18 ವರ್ಷದ ಉದ್ಯಮಿಯ ನೆರವಿಗೆ ನಿಂತ ರತನ್ ಟಾಟಾ
ಜೆನೆರಿಕ್ ಆಧಾರ್‌ನ ಶೇ.50ರಷ್ಟು ಷೇರು ಖರೀದಿ
Team Udayavani, May 8, 2020, 1:40 PM IST
ಮುಂಬೈ: ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಬೇಕು ಎಂದು ಎಲ್ಲರೂ ಹೇಳುತ್ತಾರೆ, ಆದರೆ ಮಾಡುವುದಿಲ್ಲ. ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಇಂತಹ ಕೆಲಸ ಮಾಡುತ್ತ ಯುವಕರನ್ನು ಪ್ರೋತ್ಸಾಹಿಸುತ್ತಲೇ ಇದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಈಗ ಸಿಕ್ಕಿದೆ. ಮುಂಬೈ ಮೂಲದ 18 ವರ್ಷದ ಉದ್ಯಮಿ ಅರುಣ್ ದೇಶಪಾಂಡೆ ಆರಂಭಿಸಿರುವ, ಜೆನೆರಿಕ್ ಆಧಾರ್ ಔಷಧ ಕಂಪನಿಯ ಶೇ.50ರಷ್ಟು ಷೇರುಗಳನ್ನು ರತನ್ ಖರೀದಿಸಿದ್ದಾರೆ. ಆದರೆ ಇದು ಟಾಟಾ ಕಂಪನಿಯಿಂದ ಮಾಡಿರುವ ಹೂಡಿಕೆಯಲ್ಲ, ಖಾಸಗಿಯಾಗಿ ಟಾಟಾ ಅವರ ಹೂಡಿಕೆಯಿದು. ಎಷ್ಟು ಹಣ ನೀಡಿದ್ದಾರೆ ಎಂಬ ಮಾಹಿತಿ ಇನ್ನೂ ಪ್ರಕಟವಾಗಿಲ್ಲ.
ಜೆನೆರಿಕ್ ಆಧಾರ್ ಕಡಿಮೆ ಬೆಲೆಗೆ ಔಷಧಗಳನ್ನು ವಿತರಿಸುವ ಮಳಿಗೆಗಳನ್ನು ಹೊಂದಿದೆ. ಈಗ ಮುಂಬೈ, ಬೆಂಗಳೂರು, ಪುಣೆ, ಒಡಿಶಾದ ಈ ಕಂಪನಿಯ ಮಳಿಗೆಗಳಿವೆ. ಮುಂದೆ ಗುಜರಾತ್, ಆಂಧ್ರಪ್ರದೇಶ, ತಮಿಳು ನಾಡುಗಳಲ್ಲೂ ಶಾಖೆ ವಿಸ್ತರಿಸಿ, ಒಟ್ಟಾರೆ ಮಳಿಗೆಗಳ ಸಂಖ್ಯೆಯನ್ನು 1000ಕ್ಕೇರಿಸುವ ಉದ್ದೇಶ ಹೊಂದಿದ್ದಾರೆ. ರತನ್ ಟಾಟಾ ಅವರು, ಈ ಹಿಂದೆ ಓಲಾ, ಪೇಟಿಎಂ, ಸ್ನ್ಯಾಪ್‌ಡೀಲ್, ಕ್ಯೂರ್‌ಫಿಟ್, ಅರ್ಬನ್ ಲ್ಯಾಡರ್, ಲೆನ್ಸ್‌ಕಾರ್ಟ್, ಲಿಬರೇಟ್ ಕಂಪನಿಗಳಲ್ಲೂ ಹೂಡಿಕೆ ಮಾಡಿದ್ದಾರೆ. ಇವೆಲ್ಲ ಯಶಸ್ಸನ್ನು ದಾಖಲಿಸಿವೆಎಂಬುದಿಲ್ಲಿ ಗಮನಾರ್ಹ. ಎರಡು ವರ್ಷಗಳ ಹಿಂದೆ ಅರುಣ್ ಆರಂಭಿಸಿರುವ ಜೆನೆರಿಕ್ ಆಧಾರ್, ಈಗ ವಾರ್ಷಿಕ 6 ಕೋಟಿ ರೂ. ಆದಾಯ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ