ಕೋವಿಡ್ ಲಾಕ್ ಡೌನ್ ಆಘಾತದಿಂದ ಇನ್ನೂ ಚೇತರಿಕೆಯಾಗಿಲ್ಲ ಹೌಸ್ ಹೋಲ್ಡ್ ಇನ್ ಕಮ್ ..!  

ಸಮಸ್ಯೆಯ ಮೂಟೆಯಾದ ನಿರುದ್ಯೋಗ

Team Udayavani, Mar 1, 2021, 11:37 AM IST

Indian household incomes still haven’t recovered from the Covid-19 shock

ಸಾಂದರ್ಭಿಕ ಚಿತ್ರ

ನವ ದೆಹಲಿ : ಭಾರತೀಯ ಆದಾಯವು ಕೆಳಮುಖ ಮಾಡಿತ್ತು  ಮತ್ತು ನಂತರ ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಆರ್ಥಿಕ ಸ್ಥಿತಿಯ ಮೇಲೆ ಭಾರಿ ದೊಡ್ಡ ಪರಿಣಾಮವನ್ನು ಕೂಡ ಬೀರಿತು.

ಆರ್ಥಿಕ ಕುಸಿತದಿಂದಾಗಿ ಗ್ರಾಮೀಣ ಮತ್ತು ನಗರ ಭಾರತದಲ್ಲಿ ಹೌಸ್ ಹೋಲ್ಡ್ ಇನ್ ಕಮ್ ಸೆಪ್ಟೆಂಬರ್ 2019 ರಿಂದ ಇಳಿಮುಖವಾಗಲು ಪ್ರಾರಂಭವಾಯಿತು. ಅಶೋಕ ವಿಶ್ವವಿದ್ಯಾಲಯದ ಆರ್ಥಿಕ ದತ್ತಾಂಶ ಮತ್ತು ವಿಶ್ಲೇಷಣೆ ಕೇಂದ್ರದಿಂದ ವಿಶ್ಲೇಷಿಸಲ್ಪಟ್ಟ ವ್ಯಾಪಾರ ಮಾಹಿತಿ ಕಂಪನಿ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಮಾಹಿತಿಯ ಪ್ರಕಾರ, ಏಪ್ರಿಲ್ 2020 ರಲ್ಲಿ ಹೌಸ್ ಹೋಲ್ಡ ಇನ್ ಕಮ್  ಬಾರಿ ಕುಸಿತ ಕಂಡಿರುವುದನ್ನು ಕಾಣಬಹುದಾಗಿದೆ.

ಓದಿ : ನಾನು ಕೇವಲ ನಟಿಯಲ್ಲ, ಉದ್ಯಮಿಯೂ ಆಗಿದ್ದೇನೆ:  ಪೂಜಾ ಗಾಂಧಿ

ಕಳೆದ ವರ್ಷ ಮಾರ್ಚ್ 24 ರಂದು ಭಾರತ ಸರ್ಕಾರವು  ಕಟ್ಟುನಿಟ್ಟಾದ ಕೋವಿಡ್ -19 ಲಾಕ್‌ ಡೌನ್‌ ಘೋಷಿಸಿದ ನಂತರದ ಮೊದಲ ಪೂರ್ಣ ತಿಂಗಳು ಏಪ್ರಿಲ್ ನಲ್ಲಿ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡವು, ಅದು ಆರ್ಥಿಕ ವಿಚಾರದ ಮೇಲೆ ಬಾರಿ ಹೊಡೆತ ಬಿದ್ದಿತ್ತು. ಶಾಲೆ ಮತ್ತು ಸಿನೆಮಾ ಹಾಲ್‌ ಗಳಿಂದಾದಿಯಾಗಿ ಕಚೇರಿಗಳು ಮತ್ತು ಕಾರ್ಖಾನೆಗಳು ಎಲ್ಲವೂ ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು. ಏಪ್ರಿಲ್ ಮತ್ತು ಮೇ ಅವಧಿಯಲ್ಲಿ, ಹಲವಾರು ಕಂಪನಿಗಳು ಬಾರಿ ವೇತನ ಕಡಿತವನ್ನು ಘೋಷಿಸಿದವು, ಮತ್ತು ಇದಕ್ಕೆ ಕೋವಿಡ್ ನೆಪವನ್ನು ಕೂಡ ಹೇಳಿದವು. ಇದು ಸೆಂಟರ್ ಫಾರ್ ಎಕನಾಮಿಕ್ ಡಾಟಾ ಮತ್ತು ಅನಾಲಿಸಿಸ್ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಹೌಸ್ ಹೋಲ್ಡ ಇನ್ ಕಮ್ ಆವಿಷ್ಕಾರಗಳಿಗೆ ಅನುರೂಪವಾಗಿದೆ.

ಭಾರತದ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್ ನಿಂದ ಜೂನ್) 23.9% ನಷ್ಟು ಆರ್ಥಿಕ ಕುಸಿತ ಕಂಡಿದ್ದು, ಇದು ಕನಿಷ್ಠ ನಾಲ್ಕು ದಶಕಗಳಲ್ಲಿ ಮೊದಲ ಮತ್ತು ಅತಿದೊಡ್ಡ ಒಟ್ಟು ದೇಶೀಯ ಉತ್ಪನ್ನದ ಕುಸಿತವಾಗಿದೆ.

ಓದಿ : “ಮುಂಜಾನೆ ಮಂಜಲ್ಲಿ….” ಕರಾವಳಿಯ ವಿವಿಧೆಡೆ ಮಂಜು ಮುಸುಕಿದ ವಾತಾವರಣ

ನವೆಂಬರ್ 2019 ರಿಂದ, ಕೋವಿಡ್ ಪ್ಯಾಂಡಮಿಕ್ ಮತ್ತು ಲಾಕ್‌ ಡೌನ್ ಹೊಡೆತಕ್ಕೆ ಮುಂಚೆಯೇ ಗ್ರಾಮೀಣ ಮತ್ತು ನಗರ ಭಾರತದಲ್ಲಿ ಒಟ್ಟು ಹೌಸ್ ಹೋಲ್ಡ್ ಇನ್ ಕಮ್ ಕೆಳ ಮುಖ ಪ್ರವೃತ್ತಿಯಲ್ಲಿದೆ ಆದರೆ ಬಾರಿ ಕುಸಿತವು ಏಪ್ರಿಲ್ 2020 ರಲ್ಲಿ (ಲಾಕ್‌ ಡೌನ್‌ ನ ಮೊದಲ ಪೂರ್ಣ ತಿಂಗಳು) 19% ನಷ್ಟು ಕುಸಿತದೊಂದಿಗೆ ಮತ್ತು ಗ್ರಾಮೀಣ ಮತ್ತು ನಗರ ಭಾರತದಲ್ಲಿ ಕ್ರಮವಾಗಿ 41%, ”ಸೆಂಟರ್ ಫಾರ್ ಎಕನಾಮಿಕ್ ಡಾಟಾ ಅಂಡ್ ಅನಾಲಿಸಿಸ್ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಬುಲೆಟಿನ್ ಗಮನಿಸಿದೆ.

ಗ್ರಾಮೀಣ ಮತ್ತು ನಗರ ಒಟ್ಟು ವೇತನದ ವಿಷಯದಲ್ಲಿನ ಕುಸಿತವು ಒಟ್ಟು ಹೌಸ್ ಹೋಲ್ಡ್ ಇನ್ ಕಮ್ ಗೆ ಸಮಾನವಾದ ಪ್ರವೃತ್ತಿಯನ್ನು ತೋರಿಸಿದೆ.  ಗ್ರಾಮೀಣ ಭಾರತದಲ್ಲಿನ ಸಂಪೂರ್ಣ ವೇತನ ಕುಸಿತ ಕಂಡಿದ್ದು, ನಗರ ಪ್ರದೇಶಕ್ಕೂ ಪ್ರಭಾವ ಬೀರಿದೆ.

ಸಮಸ್ಯೆಯ ಮೂಟೆಯಾದ ನಿರುದ್ಯೋಗ :

ಭಾರತವು ಜೂನ್‌ ನಲ್ಲಿ ನಿಧಾನವಾಗಿ “ಅನ್ಲಾಕ್” ಆಗಲು ಪ್ರಾರಂಭಿಸಿದ ನಂತರ, ಆದಾಯವು ಸ್ವಲ್ಪ ಚೇತರಿಕೆಗೆ ಮಟ್ಟವನ್ನು ಕಂಡಿತ್ತಾದರೂ. ನಗರ ಹೌಸ್ ಹೋಲ್ಡ್ ವಿಷಯದಲ್ಲಿ, ಮೇ ಮತ್ತು ಜೂನ್ ತಿಂಗಳುಗಳಲ್ಲಿ V ಆಕಾರದ (Up and Down) ತೀಕ್ಷ್ಣವಾದ ಚೇತರಿಕೆ ಕಂಡುಬಂದಿದೆ. ಆದರೆ ಈ ಬೆಳವಣಿಗೆಯು ನಿಧಾನವಾಯಿತು ಮತ್ತು ಆದಾಯವು ಸೆಪ್ಟೆಂಬರ್ 2020 ರಲ್ಲಿ ಕೋವಿಡ್ ಪರಿಸ್ಥಿತಿಯ ಪೂರ್ವ ಮಟ್ಟಕ್ಕಿಂತ ಕಡಿಮೆಯಾಗಿದೆ.

ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಸ್ವಲ್ಪ ಮಟ್ಟಿಗೆ ಆರ್ಥಿಕ ಚೇತರಿಕೆ ಕಂಡುಬಂದಾಗ 2020 ರ ಸೆಪ್ಟೆಂಬರ್ ನಂತರ ಈ ಸನ್ನಿವೇಶವು ಸುಧಾರಿಸಿದೆ ಎಂದು ಹೇಳಬಹುದು, ಆದರೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ದತ್ತಾಂಶವು ಡಿಸೆಂಬರ್‌ನಲ್ಲಿ ನಿರುದ್ಯೋಗ ಸಮಸ್ಯೆಯು 9% ಕ್ಕಿಂತ ಹೆಚ್ಚಾಗಿದೆ ಎಂದು ತೋರಿಸುತ್ತದೆ, ಇದು ಹೌಸ್ ಹೋಲ್ಡ್ ಇನ್ ಕಮ್ ನ ಮೇಲೆ ನೇರ ಪರಿಣಾಮ ಬೀರುತ್ತದೆ.

“ಸೆಪ್ಟೆಂಬರ್ 2020 ರವರೆಗೆ ಉದ್ಯೋಗ ಚೇತರಿಕೆ ಸ್ಥಿರವಾಗಿದ್ದರೂ, ಅದು ಅಕ್ಟೋಬರ್ 2020 ರಿಂದ ಕುಂಠಿತಗೊಳ್ಳಲು ಪ್ರಾರಂಭಿಸಿದೆ” ಎಂದು ನಾವು ಗಮನಿಸಬಹುದುದಾಗಿದೆ.

ಮೂಲ : Scroll.in , Quartz India

ಓದಿ : ಸಿಹಿ-ಕಹಿ ನಡುವೆ ವರ್ಕ್‌ ಫ್ರಂ ಹೋಂ : ವರ್ಕ್‌ ಫ್ರಂ ಹೋಂಗೆ ಒನ್‌ ಇಯರ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.