ದಾಖಲೆ ಸೃಷ್ಟಿಸಿದ ರಿಷಭ್ ಪಂತ್, ರಿಯಾನ್ ಪರಾಗ್
Team Udayavani, May 6, 2019, 10:20 AM IST
ಹೊಸದಿಲ್ಲಿ: ಶನಿವಾರ ನಡೆದ ರಾಜಸ್ಥಾನ್ ರಾಯಲ್ಸ್-ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯದಲ್ಲಿ ರಿಷಭ್ ಪಂತ್, ರಿಯಾನ್ ಪರಾಗ್ ದಾಖಲೆ ನಿರ್ಮಿಸಿದ್ದಾರೆ.
ಫಿರೋಜ್ ಶಾ ಕೋಟ್ಲಾದಲ್ಲಿ ನಡೆದ ಶನಿವಾರದ ಮೊದಲ ಪಂದ್ಯದಲ್ಲಿ 5 ವಿಕೆಟ್ಗಳ ಗೆಲುವು ದಾಖಲಿಸಿ ಲೀಗ್ ಹಂತವನ್ನು ಅತ್ಯುತ್ತಮವಾಗಿ ಮುಗಿಸಿದ ಡೆಲ್ಲಿ ತಂಡವು ರಾಜಸ್ಥಾನ್ ರಾಯಲ್ಸ್ನ ಪ್ಲೇ ಆಫ್ ಕನಸನ್ನು ನುಚ್ಚುನೂರು ಮಾಡಿತು. ಈ ನಡುವೆ ಡೆಲ್ಲಿ ತಂಡದ ರಿಷಭ್ ಪಂತ್ ಹಾಗೂ ರಾಜಸ್ಥಾನ್ ಆಟಗಾರ ರಿಯಾಗ್ ಪರಾಗ್ ಹೊಸ ದಾಖಲೆಯನ್ನು ಬರೆದರು.
ವಿಕೆಟ್ ಕೀಪರ್/ಬ್ಯಾಟ್ಸ್ಮನ್ ರಿಷಭ್ ಪಂತ್ ಐಪಿಎಲ್ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್ ಎಂಬ ದಾಖಲೆ ಹೊಂದಿದ್ದಾರೆ. ಇಲ್ಲಿಯ ವರೆಗೆ ಈ ಋತುವಿನಲ್ಲಿ ಪಂತ್ 23 ಆಟಗಾರರನ್ನು ಔಟ್ ಮಾಡಿದ್ದಾರೆ. ಇದರಲ್ಲಿ 17 ಕ್ಯಾಚ್ ಮತ್ತು 6 ಸ್ಟಂಪ್ಸ್ ಸೇರಿವೆ. ಈ ಮೂಲಕ ಸಂಗಕ್ಕರ ಮತ್ತು ದಿನೇಶ್ ಕಾರ್ತಿಕ್ ಅವರ ದಾಖಲೆಯನ್ನು ಹಿಂದಿಕ್ಕಿದರು.
ರಿಯಾನ್ ಪರಾಗ್ ಐಪಿಎಲ್ನಲ್ಲಿ ಅರ್ಧಶತಕ ಬಾರಿಸಿದ ಅತೀ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 17 ವರ್ಷ 175 ದಿನ ಪ್ರಾಯದ ರಿಯಾನ್ ರಾಜಸ್ಥಾನದ ಇನ್ನಿಂಗ್ಸ್ ವೇಳೆ ಫಿಫ್ಟಿ ಹೊಡೆದರು. ಇದಕ್ಕೂ ಮುನ್ನ ಈ ದಾಖಲೆ ಸಂಜು ಸ್ಯಾಮ್ಸನ್ ಮತ್ತು ಪೃಥ್ವಿ ಶಾ ಹೆಸರಲ್ಲಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?