ಕೇಂದ್ರೀಯ ಇಲಾಖೆಗಳಲ್ಲಿ 7 ಲಕ್ಷ ಹುದ್ದೆ ಖಾಲಿ
Team Udayavani, Nov 30, 2019, 6:14 PM IST
ಹೊಸದಿಲ್ಲಿ: ದೇಶಾದ್ಯಂತ ಉದ್ಯೋಗ ಕೊರತೆ ಕಾಡಿರುವಂತೆಯೇ, ಕೇಂದ್ರ ಸರಕಾರದ ಇಲಾಖೆಗಳಲ್ಲಿ ಸುಮಾರು 7 ಲಕ್ಷ ಹುದ್ದೆಗಳು ಖಾಲಿ ಇರುವ ಸಂಗತಿ ಇದೀಗ ಬಯಲಾಗಿದೆ. 2014ರ ಬಳಿಕ ಇಷ್ಟೊಂದು ಹುದ್ದೆಗಳು 2018ರವರೆಗೆ ಖಾಲಿಯಿದ್ದವು ಎಂದು ಕೇಂದ್ರ ಸಿಬಂದಿ ಸಚಿವಾಲಯ ಇತ್ತೀಚೆಗೆ ಲೋಕಸಭೆಗೆ ತಿಳಿಸಿದೆ.
ಸಿಬಂದಿ ಸಚಿವಾಲಯ ಹೇಳಿದಂತೆ, 2018 ಮಾ.1ರವರೆಗೆ 31.18 ಲಕ್ಷ ಸಿಬಂದಿಯಷ್ಟೇ ಕೇಂದ್ರದ ಅಧೀನ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಸಿಬಂದಿ ಸಾಮರ್ಥ್ಯ ಒಟ್ಟು 38 ಲಕ್ಷದಷ್ಟು ಇದೆ. 2014ರ ಬಳಿಕ ಸುಮಾರು 1.57 ಲಕ್ಷ ಹುದ್ದೆ ನೇಮಕಾತಿಗೆ ಸರಕಾರ ಮುಂದಾಗಿದ್ದರೂ, 2018ರ ವೇಳೆಗೆ 32.23 ಲಕ್ಷದಷ್ಟು ಸಿಬಂದಿ ಮಾತ್ರ ಹುದ್ದೆಯಲ್ಲಿದ್ದಾರೆ ಎಂದು ಹೇಳಿದೆ. ರೈಲ್ವೇ ಇಲಾಖೆ ಅತಿ ದೊಡ್ಡ ಸಂಖ್ಯೆಯಲ್ಲಿ ಸಿಬಂದಿಗಳನ್ನು ಹೊಂದಿದ್ದು, ಇದರಲ್ಲಿ 2.5 ಲಕ್ಷದಷ್ಟು ಹುದ್ದೆಗಳು 2018 ಮಾ.1ರ ವೇಳೆಗೆ ಖಾಲಿ ಇದ್ದವು. ರಕ್ಷಣಾ ಖಾತೆ (ಸಿವಿಲ್)ನಲ್ಲಿ 1.9 ಲಕ್ಷದಷ್ಟು ಹುದ್ದೆಗಳು ಖಾಲಿ ಇವೆ ಎಂದು ಹೇಳಲಾಗಿದೆ.
ಇದೇ ವೇಳೆ 2017-18ರ ಅವಧಿಯಲ್ಲಿ ಕೇಂದ್ರ ಸರಕಾರ ಸಿಬಂದಿಗೆ 1.90 ಲಕ್ಷ ಕೋಟಿ ರೂ. ವೇತನ, ಭತ್ಯೆಗಳನ್ನು ಪಾವತಿಸಿದೆ ಎಂದು ಇಲಾಖೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ