ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ಹೋಗಿ 7 ಮಂದಿ ದುರ್ಮರಣ

Team Udayavani, Jun 16, 2019, 8:02 AM IST

ಸಾಂದರ್ಭಿಕ ಚಿತ್ರ

ವಡೋದರಾ: ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಹೊಟೇಲ್ವೊಂದರ ಚರಂಡಿ ಸ್ವಚ್ಛಗೊಳಿಸಲೆಂದು ಇಳಿದಿದ್ದ 7 ಮಂದಿ ವಿಷಕಾರಿ ಅನಿಲ ಸೇವಿಸಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.ಮೃತರದಲ್ಲಿ ನಾಲ್ವರು ಕಾರ್ಮಿಕರು ಹಾಗೂ ಮೂವರು ಹೋಟೆಲ್ನ ಸಿಬಂದಿ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ತಡರಾತ್ರಿ ಹೊಟೇಲ್ನ ಒಳಚರಂಡಿ ಸ್ವಚ್ಛಗೊಳಿಸಲೆಂದು ಕಾರ್ಮಿಕರೊಬ್ಬರು ಹಗ್ಗದ ಸಹಾಯದಿಂದ ಕೆಳಗಿಳಿದಿದ್ದರು. ಆತ ಮ್ಯಾನ್‌ಹೋಲ್ನಿಂದ ಹೊರಬರದೇ ಇದ್ದಾಗ, ಸಹಾಯಕ್ಕಾಗಿ ಮತ್ತೂಬ್ಬ ಕಾರ್ಮಿಕ ಇಳಿದಿದ್ದಾನೆ. ಇದೇ ರೀತಿ ಒಬ್ಬರ ಅನಂತರ ಒಬ್ಬರಂತೆ 7 ಮಂದಿಯೂ ಮ್ಯಾನ್‌ಹೋಲ್ಗೆ ಇಳಿದಿದ್ದು, ವಿಷಾನಿಲ ಸೇವಿಸಿ ಅಸುನೀಗಿದ್ದಾರೆ. ಅನಂತರ 3 ಗಂಟೆ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆಯಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ