CONNECT WITH US  

ಗಾಂಧಿಗೆ ಸ್ವರ್ಣ ಪದಕ?

ವಾಷಿಂಗ್ಟನ್‌: ಅಮೆರಿಕದ ಪ್ರತಿಷ್ಠಿತ ಪುರಸ್ಕಾರವಾದ ಸಂಸದೀಯ ಸ್ವರ್ಣ ಪದಕವನ್ನು ಮರಣೋತ್ತರವಾಗಿ ಮಹಾತ್ಮ ಗಾಂಧಿಗೆ ನೀಡಲು ಪ್ರಸ್ತಾಪಿಸುವುದಾಗಿ ಅಮೆರಿಕದ ಪ್ರಭಾವಿ ಸಂಸದೆ ಕರೋಲಿನ್‌ ಮಲೋನೆ ಹೇಳಿದ್ದಾರೆ. ಭಾನುವಾರ ಅಮೆರಿಕದಲ್ಲಿ ನಡೆದ ಭಾರತ ಸ್ವಾತಂತ್ರ್ಯೋತ್ಸವ ಆಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಖಾಸಗಿ ಮಸೂದೆ ಮಂಡಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಇದೇ ಪುರಸ್ಕಾರವನ್ನು ಪಡೆದ ಮಾರ್ಟಿನ್‌ ಲೂಥರ್‌ ಕಿಂಗ್‌ ಜ್ಯೂನಿಯರ್‌, ಮಂಡೇಲಾರನ್ನೂ ಗಾಂಧಿ ಪ್ರಭಾವಿಸಿದ್ದಾರೆ. ಈ ಪುರಸ್ಕಾರವು ಅಮೆರಿಕದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾಗಿದ್ದು, ಮಸೂದೆ ಅನುಮೋದನೆಗೊಂಡಲ್ಲಿ ಈ ಪುರಸ್ಕಾರ ಪಡೆಯಲಿರುವ ಮೊದಲ ಭಾರತೀಯರಾಗಲಿದ್ದಾರೆ. 


Trending videos

Back to Top