‘ಗೂಗಲ್ ಫಾರ್ ಎಜುಕೇಷನ್’ನೊಂದಿಗೆ ‘ಕ್ಯೂ ಮ್ಯಾತ್’ ಪಾಲುದಾರಿಕೆ.!
ಶಿಕ್ಷಣ ಸಬಲೀಕರಣಕ್ಕೆ ಗೂಗಲ್ ಫಾರ್ ಎಜುಕಜೇಷನ್’ನೊಂದಿಗೆ ಕೈ ಜೋಡಿಸಿದ ‘ಕ್ಯೂ ಮ್ಯಾತ್’
Team Udayavani, Jun 13, 2021, 2:11 PM IST
ನವ ದೆಹಲಿ : ಡಿಜಿಟಲ್ ದೈತ್ಯ ಸಂಸ್ಥೆ ಗೂಗಲ್ ನೊಂದಿಗೆ “ಕ್ಯೂ ಮ್ಯಾತ್” ‘ಗೂಗಲ್ ಫಾರ್ ಎಜುಕೇಷನ್’ ನೊಂದಿಗೆ ಕೈ ಜೋಡಿಸಿದೆ.
ಹೌದು, ಬೋಧನಾ ಮತ್ತು ಕಲಿಯುವ ಅನುಭವದಲ್ಲಿ ಪರಿವರ್ತನೆ ತರಲು ಕೆ-12 ತರಗತಿಗಳ ಶಾಲಾ-ನಂತರ ಮ್ಯಾತ್ ಮತ್ತು ಕೋಡಿಂಗ್ ಪ್ರೋಗ್ರಾಂ, “ಕ್ಯೂಮ್ಯಾತ್” ಗೂಗಲ್ ಫಾರ್ ಎಜುಕೇಷನ್’ನೊಂದಿಗೆ ಕೈಜೋಡಿಸಿದೆ.
ಈ ಪಾಲುದಾರಿಕೆಯ ಭಾಗವಾಗಿ, ಕ್ಯೂ ಮ್ಯಾತ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ‘ಗೂಗಲ್ ಫಾರ್ ಎಜುಕೇಷನ್’ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಇದನ್ನೂ ಓದಿ : ಅನ್‌ಲಾಕ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ
ಈ ಪಾಲುದಾರಿಕೆಯ ಕಾರಣದಿಂದಾಗಿ ಕ್ಯೂ ಮ್ಯಾತ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಚಿಂತನೆಯಲ್ಲಿದ್ದು, ಪಠ್ಯ ಕ್ರಮದ ಉನ್ನತೀಕರಣದ ಬಗ್ಗೆ ಸಂಸ್ಥೆ ಕಾರ್ಯೋನ್ಮುಖವಾಗಿದೆ. ಈಗಿದ್ದ ಪಠ್ಯಕ್ರಮವನ್ನು ಎಷ್ಟು ಮಂದಿ ವಿದ್ಯಾರ್ಥಿಗಳು ಪ್ರಯೋಜನವನ್ನು ಪಡೆದಿದ್ದಾರೆಂದು ಪರೀಶೀಲಿಸಲಿದ್ದು, ಸಂವಾದಾತ್ಮಕ ಸಿಮ್ಯುಲೇಶನ್ ಗಳು ಮತ್ತು ಕಥೆ ಆಧಾರಿತ ವೀಡಿಯೊ ಕಂಟೆಂಟ್ ಗಳು ಆಸಕ್ತಿದಾಯಕ ವೈಟ್ ಬೋರ್ಡ್ ಚಟುವಟಿಕೆಗಳಂತಹ ಹೆಚ್ಚುವರಿ ವಿಷಯಗಳನ್ನು ಪಠ್ಯಕ್ರಮದಲ್ಲಿ ಜೋಡಿಸಿಕೊಳ್ಳುವತ್ತ ‘ಕ್ಯೂ ಮ್ಯಾತ್’ ಕಾರ್ಯ ವಹಿಸುತ್ತಿದೆ.
ಇನ್ನು, ಕ್ಯೂ ಮ್ಯಾತ್ ನ ಸಂಸ್ಥಾಪಕ ಮತ್ತು ಸಿಇಒ ಮನನ್ ಖುರ್ಮಾ ಈ ಪಾಲುದಾರಿಕೆಯ ಬಗ್ಗೆ ಮಾತನಾಡಿ, ‘ಗೂಗಲ್ ಫಾರ್ ಎಜುಕೇಷನ್’ ನೊಂದಿಗಿನ ನಮ್ಮ ಸಹಭಾಗಿತ್ವವು ವಿದ್ಯಾರ್ಥಿಗಳಿಗೆ ಜ್ಞಾನವನ್ನು ಪಡೆಯಲು ಮತ್ತು ನೈಜ-ಪ್ರಪಂಚದ ಕೌಶಲ್ಯಗಳನ್ನು ಕೇಂದ್ರೀಕರಿಸುವ ಸಾಮರ್ಥ್ಯಗಳನ್ನು ಬೆಳೆಸಲು ಅವಕಾಶವನ್ನು ನೀಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಗಣಿತದಲ್ಲಿ ಉತ್ತಮ ಜ್ಞಾನ ಪಡೆಯುವುದಕ್ಕೆ ಸಹಾಯ ಮಾಡುತ್ತದೆ. “ಗಣಿತವನ್ನು ಮಕ್ಕಳು ಸ್ವಾಭಾವಿಕವಾಗಿ ಕಲಿಯಲು ಅಗತ್ಯವಿರುವ ಕಲಿಕಾ ವೇದಿಕೆಗಳು, ಕಲಿಕೆಯ ನಿರ್ವಹಣಾ ವ್ಯವಸ್ಥೆಗಳು, ಸ್ಮಾರ್ಟ್ ತರಗತಿಗಳು ಈ ಪ್ರೋಗ್ರಾಂನಲ್ಲಿವೆ ಎಂದಿದ್ದಾರೆ.
‘ಗೂಗಲ್ ಫಾರ್ ಎಜುಕೇಷನ್’ ನಲ್ಲಿ ಮೂರು ಗಂಟೆಗಳ ಅವಧಿಯ ಪರೀಕ್ಷೆ ಇರಲಿದ್ದು, ಕ್ಯೂ ಮ್ಯಾತ್ ನ ಕೋಡಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಗೂಗಲ್ ನ ಸಿಎಸ್, ಮೊದಲ ಪಠ್ಯಕ್ರಮವನ್ನು ಕಲಿಸಲಾಗುತ್ತದೆ.
ಇದನ್ನೂ ಓದಿ : ಅನೈತಿಕ ಸಂಬಂಧ: ತಿಳಿ ಹೇಳಿದರೂ ಸರಿ ಹೋಗದ ವ್ಯಕ್ತಿಯನ್ನು ಹಲ್ಲೆ ಮಾಡಿ ಕೊಲೆಗೈದ ಸಂಬಂಧಿಕರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರೆನ್ಯೂ ಪವರ್ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ
ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ
ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ
ಲಕ್ಷಾಂತರ ಭಕ್ತರ ಮಧ್ಯೆ ಸಾಂಘವಾಗಿ ನೆರವೇರಿದ ಹುಲಿಗೆಮ್ಮದೇವಿ ಮಹಾ ರಥೋತ್ಸವ
ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ