CONNECT WITH US  

ತಾಲಿಬಾನ್‌ ಸಂಧಾನ ಸಭೆಗೆ ಭಾರತಕ್ಕೆ ಆಹ್ವಾನ

ಹೊಸದಿಲ್ಲಿ: ಅಫ್ಘಾನಿಸ್ಥಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು ರಷ್ಯಾ ಸರಕಾರ ಮುಂದಾಗಿದೆ. ಅದಕ್ಕಾಗಿ ಉಗ್ರ ಸಂಘಟನೆ ತಾಲೀಬಾನ್‌ ಜತೆಗೆ ಸಭೆ ನಡೆಸಲು ತೀರ್ಮಾ ನಿಸಲಾಗಿದೆ. ಹೀಗಾಗಿ  ಮಾಸ್ಕೋ ದಲ್ಲಿ ಶುಕ್ರವಾರ ಅನೌಪಚಾರಿಕ  ಸಭೆ ಆಯೋಜಿಸಿದ್ದು, ಭಾರತ ಇದರಲ್ಲಿ ಪಾಲ್ಗೊಳ್ಳಲಿದೆ.

ಎರಡು ದೇಶಗಳ ನಡುವಿನ ಭಿನ್ನಾಭಿಪ್ರಾಯ ಶಮನಕ್ಕಾಗಿ ಕರೆಯಲಾಗಿರುವ ಅನೌಪಚಾರಿಕ ಅಂತಾರಾಷ್ಟ್ರೀಯ ಸಭೆ ಯೊಂದರಲ್ಲಿ ಭಾರತ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಈ ಸಭೆಯಲ್ಲಿ ಭಾಗವಹಿಸುವಂತೆ ಭಾರತಕ್ಕೆ ಆಮಂತ್ರಣ ನೀಡಲಾಗಿದ್ದು, ಆಫ್ಘಾನಿಸ್ತಾನ ದಲ್ಲಿ ಭಾರತದ ರಾಯಭಾರಿಯಾಗಿದ್ದ ಅಮರ್‌ ಸಿನ್ಹಾ, ಪಾಕಿಸ್ಥಾನದಲ್ಲಿ ಭಾರತದ ಹೈಕಮೀಷನರ್‌ ಆಗಿದ್ದ ಟಿ.ಸಿ.ಎ. ರಾಘವನ್‌ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Trending videos

Back to Top