿ ದಾಳಿ ನಡೆಸಿದ ಪೊಲೀಸರು ಐವರನ್ನೂ ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ದಾಳಿಗೂ ಮುನ್ನ ಅಲ್ಕಾನರ್‌ ಎಂಬಲ್ಲಿ ಮನೆಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಇದು ಜಿಹಾದ್‌ ಉಗ್ರವಾದಿಗಳ ಕೃತ್ಯ ಎಂದು ಸ್ಪೇನ್‌ ಪ್ರಧಾನಿ ಮರಿಯಾನೋ ರಾಜೊಯಿ ಹೇಳಿದ್ದಾರೆ. ಸ್ಪೇನ್‌ನಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ. 


Trending videos

Back to Top