ಬಾಂಬೆ ಷೇರುಪೇಟೆ 60 ದಾಟಿತು… ಮುಂದೇನು?

ಷೇರುಪೇಟೆ 10 ಸಾವಿರ ಅಂಕಕ್ಕೆ ಬರಲು 16 ವರ್ಷ ಕಾಯಬೇಕಾಯಿತು.

Team Udayavani, Sep 25, 2021, 12:00 PM IST

ಬಾಂಬೆ ಷೇರುಪೇಟೆ 60 ದಾಟಿತು… ಮುಂದೇನು?

ಬಾಂಬೆ ಷೇರು ಪೇಟೆಯ ಸೂಚ್ಯಂಕ ಶುಕ್ರವಾರ 60 ಸಾವಿರ ದಾಟಿ ಹೊಸ ದಾಖಲೆ ನಿರ್ಮಿಸಿದೆ. ಕೆಲವು ಸಮಯದಿಂದ ನಿರೀಕ್ಷಿತವಾಗಿದ್ದ ಈ ಕನಸು ಈಡೇರಿದಂತಾಗಿದೆ. ಅದು ಸರಿ ಮುಂದೇನು ಎನ್ನುವ ಮಾತು ಕೂಡಾ ಇದೀಗ ಆರಂಭವಾಗಿದೆ. ಇನ್ನೂ ಮೇಲಕ್ಕೋ ಅಥವಾ ಸೀದಾ ಕೆಳಕ್ಕೋ ಎನ್ನುವ ಯೋಚನೆ ಎಲ್ಲರನ್ನೂ ಕಾಡುತ್ತಿದೆ.

ಕೆಲವು ತಿಂಗಳುಗಳಿಂದ ದಾಪುಗಾಲಿಕ್ಕುತ್ತಿರುವ ಷೇರು ಬಜಾರಿನ ಈ ನಡೆ ಅಚ್ಚರಿಯನ್ನು ತಂದಿದೆ. ಒಂದೆಡೆ ಕೊರೊನಾದ ಭಯದಿಂದ ಸಂಪೂರ್ಣ ಮುಕ್ತಿಯೇ ಸಿಗದೆ,  ಮುಂದಿನ ಅಲೆಯ ಭೀತಿಯಿಂದ ಒದ್ದಾಡುತ್ತಿರುವ ವಿಶ್ವದ ಆರ್ಥಿಕತೆಯಾದರೆ ಇನ್ನೊಂದೆಡೆ ಭರ್ಜರಿ ದಾಖಲೆ ಮಾಡಿ ಓಡುತ್ತಿರುವ ಬಾಂಬೆ ಷೇರುಪೇಟೆ ಸೂಚ್ಯಂಕ. ಈ ವಿಪರ್ಯಾಸಕ್ಕೆ ಸಮಾಧಾನಕರವಾದ ಕಾರಣವೇನೆಂಬುದು ಹಲವರ ಕುತೂಹಲಕ್ಕೆ ಕಾರಣವಾಗಿದೆ.

ಸೂಕ್ಷ್ಮವಾಗಿ ಗಮನಿಸಿದರೆ ಆರ್ಥಿಕತೆಯ ಭೀಕರ ಸಂದರ್ಭದ ಬಳಿಕದ ಷೇರುಗಟ್ಟೆಯ ಗೂಳಿಯಾಟವನ್ನು 2007ರ ಆರ್ಥಿಕ ಹಿಂಜರಿತದ ಸಮಯದಲ್ಲೂ ಗಮನಿಸಬಹುದು. ಒಂದು ಬಾರಿ ಕುಸಿದ ವಿಶ್ವದ ಷೇರು ಮಾರುಕಟ್ಟೆ ಆರ್ಥಿಕತೆ ಏನೇನೂ ಚೆನ್ನಾಗಿಲ್ಲದಿದ್ದರೂ ಸಿಕ್ಕಾಪಟ್ಟೆ ಏರತೊಡಗಿದವು. ಕೊರೊನಾ ಮಹಾಮಾರಿಯ ಮುಷ್ಟಿಗೆ ಸಿಲುಕಿದ ಮಾರುಕಟ್ಟೆ ಆ ಬಳಿಕ ಚೇತರಿಸಿಕೊಂಡು ಇದೀಗ ದಾಖಲೆಯ ಮಟ್ಟಕ್ಕೆ ಏರುತ್ತಿದೆ. ಇವೆರಡು ಸಂದರ್ಭಗಳಲ್ಲೂ ಕೆಲಸ ಮಾಡಿದ್ದು ಆರ್ಥಿಕತೆಯ ಪುನಶ್ಚೇತನ ಪ್ಯಾಕೇಜ್‌  ಪ್ರಮುಖವಾಗಿ ಹಣದ ಪೂರೈಕೆ.

ಸರಕಾರಗಳು, ಅದರಲ್ಲೂ ಮುಖ್ಯವಾಗಿ ಅಮೆರಿಕ ಸರಕಾರ ಆರ್ಥಿಕ ಹಿಂಜರಿತದ ಸಮಯದಲ್ಲಿ ಕರೆನ್ಸಿಯನ್ನು ಮುದ್ರಿಸಿ ಆರ್ಥಿಕತೆಯಲ್ಲಿ ಹರಿಯ ಬಿಡುತ್ತದೆ, ಸರಕಾರ ಶೂನ್ಯ ಬಡ್ಡಿ ದರಕ್ಕೆ ಸಾಲ ಕೊಡುತ್ತದೆ, ಕಾರಣಗಳನ್ನು ಹುಡುಕಿ ಹುಡುಕಿ ಸರಕಾರಿ ಯೋಜನೆಗಳನ್ನು ಹಮ್ಮಿಕೊಂಡು ಉದ್ಯೋಗಾ ವಕಾಶಗಳನ್ನು ಹುಟ್ಟು ಹಾಕಿ ಸಂಬಳ ನೀಡುತ್ತದೆ. ಕೆಲವೆಡೆ ಸಬ್ಸಿಡಿ, ಉಚಿತ ಧನ ಸಹಾಯ ನೀಡುತ್ತದೆ. ಈ ಎಲ್ಲ ಸರಕಾರಿ ಹಿಂದಿರುವ ಏಕೈಕ ಉದ್ದೇಶ ಏನೆಂದರೆ ಜನರ ಕೈಯಲ್ಲಿ ದುಡ್ಡು ತುರುಕುವುದು; ಹಣದ ಪೂರೈಕೆಯನ್ನೇ ಹೆಚ್ಚಿಸುವುದು. ಜಾನ್‌ ಮೆನಾರ್ಡ್‌ ಕೇಯ್ನ$Õ  ಎಂಬ ಆರ್ಥಿಕ ತಜ್ಞನ ಮೆದುಳಿನ ಕೂಸಾದ ಈ ಸೂತ್ರಕ್ಕೆ “ಕೆಯ್ನೆàಶಿಯನ್‌ ಇಕನಾಮಿಕ್ಸ್‌’ ಎಂಬ ಹೆಸರೂ ಇದೆ. ಅದರ ಪ್ರಕಾರ  ಜನರ ಕೈಯಲ್ಲಿ ದುಡ್ಡು ಸಂಚಯವಾದೊಡನೆಯೇ ಅವರು ವಸ್ತುಗಳನ್ನು ಖರೀದಿ ಮಾಡತೊಡಗುತ್ತಾರೆ. ವಸ್ತುಗಳ ಬೇಡಿಕೆ ಏರಿದೊಡನೆ ಕಾರ್ಖಾನೆಗಳು ಮರು ಆರಂಭಗೊಂಡು ಉದ್ಯೋಗಾವಕಾಶಗಳು, ಆದಾಯಮೂಲಗಳು ಸೃಷ್ಟಿಯಾಗುತ್ತವೆ. ಈ ರೀತಿ ಕುಸಿದ ಆರ್ಥಿಕತೆಗೆ ಉತ್ತೇಜನ ಸಿಕ್ಕಿ, ಪರಿಸ್ಥಿತಿ ಸುಧಾರಣೆಯಾಗುತ್ತದೆ.  ಕರೆನ್ಸಿ ಅಚ್ಚು ಹಾಕುವುದರಿಂದ ಬೆಲೆಯೇರಿಕೆಯ ಭೀತಿ ಇದ್ದರೂ ಕೂಡಾ ಆ ಸಮಸ್ಯೆಯನ್ನು ಆಮೇಲೆ ನೋಡಿದರಾಯಿತು; ಮೊತ್ತ ಮೊದಲು ಪ್ರಗತಿ ಎನ್ನುವುದು ಅವರ ವಾದ.

ದುಡ್ಡಿನ ಪೂರೈಕೆ  ಜಾಸ್ತಿಯಾದ ಕೂಡಲೇ ಇನ್ನೊಂದು ರೀತಿಯ ವಿದ್ಯಮಾನವನ್ನು ಗಮನಿಸಬಹುದು. ಅದೇನೆಂದರೆ ಅಮೆರಿಕದಂಥ ದೇಶಗಳು ದುಡ್ಡಿನ ಹರಿವನ್ನು ಏರಿಸಿದ ಕೂಡಲೇ ಅವು ದೇಶದೊಳಗೆ ಸರಕಿನ ಬೇಡಿಕೆಯನ್ನು ಹೆಚ್ಚಿಸುವ ಜತೆ ಜತೆಗೆ ಜಾಗತಿಕ ಹೂಡಿಕೆ ಮಾರುಕಟ್ಟೆಯಲ್ಲೂ ಆಸಕ್ತಿಯನ್ನು ಕೆರಳಿಸುತ್ತದೆ. ಸುಲಭವಾಗಿ ಸಿಗುವ ದುಡ್ಡು ಜಾಗತಿಕ ಷೇರು ಮಾರುಕಟ್ಟೆಗಳನ್ನು ಅರಸುತ್ತಾ ಬರುತ್ತವೆ. ಆರ್ಥಿಕ ಹಿಂಜರಿತದ ದೆಸೆಯಿಂದ ಕುಸಿದು ಬಿದ್ದಿರುವ ಮಾರುಕಟ್ಟೆಯ ಅಗ್ಗದ ಷೇರುಗಳ ಖರೀದಿ ಏರುತ್ತವೆ.  ಈ ರೀತಿ ಜಾಗತಿಕ ಪುನಶ್ಚೇತನ ಪ್ಯಾಕೇಜುಗಳು ಷೇರುಗಟ್ಟೆಯ ನಾಗಾಲೋಟಕ್ಕೆ ಮುಖ್ಯವಾದ ಕಾರಣವಾಗುತ್ತದೆ. ಅಂದರೆ ಸುಲಭವಾಗಿ ಕೈಗೆಟಕುವ ದುಡ್ಡು.

ಜಾಗತಿಕ ಮಟ್ಟದಲ್ಲಿ ಪ್ರಗತಿಶೀಲ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿ ಭಾರತ ಇಂದಿಗೂ ಇದೆ. ಬೇರೆ ಪ್ರಗತಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ಕೊರೊನಾ ನಿಯಂತ್ರಣ, ಆರ್ಥಿಕ ಉತ್ತೇಜನ ಇತ್ಯಾದಿಗಳು ಬಹಳಷ್ಟು ಚೆನ್ನಾಗಿವೆ. ಸ್ವಾಭಾವಿಕ ವಾಗಿ ಅಂತಹ ದುಡ್ಡೆಲ್ಲವೂ ಭಾರತದ ಷೇರು ಮಾರುಕಟ್ಟೆಯನ್ನು ಅರಸುತ್ತಾ ಬರುವುದರಲ್ಲಿ ಅಚ್ಚರಿಯೇನಿಲ್ಲ.

ಉತ್ತೇಜನದಾಯಕ ಬೆಳವಣಿಗೆ:

ಕೊರೊನಾ ಹಾವಳಿಯ ಬಳಿಕ ಇತ್ತೀಚೆಗೆ ದಾಖಲೆಯಾದ ಶೇ.20 ಪ್ರಗತಿ ದರ, ಉತ್ಪಾದನ ವಲಯದ ಆಶಾದಾಯಕ ಪಿಎಂಐ ಸೂಚ್ಯಂಕ, ಲಸಿಕೆ ನೀಡುವಿಕೆಯಲ್ಲಿ ತುಸು ನಿಧಾನವಾಗಿಯಾದರೂ ಸಾಧಿಸುತ್ತಿರುವ ಪ್ರಗತಿ, ವಿದೇಶೀ ವಿನಿಮಯ ದಾಸ್ತಾನಿನ ದಾಖಲೆ ಮೊತ್ತ, ಇತ್ಯಾದಿಗಳು ಭಾರತದ ಮಾರುಕಟ್ಟೆಗೆ ಉತ್ತೇಜನದಾಯಕವಾಗಿಯೇ ನಡೆಯುತ್ತಿದೆ. ಅದಲ್ಲದೆ ಇತ್ತೀಚೆಗೆ ಪ್ರಕಟವಾದ ಸರಕಾರಿ ಸೊತ್ತುಗಳ ನಗದೀಕರಣ ಯೋಜನೆಯು ಹಲವರ ಕಣ್ಣು ಕೆಂಪಗಾಗಿಸಿದರೂ ಷೇರುಗಲಿಗಳ ಮನಸ್ಸನ್ನು ತಂಪಾಗಿಸಿದ್ದು ಸುಳ್ಳಲ್ಲ. ಇವೆಲ್ಲಾ ಒಟ್ಟಾರೆ ಕಾರಣಗಳಿಂದ ಭಾರತೀಯ ಷೇರು ಮಾರುಕಟ್ಟೆ ಕೊರೊನಾದ ಮೂರನೇ ಅಲೆಯ ಸಂಭಾವ್ಯವನ್ನೂ ಅವಗಣಿಸಿ ಸದ‌Âಕ್ಕೆ ಗೂಳಿ ನರ್ತನ ನೀಡುತ್ತಿದೆ. ಇದು ಷೇರುಗಟ್ಟೆಯ ಭಾಷೆಯನ್ನು ಅರಿತವರಿಗೆ ಅಚ್ಚರಿಯೇನೂ ಅಲ್ಲ.

ಷೇರುಗಟ್ಟೆಯ ಭಾಷೆಯನ್ನು ಅರಿತವರು ಈಗ ಜಾಗರೂಕರಾಗ ತೊಡಗುತ್ತಾರೆ. ಮಿತಿಮೀರಿ ಏರಿದ ಬೆಲೆ ಇಳಿಯಲೇ ಬೇಕು. ಬಾಂಬೆ ಶೇರು ಬಾಜಾರಿನಲ್ಲಿ ಒಂದು ಗಾದೆ ಪ್ರಚಲಿತವಾಗಿದೆ. ಟ್ಯಾಕ್ಸಿ ಚಾಲಕರು ನಿಮ್ಮ ಬಳಿ ಷೇರುಗಟ್ಟೆಯ ಚರ್ಚೆ ಮಾಡತೊಡಗಿದರು ಎಂದರೆ ಇರುವ ಹೂಡಿಕೆ ಯನ್ನು ಮಾರಿ ಬಚಾವಾಗುವ ಸಮಯ ಬಂದಿದೆ ಎಂದರ್ಥ. ಸೂಕ್ಷ್ಮವಾಗಿ ಗಮನಿಸಿ ನೋಡಿ ಹಾಗೂ ನಿಮ್ಮ ಜಾಗರೂಕತೆಯಲ್ಲಿ ನೀವಿರಿ. ಮಾರುಕಟ್ಟೆಯ ನಡೆಯನ್ನು ನಿಖರವಾಗಿ ಭವಿಷ್ಯ ನುಡಿಯುವ ಜೋತಿಷಿ ಯಾರೂ ಇಲ್ಲ. ಕೆಟ್ಟು ನಿಂತ ಗಡಿಯಾರವೂ ದಿನಕ್ಕೆರಡು ಬಾರಿ ನಿಖರವಾದ ಸಮಯ ಹೇಳಬಲ್ಲುದು !!

25 ವರ್ಷಗಳಲ್ಲಿ 30,000; ಕೇವಲ  6 ವರ್ಷಗಳ‌ಲ್ಲಿ ಉಳಿದ 30 ಸಾವಿರ!:

1980ರ ದಶಕದಲ್ಲೇ ಷೇರುಪೇಟೆಯ ಯುಗ ಆರಂಭವಾಗಿದ್ದರೂ, 1,000 ಅಂಕಕ್ಕೆ ತಲುಪಿದ್ದು, 1990ರಲ್ಲಿ. ಹೀಗಾಗಿ, ಇದನ್ನೇ ಆರಂಭಿಕ ವರ್ಷವೆಂದು ಕರೆಯಲಾಗುತ್ತದೆ. ಇಲ್ಲಿಂದ ಹಲವಾರು ಏರಿಳಿತಗಳನ್ನು ದಾಟಿ ಬಂದಿದೆ ಬಾಂಬೆ ಷೇರುಪೇಟೆ. ವಿಶೇಷವೆಂದರೆ, 1990ರಲ್ಲಿ 1 ಸಾವಿರ ಅಂಕ ತಲುಪಿದ್ದ ಷೇರುಪೇಟೆ 10 ಸಾವಿರ ಅಂಕಕ್ಕೆ ಬರಲು 16 ವರ್ಷ ಕಾಯಬೇಕಾಯಿತು. 2008ರಲ್ಲೇ 20 ಸಾವಿರ ತಲುಪಿ, 2014ಕ್ಕೆ 25 ಸಾವಿರಕ್ಕೆ ಬಂದಿತು. 2015ರಲ್ಲೇ 30 ಸಾವಿರ ತಲುಪಿತು. ಆದರೆ 2015ರಿಂದ ಇಲ್ಲಿವರೆಗೆ ಅಂದರೆ 2021ರ ಹೊತ್ತಿಗೆ ಸೆನ್ಸೆಕ್ಸ್‌ 60ರ ಗಡಿ ದಾಟಿದೆ. ಕೊರೊನಾ ಅಡ್ಡಿಯನ್ನು ದಾಟಿ 60 ಸಾವಿರಕ್ಕೆ ಬಂದಿರುವುದು ಅಚ್ಚರಿಯೇ ಸರಿ.

ಸೆನ್ಸೆಕ್ಸ್‌ಗೆ ಹೊಡೆತ:

1992      ಹರ್ಷದ್‌ ಮೆಹ್ತಾ ಹಗರಣ

1999       ಕಾರ್ಗಿಲ್‌ ಯುದ್ಧ

2001   ಸಂಸತ್‌ ಭವನಕ್ಕೆ ಉಗ್ರ ದಾಳಿ ಮತ್ತು ಅಮೆರಿಕದಲ್ಲಿ  ಡಬ್ಲ್ಯುಟಿಸಿ ಮೇಲೆ ದಾಳಿ

2007-2008          ವಿಶ್ವ ಆರ್ಥಿಕ ಬಿಕ್ಕಟ್ಟು

2009                     ಸತ್ಯಂ ಹಗರಣ

2016                     ನೋಟು ಅಮಾನ್ಯ

2018                     ಪಿಎನ್‌ಬಿ ಹಗರಣ

 –ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್‌ಕುಮಾರ್‌

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.