ಮಾರಾಮಾರಿ ಆಯ್ತು, ದೆಹಲಿ ಮತ್ತೊಂದು ಕೋರ್ಟ್ ನಲ್ಲಿ ವಕೀಲರಿಂದ ಪೊಲೀಸ್ ಮೇಲೆ ಹಲ್ಲೆ

Team Udayavani, Nov 4, 2019, 5:57 PM IST

ನವದೆಹಲಿ: ದೆಹಲಿಯ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ಪೊಲೀಸರು, ವಕೀಲರ ನಡುವೆ ಘರ್ಷಣೆ ನಡೆದ ಎರಡು ದಿನದ ನಂತರ ಸೋಮವಾರ ದೆಹಲಿ ಸಾಕೇತ್ ಕೋರ್ಟ್ ಆವರಣದ ಹೊರಗೆ ವಕೀಲರ ಗುಂಪೊಂದು ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಈ ಘಟನೆ ನಡೆಯುತ್ತಿದ್ದಾಗ ಹೊರ ಭಾಗದಲ್ಲಿ ನಿಂತಿದ್ದವರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಚಿತ್ರೀಕರಣ ಮಾಡಿದ್ದರು. ಆ ವೀಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಬೈಕ್ ನಲ್ಲಿ ಕುಳಿತಿದ್ದ ಪೊಲೀಸ್ ಒಬ್ಬರನ್ನು ಆರು ಮಂದಿ ವಕೀಲರು ಸುತ್ತುವರಿದಿದ್ದರು. ಈ ವೇಳೆ ವಕೀಲರು ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದರು. ಹೇಗೋ ಬೈಕ್ ಅನ್ನು ತಿರುಗಿಸಿಕೊಂಡು ಪೊಲೀಸ್ ಹೊರಟಾಗ ವಕೀಲರೊಬ್ಬರು ಹೆಲ್ಮೆಟ್ ಅನ್ನು ಬೈಕ್ ನತ್ತ ಎಸೆದಿರುವುದು ವೀಡಿಯೋದಲ್ಲಿ ದಾಖಲಾಗಿದೆ ಎಂದು ವರದಿ ವಿವರಿಸಿದೆ.

ಇತ್ತೀಚೆಗಷ್ಟೇ ದೆಹಲಿಯ ತೀಸ್ ಹಜಾರಿ ಕೋರ್ಟ್ ಸಂಕೀರ್ಣದಲ್ಲಿ ವಕೀಲರು ಮತ್ತು ಪೊಲೀಸರ ನಡುವೆ ಮಾರಾಮಾರಿ ನಡೆದಿದ್ದು, 28 ಮಂದಿ ಗಾಯಗೊಂಡಿದ್ದರು. 20 ವಾಹನಗಳನ್ನು ಜಖಂಗೊಳಿಸಲಾಗಿತ್ತು. ಕೆಲವು ವಾಹನಕ್ಕೆ ಬೆಂಕಿ ಹಚ್ಚಿದ್ದ ಘಟನೆ ನಡೆದಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ