ಮೊದಲ ಹಂತದ ಚುನಾವಣೆ: ಮುಂಬಯಿ ಶೇರು ಪೇಟೆಯಲ್ಲಿ ಎಚ್ಚರಿಕೆಯ ನಡೆ

Team Udayavani, Apr 11, 2019, 11:08 AM IST

ಮುಂಬಯಿ : 91 ಲೋಕಸಭಾ ಕ್ಷೇತ್ರಗಳಿಗೆ ಇಂದು ಮೊದಲ ಹಂತದ ಚುನಾವಣೆ ಆರಂಭಗೊಂಡಿದ್ದು ಮುಂಬಯಿ ಶೇರು ಪೇಟೆಯಲ್ಲಿ ಹೂಡಿಕೆದಾರರು ಮತ್ತು ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿರುವ ಕಾರಣ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೂಚ್ಯಂಕಗಳು ಅಲ್ಪ ಏರಿಕೆಯನ್ನು ದಾಖಲಿಸಿವೆ.

ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್‌ 45.12 ಅಂಕಗಳ ಮುನ್ನಡೆಯೊಂದಿಗೆ 38,630.47 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 13.20 ಅಂಕಗಳ ಏರಿಕೆಯೊಂದಿಗೆ 11,597.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ನಿನ್ನೆ ಬುಧವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 353.87 ಅಂಕಗಳ ಭಾರೀ ಕುಸಿತಕ್ಕೆ ಗುರಿಯಾಗಿತ್ತು.

ಇಂದಿನ ವಹಿವಾಟಿನ ಟಾಪ್‌ ಗೇನರ್‌ಗಳಾದ ಭಾರ್ತಿ ಏರ್‌ಟೆಲ್‌, ಏಶ್ಯನ್‌ ಪೇಂಟ್‌, ಮಹೀಂದ್ರ, ಎಚ್‌ಯುಎಲ್‌, ಬಜಾಜ್‌ ಆಟೋ, HDFC, ಕೋಲ್‌ ಇಂಡಿಯಾ, ಲಾರ್ಸನ್‌, ಐಟಿಸಿ ಮತ್ತು ಎಚ್‌ ಡಿ ಎಫ್ ಸಿ ಬ್ಯಾಂಕ್‌ ಶೇರುಗಳು ಶೇ.1.85ರ ಏರಿಕೆಯನ್ನು ಕಂಡವು.

ಡಾಲರ್‌ ಎದುರಿನ ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಗಿ 9 ಪೈಸೆಗಳ ಕುಸಿತವನ್ನು ಕಂಡು 69.20 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ