ಮಾಮೂಲಿ ಮುಂಗಾರು, ಬಂಪರ್‌ ಕಾರ್ಪೊರೇಟ್‌ ಫ‌ಲಿತಾಂಶ; ಸೆನ್ಸೆಕ್ಸ್‌ 370 ಅಂಕ ಜಂಪ್‌

Team Udayavani, Apr 16, 2019, 4:48 PM IST

ಮುಂಬಯಿ : ಈ ಬಾರಿಯ ಮುಂಗಾರು ಬಹುತೇಕ ಮಾಮೂಲಿಯಾಗಿ ಇರಲಿದೆ ಎಂಬ ತಾಜಾ ಅಂದಾಜು ವರದಿಯಿಂದ ಮತ್ತು ಕಾರ್ಪೊರೇಟ್‌ ಫ‌ಲಿತಾಂಶಗಳ ಬಂಪರ್‌ ಶುಭಾರಂಭದಿಂದ ಉತ್ತೇಜಿತವಾದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 369.80 ಅಂಕಗಳ ಜಿಗಿತದೊಂದಿಗೆ 39,275.64 ಅಂಕಗಳ ಹೊಸ ದಾಖಲೆಯ ಮಟ್ಟದಲ್ಲಿ ಕೊನೆಗೊಳಿಸಿತು.

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 97 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,787.15ರ ಹೊಸ ಎತ್ತರದಲ್ಲಿ ಕೊನೆಗೊಳಿಸಿತು.

ಇಂದಿನ ವಹಿವಾಟಿನ ಟಾಪ್‌ ಗೇನರ್‌ಗಳಾದ ಇಂಡಸ್‌ ಇಂಡ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಒಎನ್‌ಜಿಸಿ, ಲಾರ್ಸನ್‌, ಮಾರುತಿ, ಏಶ್ಯನ್‌ ಪೇಂಟ್‌, ಬಜಾಜ್‌ ಆಟೋ, ಹೀರೋ ಮೋಟೋ ಕಾರ್ಪ್‌, ಕೋಟಕ್‌ ಬ್ಯಾಂಕ್‌, ಟಿಸಿಎಸ್‌, ಎಕ್ಸಿಸ್‌ ಬ್ಯಾಂಕ್‌ ಶೇರುಗಳು ಶೇ.3.96ರ ಏರಿಕೆಯನ್ನು ದಾಖಲಿಸಿದವು.

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಂದು ಶೇ.0.11 ಇಳಿಕೆಯನ್ನು ಕಂಡು ಬ್ಯಾರಲ್‌ ಗೆ 71.10 ಡಾಲರ್‌ ಮಟ್ಟಕ್ಕೆ ಇಳಿಯಿತು. ಇದೇ ವೇಳೆ ರೂಪಾಯಿ 24 ಪೈಸೆಯ ಕುಸಿತವನ್ನು ಕಂಡು 69.67 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ