ಸಹೋದ್ಯೋಗಿ ಜತೆ ಲೈಂಗಿಕ ಸಂಬಂಧ; ಮೆಕ್ ಡೋನಾಲ್ಡ್ ಸಿಇಒಗೆ ಗೇಟ್ ಪಾಸ್!

ಕಂಪನಿಯ ನಿಯಮ ಗಾಳಿಗೆ ತೂರಿದ್ದ ಮೆಕ್ ಡೋನಾಲ್ಡ್ ಸಿಇಒ ಸ್ಟೀವ್ ಈಸ್ಟರ್ ಬ್ರೂಕ್

Team Udayavani, Nov 4, 2019, 6:19 PM IST

ವಾಷಿಂಗ್ಟನ್: ಕಂಪನಿಯ ನಿಯಮಗಳನ್ನು ಉಲ್ಲಂಘಿಸಿ ಮಹಿಳಾ ಸಹೋದ್ಯೋಗಿ ಜತೆ ಸಮ್ಮತಿಯ ಸಂಬಂಧ ಹೊಂದಿದ್ದ ಆರೋಪದ ಮೇಲೆ ಪ್ರತಿಷ್ಠಿತ ಮೆಕ್ ಡೋನಾಲ್ಡ್ ಕಂಪನಿಯ ಸಿಇಒ ವನ್ನು ಕಂಪನಿಯಿಂದ ಹೊರಹಾಕಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ಮೆಕ್ ಡೋನಾಲ್ಡ್ ಕಂಪನಿಯ ನಿಯಮದ ಪ್ರಕಾರ ಮ್ಯಾನೇಜರ್ ಆಗಲಿ ಅಥವಾ ಉನ್ನತ ಹುದ್ದೆಯಲ್ಲಿರುವ ಯಾರೇ ಆಗಲಿ ಸಹೋದ್ಯೋಗಿ ಜತೆ ನೇರ ಅಥವಾ ಪರೋಕ್ಷವಾಗಿ ಪ್ರೇಮ ಸಂಬಂಧ ಹೊಂದುವಂತಿಲ್ಲ.

ಇದೀಗ ಕಂಪನಿಯ ನಿಯಮ ಗಾಳಿಗೆ ತೂರಿದ್ದ ಮೆಕ್ ಡೋನಾಲ್ಡ್ ಸಿಇಒ ಸ್ಟೀವ್ ಈಸ್ಟರ್ ಬ್ರೂಕ್ ಅವರನ್ನು ಕಂಪನಿಯಿಂದ ವಜಾಗೊಳಿಸಿದೆ. ತಾನು ಕಂಪನಿಯ ಸಹೋದ್ಯೋಗಿ ಜತೆ ಸಂಬಂಧ ಹೊಂದಿದ್ದು, ಇದು ನನ್ನ ತಪ್ಪು ಎಂದು ಉದ್ಯೋಗಿಗಳಿಗೆ ಈಸ್ಟರ್ ಬ್ರೂಕ್ ಬರೆದಿರುವ ಇ-ಮೇಲ್ ಸಂದೇಶದಲ್ಲಿ ತಿಳಿಸಿದ್ದಾರೆ.

ಕಂಪನಿ ನನಗೆ ಉತ್ತಮ ಅವಕಾಶ ನೀಡಿದೆ. ಕಂಪನಿಯ ನಿಯಮ ಉಲ್ಲಂಘಿಸಿರುವ ನಾನು ಮಂಡಳಿಯ ನಿರ್ಧಾರವನ್ನು ಒಪ್ಪಿದ್ದು, ಇದೀಗ ಕಂಪನಿಯಿಂದ ಹೊರಹೋಗಬೇಕಾದ ಸಮಯ ಬಂದಿದೆ ಎಂದು ಇ-ಮೇಲ್ ನಲ್ಲಿ ಬ್ರೂಕರ್ ವಿವರಿಸಿದ್ದಾರೆ ಎಂದು ವರದಿ ಹೇಳಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ