CONNECT WITH US  

ಫೇಸ್‌ಬುಕ್‌ನಿಂದ ಇಂಟರ್ನೆಟ್‌

ನ್ಯೂಯಾರ್ಕ್‌: ಫೇಸ್‌ಬುಕ್‌ ಇದೀಗ ಗ್ರಾಮೀಣ ಪ್ರದೇಶಗಳಿಗೆ ಇಂಟರ್ನೆಟ್‌ ಒದಗಿಸುವ ಸ್ಯಾಟಲೈಟ್‌ ನಿರ್ಮಿಸುತ್ತಿದ್ದು, ಮುಂದಿನ ವರ್ಷ ಉಡಾವಣೆ ಮಾಡುವ ನಿರೀಕ್ಷೆಯಿದೆ. ಈ ಸಂಬಂಧ ಅಮೆರಿಕದ ಫೆಡರಲ್‌ ಕಮ್ಯೂನಿಕೇಶನ್ಸ್‌ ಕಮಿಷನ್‌ಗೆ (ಎಫ್ಸಿಸಿ) ಫೇಸ್‌ಬುಕ್‌ ವರದಿ ಸಲ್ಲಿಸಿದ್ದು, ಪಾಯಿಂಟ್‌ವ್ಯೂ ಟೆಕ್‌ ಎಲ್‌ಎಲ್‌ಸಿ ಅಡಿ ಈ ಯೋಜನೆ ಹಮ್ಮಿಕೊಳ್ಳಲಿದೆ. ಉಪಗ್ರಹಕ್ಕೆ ಅಥೆನಾ ಎಂದು ಹೆಸರಿಡಲಾಗಿದ್ದು, ಅದರ ಮೂಲಕ ಗ್ರಾಮೀಣ ಹಾಗೂ ಇಂಟರ್‌ನೆಟ್‌ ಲಭ್ಯವಿಲ್ಲದ ಪ್ರದೇಶಗಳಿಗೆ ಇಂಟರ್‌ನೆಟ್‌ ಒದಗಿಸಬಹುದಾಗಿದೆ.

ಈಗಾಗಲೇ ಇಂಟರ್ನೆಟ್‌ ಒದಗಿಸಲು ಹಲವು ಸ್ಯಾಟಲೈಟ್‌ಗಳಿದ್ದು, ಉದ್ಯಮಿ ಎಲಾನ್‌ ಮಸ್ಕ್ ಸ್ಟಾರ್‌ಲಿಂಕ್‌ ಎಂಬ ಉಪಗ್ರಹ ಉಡಾವಣೆ ಮಾಡಿದ್ದಾರೆ. ಈ ಹಿಂದೆ ಫೇಸ್‌ಬುಕ್‌ ಡ್ರೋನ್‌ ಮೂಲಕ ಇಂಟರ್ನೆಟ್‌ ಒದಗಿಸುವ ಯೋಜನೆ ಹೊಂದಿತ್ತು. ಈ ಬಗ್ಗೆ ಪರೀಕ್ಷೆ ನಡೆಸಲಾಗಿದ್ದರೂ, ಇದನ್ನು ತಾಂತ್ರಿಕ ಕಾರಣಗಳಿಂದಾಗಿ ಕೈಬಿಡಲಾಗಿತ್ತು. ಸೌರ ಶಕ್ತಿಯಿಂದ ಚಲಿಸುವ ಡ್ರೋನ್‌ ಅನ್ನು 60 ಸಾವಿರ ಅಡಿಯಲ್ಲಿ ಹಾರಾಟ ನಡೆಸಿ, ಅದು ಹೊರಹೊಮ್ಮಿಸುವ ರೇಡಿಯೋ ತರಂಗಗಳ ಮೂಲಕ ಇಂಟರ್ನೆಟ್‌ ಸೌಲಭ್ಯ ಒದಗಿಸಲಾಗುತ್ತದೆ.

Trending videos

Back to Top