ಬಸ್- ಟ್ರಕ್ ಭೀಕರ ಅಪಘಾತ: 13 ಸಾವು, 20 ಜನರಿಗೆ ಗಾಯ

Team Udayavani, Aug 19, 2019, 8:57 AM IST

ಮುಂಬೈ: ಬಸ್ ಮತ್ತು ಸರಕು ಸಾಗಣೆ ಟ್ರಕ್ ನಡುವಿನ ಭೀಕರ ಅಪಘಾತದಲ್ಲಿ 13 ಜನ ಸಾವನ್ನಪ್ಪಿ, ಕನಿಷ್ಠ 20 ಜನರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಧುಲೆಯಲ್ಲಿ ರವಿವಾರ ತಡರಾತ್ರಿ ನಡೆದಿದೆ.

ಘಟನೆಯಲ್ಲಿ 13 ಜನ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಮೃತರ ಸಂಖ್ಯೆ ಜಾಸ್ತಿಯಾಗುವ ಸಂಭವವಿದೆ.

ಔರಂಗಬಾದ್‌ ನಿಂದ ಧುಲೆ ಹೋಗುತ್ತಿದ್ದ ಮಹಾರಾಷ್ಟ್ರ ರಾಜ್ಯ ಸಾರಿಗೆ ಬಸ್‌ ಮತ್ತು ಮುಂಭಾಗದಲ್ಲಿ ಬರುತ್ತಿದ್ದ ಟ್ರಕ್‌ ನಡುವೆ ಈ ಭೀಕರ ಮುಖಾಮುಖಿ ಡಿಕ್ಕಿ ನಡೆದಿದೆ. ಶಹ್ದಾ- ದೊಂಡಿಚಾ ರಸ್ತೆಯ ನಿಮ್‌ ಗುಲ್‌ ಗ್ರಾಮದ ಬಳಿ ಈ ಅಪಘಾತ ನಡೆದಿದೆ ಎಂದು ವರದಿಯಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ