ಖಡ್ಗದಿಂದ ಹುಟ್ಟುಹಬ್ಬದ ಕೇಕ್ ಕತ್ತರಿಸಿದ ನಾಲ್ವರ ಬಂಧನ
Team Udayavani, Sep 5, 2022, 4:57 PM IST
ಲಾಥೂರ್ : ಇಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಹುಟ್ಟುಹಬ್ಬದ ಕೇಕ್ ಅನ್ನು ಖಡ್ಗದ ಮೂಲಕ ಕತ್ತರಿಸಿ ಸಂಭ್ರಮಿಸಿದ ನಾಲ್ವರನ್ನು ರವಿವಾರ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ವಿವೇಕಾನಂದ ಪೊಲೀಸ್ ಥಾಣೆಯ ಸಬ್ ಇನ್‌ಸ್ಪೆಕ್ಟರ್ ಮಹೇಶ್ ಗಲ್ಗೇಟ್ ಅವರು, ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಹೃತಿಕ್ ಹುಲ್ಗುಂಡೆ ಹಾಗೂ ಆತನ ಸಂಗಡಿಗರಾದ ವಾಜಿದ್ ಸಯ್ಯದ್, ಸನ್ವಿಧನ್ ದಾವ್ರೇ, ಸಂವಕ್ ಕಾಂಬ್ಲೆಯನ್ನು ಬಂಧಿಸಲಾಗಿದೆ.
ಸೆ. 2ರಂದು ನಡೆದ ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ಇನ್ನಿಬ್ಬರು ಪಾಲಾಯನ ಗೈದಿದ್ದು ಅವರನ್ನು ಹಿಡಿಯಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ತಂಜಾವೂರಿನಲ್ಲಿ ಕಳವು ಮಾಡಲಾಗಿದ್ದ ನಟರಾಜ ವಿಗ್ರಹ ಅಮೆರಿಕದಲ್ಲಿ ಪತ್ತೆ
ಸಾಮಾಜಿಕ ಜಾಲತಾಣದಲ್ಲಿ ಹಾಕಲಾದ ಫೋಟೋಗಳನ್ನು ನೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.