ಸತತ ಮೂರನೇ ದಿನ ಷೇರುಪೇಟೆ ಏರಿಕೆ

Team Udayavani, Sep 12, 2019, 5:59 AM IST

ಮುಂಬಯಿ: ಸತತ 3ನೇ ದಿನ ಮುಂಬಯಿ ಷೇರು ಪೇಟೆ ಸಂವೇದಿ ಸೂಚ್ಯಂಕ ಏರಿಕೆ ದಾಖ ಲಿ ಸಿದ್ದು, ಹೂಡಿಕೆದಾರರ ಮೊಗ ದಲ್ಲಿ ಉಲ್ಲಾಸ ಕಂಡು ಬಂದಿದೆ. ಬುಧ ವಾರ ಹೂಡಿಕೆದಾರರು ಷೇರು ಖರೀದಿಯಲ್ಲಿ ಆಸಕ್ತಿ ವಹಿಸಿದ ಕಾರಣ ಸೆನ್ಸೆಕ್ಸ್‌ 125 ಅಂಕ ಏರಿಕೆ ಕಂಡು ದಿನ ದಂತ್ಯಕ್ಕೆ 37,270ರಲ್ಲಿ ವಹಿವಾಟು ಅಂತ್ಯ ಗೊಳಿಸಿತು. ನಿಫ್ಟಿ ಕೂಡ 32 ಅಂಕ ಏರಿಕೆಯಾಗಿ 11,035ರಲ್ಲಿ ಕೊನೆಗೊಂಡಿತು.

ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವಂಥ ಆಟೋಮೊಬೈಲ್‌ ಹಾಗೂ ಬ್ಯಾಂಕಿಂಗ್‌ ಕ್ಷೇತ್ರದ ಷೇರುಗಳೇ ಬುಧವಾರದ ವಹಿವಾಟು ವೇಳೆ ಏರಿಕೆ ದಾಖಲಿಸಿದವು. ಆಟೋಮೊಬೈಲ್‌ ಕ್ಷೇತ್ರದ ಬಿಕ್ಕಟ್ಟು ತಿಳಿಗೊಳಿಸುವ ನಿಟ್ಟಿನಲ್ಲಿ ಸೆ. 20ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ತೆರಿಗೆ ರಿಯಾಯಿತಿ ಪ್ರಕಟಿಸಬಹುದು ಎಂಬ ನಿರೀಕ್ಷೆ ಚೇತರಿಕೆಗೆ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಅಲ್ಲದೆ ಅಮೆರಿಕ ಮತ್ತು ಚೀನ ನಡು ವಿನ ವ್ಯಾಪಾರ ಸಮರವು ಶಮನ ಗೊಳ್ಳುವ ಲಕ್ಷಣ ಗೋಚರಿಸಿದ ಕಾರಣ ಜಾಗತಿಕ ಷೇರು ಮಾರುಕಟ್ಟೆ ಚೇತರಿಸಿ ಕೊಂಡದ್ದೂ ಪರಿಣಾಮ ಬೀರಿದೆ.

ಯೆಸ್‌ ಬ್ಯಾಂಕ್‌ ಷೇರುಗಳು ಅತ್ಯಧಿಕ ಅಂದರೆ ಶೇ.13.47ರಷ್ಟು ಏರಿಕೆ ಕಂಡವು. ಡಿಜಿಟಲ್‌ ಪಾವತಿ ದಿಗ್ಗಜ ಪೇಟಿಎಂ ಈ ಬ್ಯಾಂಕ್‌ನ ಷೇರುಗಳನ್ನು ಖರೀದಿಸುವ ಸಾಧ್ಯತೆಯಿದೆ ಎಂಬ ಸುದ್ದಿಯೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ