ಹ್ಯಾಪಿ ಟ್ಯಾಕ್ಸ್‌ ಪ್ಲಾನಿಂಗ್‌

ಬಿಝಿನೆಸ್‌ ಗೈಡ್

Team Udayavani, Apr 4, 2019, 6:30 AM IST

tax

ಹೊಸ ವಿತ್ತ ವರ್ಷ 2019-20 ರ ಆರಂಭವಾಗಿದೆ.ಈ ಹೊಸ ವರ್ಷದಲ್ಲಿ ಫೆಬ್ರವರಿ 2019 ರ ಹೊಸ ಬಜೆಟ… ಪ್ರಕಾರ ಯಾವ ರೀತಿಯಲ್ಲಿ ಟ್ಯಾಕ್ಸ್‌ ಪ್ಲಾನಿಂಗ್‌ ಮಾಡಬೇಕು ಎನ್ನುವುದರ ಬಗ್ಗೆ ಚಿಂತನೆ ನಡೆಸಲು ಇದು ಸಕಾಲ.

ಈಸಾಲಿನ ಬಜೆಟ್‌ನ ಮುಖ್ಯ ಭೂಮಿಕೆಯಲ್ಲಿ ಇರುವುದು ಸೆಕ್ಷನ್‌ 87ಎ ರಿಯಾಯಿತಿ. ಅದರ ಪ್ರಕಾರ ಅದು ರೂ.5 ಲಕ್ಷದ ಒಳಗಿನ ಕರಾರ್ಹ ಆದಾಯ ಇರುವವರು ಯಾವುದೇ ಕರ ಕಟ್ಟಬೇಕಾಗಿಲ್ಲ. ಅವರಿಗೆ ಶೇ.100ರಷ್ಟು ಕರ ಮಾಫ್ ಸೌಲಭ್ಯ ಇರುತ್ತದೆ. ಈ ಸೆಕ್ಷನ್‌ ರೂ. 5 ಲಕ್ಷದ ಒಳಗಿನ ಕರಾರ್ಹ ಆದಾಯ ಇರುವವರಿಗೆ ಮಾತ್ರ ಲಭ್ಯವಾದ ಕಾರಣ ಸ್ವಾಭಾವಿಕವಾಗಿಯೇ ಎಲ್ಲರ ಗಮನವೂ ತಮ್ಮ ಕರಾರ್ಹ ಆದಾಯವನ್ನು 5 ಲಕ್ಷರೂ. ಒಳಕ್ಕೆ ಇಳಿಸುವಲ್ಲಿ ಇರುತ್ತದೆ. ಹೇಗಾದರೂ ಮಾಡಿ ಕರಾರ್ಹ ಆದಾಯವನ್ನು ರೂ 5 ಲಕ್ಷಕ್ಕಿಂತ ಕಡಿಮೆ ಮಾಡಲು ಈ ಕೆಳಗಿನ ಹೂಡಿಕೆ/ವೆಚ್ಚಗಳನ್ನು ಬಳಸಿಕೊಳ್ಳಬಹುದು ಮತ್ತು ಮುಂದಿನ 2019-20 ರ ವಿತ್ತ ವರ್ಷಕ್ಕೆ ಇವನ್ನೇ ಆಧಾರವಾಗಿ ಇಟ್ಟುಕೊಳ್ಳಬಹುದು.

ತೆರಿಗೆಯ ಹೊಸ 11 ಹಾದಿ

1. ಸ್ಟಾಂಡರ್ಡ್‌ ಡಿಡಕ್ಷನ್‌
ಸಂಬಳ ಪಡೆಯುವ ಉದ್ಯೋಗಿಗಳು ಹಾಗೂ ಪೆನÒನ್‌ ಪಡೆಯುವ ನಿವೃತ್ತರು ತಮ್ಮ ಸಂಬಳ ಅಥವಾ ಪೆನÒನ್‌ ಮೊತ್ತದಿಂದ ರೂ.50,000 ವನ್ನು ನೇರವಾಗಿ ಸ್ಟಾಂಡರ್ಡ್‌ ಡಿಡಕ್ಷನ್‌ ಹೆಸರಿನಲ್ಲಿ ಕಳೆಯಬಹುದಾಗಿದೆ.

2.ಗೃಹ ಸಾಲದ ಮೇಲಿನ ಬಡ್ಡಿ
ನೀವು ಗೃಹ ಸಾಲದ ಬಡ್ಡಿ ಪಾವತಿಸುವವರಾಗಿದ್ದಲ್ಲಿ ವಾರ್ಷಿಕ ರೂ. 2 ಲಕ್ಷದವರೆಗೆ ಸ್ವಂತ ವಾಸದ 2 ಮನೆಗಳ ಮೇಲೆ ಹಾಗೂ ಬಾಡಿಗೆ ನೀಡಿರುವ ಮನೆಯ ಮೇಲೆ ಪ್ರತ್ಯೇಕವಾಗಿ ಇನ್ನೂ 2 ಲಕ್ಷದ ಮಿತಿಯಲ್ಲಿ ಮರುಪಾವತಿ  ಸಿದ ಗೃಹಸಾಲದ ಬಡ್ಡಿಯನ್ನು ಐncಟಞಛಿ frಟಞ ಏಟusಛಿ ಟrಟಟಛಿrಠಿy ಅಡಿಯಲ್ಲಿ ಕಳೆಯಬಹುದು. ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರೆ ಆ ಆದಾಯ ತೋರಿಸಿ ಹೌಸ್‌ ಟ್ಯಾಕ್ಸ್‌ ಹಾಗೂ ಮತ್ತು ಬಾಡಿಗೆಯ ಶೇ. 30ರಷ್ಟು ವಿರ್ವಹಣಾ ವೆಚ್ಚಗಳನ್ನೂ ಕಳೆಯಬಹುದು.

3.ಎನ್‌.ಪಿ.ಎಸ್‌/ಅಟಲ… ಪೆನÒನ್‌
ಎನ್‌.ಪಿ.ಎಸ್‌ ದೇಣಿಗೆಯು 2 ಬೇರೆ ಬೇರೆ ಸೆಕ್ಷನ್‌ಗಳ ಅಡಿಯಲ್ಲಿ ಬರುತ್ತದೆ. ಮೂಲತಃ ಎನ್‌.ಪಿ.ಎಸ್‌ ದೇಣಿಗೆ ಸೆಕ್ಷನ್‌ 80ಸಿ ಸರಣಿಯಲ್ಲಿ ಅಡಿಯಲ್ಲಿ ಪಿಪಿಎಫ್, ಎನ್‌.ಎಸ್‌.ಸಿ, ಇ.ಎಲ್‌. ಎಸ್‌.ಎಸ್‌, ವಿಮೆ ಇತ್ಯಾದಿ ಬೇರೆ ಇತರ ಹೂಡಿಕೆಗಳ ಜೊತೆಗೆ 80 ಸಿಸಿಡಿ(1) ಅಡಿಯಲ್ಲಿ ಬರುತ್ತದೆ . ಅದನ್ನು ಆಮೇಲೆ ನೋಡೋಣ. ಆದರೆ, ಇತ್ತೀಚೆಗೆ ಅದನ್ನು ಇನ್ನೊಂದು ಸೆಕ್ಷನ್‌ 80 ಸಿಸಿಡಿ (1ಬಿ) ಅಡಿಯಲ್ಲಿ ಹೆಚ್ಚುವರಿ ದೇಣಿಗೆಯಾಗಿ ರೂ 50,000 ಮಿತಿಯಲ್ಲಿ ಕೂಡಾ ಸೇರಿಸಲಾಗಿದೆ. ಆ ಹೂಡಿಕೆಗೆ ಪ್ರತ್ಯೇಕವಾದ ಕರವಿನಾಯಿತಿ ಲಭ್ಯ. ಹಾಗಾಗಿ, ಮೊತ್ತ ಮೊದಲು ಎನ್‌.ಪಿ.ಎಸ್‌ ಹೂಡಿಕೆಯನ್ನು 80 ಸಿಸಿಡಿ (1ಬಿ) ಅಡಿಯಲ್ಲಿಯೇ ತೆಗೆದುಕೊಳ್ಳೋಣ. ಉಳಿದ ಮೊತ್ತವನ್ನು ಅಗತ್ಯ ಬಂದಲ್ಲಿ 80ಸಿಸಿಡಿ(1) ಅಡಿಯಲ್ಲಿ ತೆಗೆದುಕೊಳ್ಳಬಹುದು. (ಮೂರನೆಯದಾಗಿ, ಎನ್‌.ಪಿ.ಎಸ್‌ ಖಾತೆಯಲ್ಲಿ ಕಂಪೆನಿಯು ಮಾಡಿದ ದೇಣಿಗೆಯು 80ಸಿಸಿಡಿ(2) ಸೆಕ್ಷನ್ನಿನಲ್ಲಿ ಬರುತ್ತದೆ. ಅದನ್ನು ಉದ್ಯೋಗಿಗಳು ತಮ್ಮ ಲೆಕ್ಕದಲ್ಲಿ ಮುಟ್ಟುವಂತಿಲ್ಲ. ಅದು ಪ್ರತ್ಯೇಕ)

4. ಮೆಡಿಕಲ್‌ ಇನುÒರೆನ್ಸ್‌
ಇದು ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ಸಿಗುವ ತೆರಿಗೆ ರಿಯಾಯಿತಿ. ಸ್ವಂತ ಹಾಗೂ ಕುಟುಂಬ ದವರ ವಿಮೆಯ ಮೇಲೆ ರೂ.25,000 ಹಾಗೂ ಹೆತ್ತವರ ವಿಮೆಯ ಮೇಲೆ ಇನ್ನೊಂದು ರೂ. 25,000 ವರೆಗೆ ಕಟ್ಟಿದ ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿದೆ. ವಿಮಾ ಪ್ರೀಮಿಯಂಗಾಗಿ ಈ ಸೆಕ್ಷನ್‌ ಇದ್ದರೂ ಕೂಡಾ ವಾರ್ಷಿಕ ಸ್ವಾಸ್ಥ್ಯ ತಪಾಸಣೆಗಾಗಿ ರೂ 5,000ದ ಒಳಮಿತಿಯನ್ನು ಇದು ಹೊಂದಿರುತ್ತದೆ. 60 ದಾಟಿದ ಹಿರಿಯ ನಾಗರಿಕರಿಗೆ ಒಟ್ಟು ಮಿತಿ ರೂ.50,000 ಆಗಿದೆ. 60 ವರ್ಷ ದಾಟಿದ ಹಿರಿಯ ನಾಗರಿಕರು ವಿಮಾ ಪ್ರೀಮಿಯಂ ಕಟ್ಟದೆ ಇದ್ದಲ್ಲಿ ಅವರ ಮಿತಿಯನ್ನು ಸಂಪೂರ್ಣವಾಗಿ ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿಸಬಹುದು.

5. ಅವಲಂಬಿತರ ಅಂಗವೈಕಲ್ಯ
ಅವಲಂಬಿತರ ಅಂಗವೈಕಲ್ಯದ ವೈದ್ಯಕೀಯ ತರಬೇತಿ, ಪುನರ್ವಸತಿಗಾಗಿ ಅಥವಾ ಪಾಲನೆಗಾಗಿ ಕರವಿನಾಯಿತಿ ಸೌಲಭ್ಯ ನೀಡಲಾಗುತ್ತದೆ.
ಶೇ. 40-80 ಅಂಗವೈಕಲ್ಯ ಇದ್ದರೆ ವಾರ್ಷಿಕ ಮಿತಿ ರೂ. 75,000 ಹಾಗೂ ಶೇ.80 ಮೀರಿದ ತೀವ್ರವಾದ ಅಂಗವೈಕಲ್ಯವಿದ್ದರೆ ಈ ಮಿತಿ ರೂ.1,25,000 ಆಗಿರುತ್ತದೆ.

6.ಗಂಭೀರ ಖಾಯಿಲೆಗಳ ಚಿಕಿತ್ಸೆ
ಸ್ವಂತ ಹಾಗೂ ಅವಲಂಬಿತರ ಕ್ಯಾನ್ಸರ್‌, ನ್ಯುರೋ, ಥಲಸೇಮಿಯ, ರೀನಲ…, ಹೀಮೋಫಿಲಿಯಾ ಮುಂತಾದ ಕೆಲ ಗಂಭೀರ ಖಾಯಿಲೆಗಳ ಚಿಕಿತ್ಸೆಗಾಗಿ ಈ ಮಿತಿಯನ್ನು ಬಳಸಬಹುದು. ಮಿತಿ ರೂ 40000. ಆದರೆ, 60 ದಾಟಿದ ವರಿಷ್ಠರಿಗೆ ಈ ಮಿತಿ ರೂ 100000.

7. ವಿದ್ಯಾ ಸಾಲದ ಬಡ್ಡಿ
ಸ್ವಂತ ಹಾಗೂ ಕುಟುಂಬದವರ ಉನ್ನತ ವ್ಯಾಸಂಗಕ್ಕಾಗಿ ಪಡೆದ ವಿದ್ಯಾ ಸಾಲದ ಬಡ್ಡಿ ಯಾವುದೇ ಮಿತಿಯಿಲ್ಲದೆ 8 ವರ್ಷಗಳವರೆಗೆ ತೆರಿಗೆ ವಿನಾಯಿತಿ ಇದೆ.

8. ಡೊನೇಶನ್‌
ನಿಗದಿತ ಸಂಸ್ಥೆಗಳಿಗೆ ನೀಡಿದ ದಾನದ ಶೇ. 50 ಅಥವಾ 100ರಷ್ಟು – ಸರಕಾರ ನಿಗದಿಪಡಿಸಿದಂತೆ, ಸಂಬಳದ ಶೇ.10ರಷ್ಟು ಮೀರದಂತೆ; ನಿಮ್ಮ ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ.

9. ಬಾಡಿಗೆ ರಿಯಾಯಿತಿ
ಸಂಬಳ ಮೂಲಕ ಎಚ್‌ಆರ್‌ ಎ ಪಡೆಯದ ಹಾಗೂ ಸ್ವಂತ ಮನೆಯಿಲ್ಲದೆ ವಾಸ್ತವದಲ್ಲಿ ಬಾಡಿಗೆ ಮನೆಯಲ್ಲಿದ್ದು ಬಾಡಿಗೆ ನೀಡುತ್ತಿರುವವರಿಗೆ ಗರಿಷ್ಠ ವಾರ್ಷಿಕ ರೂ 60,000 ವರೆಗೆ ವಿನಾಯಿತಿ ಸಿಗುತ್ತದೆ. ಇದಕ್ಕೆ ಕೆಲವು ನಿಯಮಗಳು ಅನ್ವಯಿಸುತ್ತದೆ.

10. ಸ್ವಂತ ಅಂಗವೈಕಲ್ಯ
ಸ್ವಂತ ಅಂಗವೈಕಲ್ಯದ ಚಿಕಿತ್ಸೆಗಾಗಿ ರೂ. 75,000 ಮತ್ತು ಗಂಭೀರ ಊನಕ್ಕೆ ರೂ.1,25,000 ವಾರ್ಷಿಕ ರಿಯಾಯಿತಿ ಲಭ್ಯವಿದೆ. ಮೇಲ್ಕಾಣಿಸಿದ ರಿಯಾಯಿತಿಗಳನ್ನು ಒಂದೊಂದಾಗಿ ಪರಿಗಣಿಸಬೇಕು. ಅದಾದ ಮೇಲೆ, ಪ್ರತ್ಯೇಕವಾಗಿ ಈ ಕೆಳಗಿನ ಸೆಕ್ಷನ್‌ 80ಸಿ ಸರಣಿಯ ಅಡಿಯಲ್ಲಿ ಮಾಡಿದ ಹೂಡಿಕೆಗಳಿಗೆ ಒಟ್ಟಾರೆ ಮೊತ್ತ ರೂ 1.5 ಲಕ್ಷದವರೆಗೆ ಕರ ವಿನಾಯಿತಿಯನ್ನು ನೀಡಲಾಗಿದೆ. ಇವುಗಳಲ್ಲಿ ಹೂಡಿದ ಮೊತ್ತವನ್ನು ಈ ವರ್ಷದ ಆದಾಯದಿಂದ ನೇರವಾಗಿ ಕಳೆಯಬಹುದು.

11. ಎಸ್‌.ಬಿ/ಎಫ್.ಡಿ/ಆರ್‌.ಡಿ ಬಡ್ಡಿಗೆ ಕರವಿನಾಯಿತಿ
ಸೆಕ್ಷನ್‌ 80ಟಿಟಿಎ ಅನುಸಾರ ಬ್ಯಾಂಕ್‌ ಮತ್ತು ಅಂಚೆಕಚೇರಿಗಳಲ್ಲಿ ಕೇವಲ ಎಸ್‌ ಬಿಖಾತೆಯಲ್ಲಿ ಬರುವ ಬಡ್ಡಿಗೆ ರೂ 10,000ದ ವರೆಗೆ ಕರ ವಿನಾಯಿತಿ ಇದೆ. ಅಲ್ಲದೆ, ಕೇವಲ ಹಿರಿಯ ನಾಗರಿಕರಿಗೆ ಮಾತ್ರವೇ (ಎಲ್ಲರಿಗೂ ಅಲ್ಲ) ಅನ್ವಯಿಸುವಂತೆ ಒಂದು ಹೊಸ ಸೆಕ್ಷನ್‌ 80ಟಿಟಿಬಿ ಅನುಸಾರ ರೂ 50,000 ದವರೆಗೆ ಬ್ಯಾಂಕ್‌ ಬಡ್ಡಿಯ ಮೇಲೆ ಕರ ವಿನಾಯಿತಿ ನೀಡಲಾಗಿದೆ. (ಹಿರಿಯ ನಾಗರಿಕರಿಗೆ 80ಟಿಟಿಎ ಅನ್ವಯವಾಗುವುದಿಲ್ಲ). ಈ ರೂ 50,000 ದಲ್ಲಿ ಬ್ಯಾಂಕು, ಪೋಸ್ಟಾμàಸುಗಳ ಎಸ್‌.ಬಿ ಬಡ್ಡಿಯ ಜೊತೆಗೆ ಎಫ್ಡಿಮತ್ತು ಆರ್‌.ಡಿ ಗಳ ಬಡ್ಡಿಯನ್ನೂ ಇದೀಗ ಸೇರಿಸಬಹುದಾಗಿದೆ. (ಹೌದು, ಪೆನÒನ್‌ ಆದಾಯ ಇರುವ ಹಿರಿಯ ನಾಗರಿಕರು ಬಡ್ಡಿಯ ಮೇಲೆ ಈ 50,000 ಹಾಗೂ ಪೆನÒನ್‌ ಮೇಲೆ ಸ್ಯಾಂಡರ್ಡ್‌ ಡಿಡಕ್ಷನ್‌ನ ಆ 50,000 ಎರಡನ್ನೂ ಪಡೆಯಬಹುದು. ಸಂಶಯವೇ ಬೇಡ)

  • ಜಯದೇವ ಪ್ರಸಾದ ಮೊಳೆಯಾರ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.