ಜಿಎಸ್ಟಿ ಎಚ್ಚರಿಕೆಯ ನಡೆ: ಮುಂಬಯಿ ಶೇರು 154 ಅಂಕ ಕುಸಿತ
Team Udayavani, Jun 30, 2017, 11:55 AM IST
ಮುಂಬಯಿ : ಇಂದು ಶುಕ್ರವಾರ ಮಧ್ಯರಾತ್ರಿ ಐತಿಹಾಸಿಕ ಜಿಎಸ್ಟಿ ಅನುಷ್ಠಾನಗೊಳ್ಳುವುದಕ್ಕೆ ವಿಶೇಷ ಸಂಸತ್ ಅಧಿವೇಶನ ಸಾಕ್ಷಿಯಾಗಲಿದ್ದು ಅದಕ್ಕೆ ಮುನ್ನ ಜಿಎಸ್ಟಿ ಕುರಿತಾದ ಭಯ, ಆತಂಕ, ಗೊಂದಲ ಇತ್ಯಾದಿಗಳಿಂದಾಗಿ ಮುಂಬಯಿ ಶೇರು ಪೇಟೆ ಇಂದಿನ ಆರಂಭಿಕ ವಹಿವಾಟಿನಲ್ಲಿ 154 ಅಂಕಗಳ ಕುಸಿತಕ್ಕೆ ಗುರಿಯಾಯಿತು.
ಇದರೊಂದಿಗೆ ಇಂದು ಆರಂಭಗೊಂಡ ಜುಲೈ ತಿಂಗಳ ವಾಯಿದೆ ವಹಿವಾಟು ನೇತ್ಯಾತ್ಮಕ ಚಾಲನೆಯನ್ನು ಪಡೆದುಕೊಂಡಿತು.
ಬೆಳಗ್ಗೆ 12 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 61.42 ಅಂಕಗಳ ನಷ್ಟದೊಂದಿಗೆ 30,796.10 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 21.35 ಅಂಕಗಳ ನಷ್ಟದೊಂದಿಗೆ 9,482.75 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು.
ಬೆಳಗ್ಗಿನ ವಹಿವಾಟಿನಲ್ಲಿ ಸನ್ ಫಾರ್ಮಾ, ಬ್ಯಾಂಕ್ ಆಫ್ ಬರೋಡ, ಅರಬಿಂದೋ ಫಾರ್ಮಾ, ಐಟಿಸಿ ಮತ್ತು ಸಿಪ್ಲಾ ಟಾಪ್ ಗೇನರ್ ಆಗಿದ್ದವು. ಲಾರ್ಸನ್, ಟಾಟಾ ಮೋಟರ್, ಭಾರ್ತಿ ಏರ್ಟೆಲ್, ಐಸಿಐಸಿಐ ಬ್ಯಾಂಕ್ ಟಾಪ್ ಲೂಸರ್ ಎನಿಸಿಕೊಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ