ಎಸ್‌ಬಿಐ ಠೇವಣಿ,ಸಾಲಗಳ ಬಡ್ಡಿ ದರ ಇಳಿಕೆ

Team Udayavani, Oct 10, 2019, 6:00 AM IST

ಮುಂಬಯಿ: ಸರಕಾರಿ ಸ್ವಾಮ್ಯದ ಅತೀ ದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ ಸಾಲ ಮತ್ತು ಠೇವಣಿ ಮೇಲಿನ ಬಡ್ಡಿ ದರ ಇಳಿಕೆ ಮಾಡಿದೆ. ಈ ಮೂಲಕ ಗ್ರಾಹಕರಿಗೆ ಸಿಹಿ ಮತ್ತು ಕಹಿಯ ಮಿಶ್ರಣವನ್ನು ನೀಡಿದೆ.

ಸತತ ಆರನೇ ಬಾರಿಗೆ ಎಸ್‌ಬಿಐ ದರ ಇಳಿಕೆ ಮಾಡುತ್ತಿದ್ದು, ಕನಿಷ್ಠ ವೆಚ್ಚ ಆಧಾರಿತ (ಎಂಸಿಎಲ್‌ಆರ್‌) ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ. 0.1, 1 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಮೇಲಿನ ಉಳಿತಾಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.0.25ರಷ್ಟು ಇಳಿಕೆ ಮಾಡುವ ನಿರ್ಧಾರ ಪ್ರಕಟಿಸಿದೆ. ಹೀಗಾಗಿ ಠೇವಣಿ ಮೇಲಿನ ಹಾಲಿ ಬಡ್ಡಿ ದರ ಶೇ. 3.50ರಿಂದ ಶೇ. 3.25ಕ್ಕೆ ತಗ್ಗಲಿದೆ. ಸಾಲಗಳ ಮೇಲಿನ ಬಡ್ಡಿ ದರ ಇಳಿಕೆ ಗುರುವಾರದಿಂದ ಜಾರಿಗೆ ಬರಲಿದ್ದರೆ, ಉಳಿತಾಯ ಠೇವಣಿಗಳ ಮೇಲಿನ ಬಡ್ಡಿ ದರ ನ.1ರಿಂದ ಅನುಷ್ಠಾನಗೊಳ್ಳಲಿದೆ.

ಸಾಲಗಳ ಮೇಲಿನ ಬಡ್ಡಿ ದರ ಇಳಿಕೆಯಿಂದಾಗಿ ಎಸ್‌ಬಿಐಯಿಂದ ವಾಹನ, ಗೃಹ ಸಾಲ ಪಡೆದುಕೊಳ್ಳುವವರಿಗೆ ಅನುಕೂಲವಾಗಿ ಪರಿಣಮಿಸಲಿದೆ. ಆದರೆ ಉಳಿತಾಯ ಖಾತೆ ಗಳನ್ನು ಹೊಂದಿರುವವರಿಗೆ ಪ್ರತಿಕೂಲವಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ