ಟ್ರಂಪ್ ವಿರುದ್ಧ ಪ್ರತಿಭಟನೆ
Team Udayavani, Jul 2, 2018, 12:23 PM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ವಲಸೆ ನೀತಿ ಖಂಡಿಸಿ ದೇಶಾದ್ಯಂತ ಅನಿವಾಸಿ ಭಾರತೀಯರು ಸೇರಿದಂತೆ ಸಹಸ್ರಾರು ಮಂದಿ ರವಿವಾರ ಪ್ರತಿಭಟನೆ ನಡೆಸಿದ್ದಾರೆ. ಟ್ರಂಪ್ ಸರಕಾರದ ವಿವಾದಿತ “ಶೂನ್ಯ ಸಹಿಷ್ಣುತೆ’ ನೀತಿಯಿಂದಾಗಿ ವಲಸೆ ಬಂದವರು ತಮ್ಮ ಮಕ್ಕಳಿಂದ ಬೇರ್ಪಡೆಯಾಗಬೇಕಾಗುತ್ತದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಾನಿರತರು ಘೋಷಣೆ ಕೂಗಿದ್ದಾರೆ. ಡೆಮಕ್ರಾಟಿಕ್ ಪಾರ್ಟಿ ನಾಯಕರು ಹಾಗೂ ಎಡಪಂಥೀಯ ಕಾಯಕರ್ತರು ಪ್ರತಿಭಟನಾ ರಾಲಿಯ ನೇತೃತ್ವ ವಹಿಸಿದ್ದರು. ಈ ನೀತಿಯಿಂದ ದೇಶದಲ್ಲಿ ನೈತಿಕ ಬಿಕ್ಕಟ್ಟು ಎದುರಾಗಲಿದೆ. ನಾವು ಪ್ರಜಾಪ್ರಭುತ್ವ ಉಳಿಸಲು ಹೋರಾಡುತ್ತೇವೆ ಎಂದು ಡೆಮಕ್ರಾಟಿಕ್ ಪಾರ್ಟಿ ನಾಯಕ ಟಾಮ್ ಪೆರೇಜ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ