ಹಿ.ಪ್ರ: ಶೇ.74 ಮತದಾನ
Team Udayavani, Nov 10, 2017, 7:00 AM IST
ಹೊಸದಿಲ್ಲಿ: ಹಿಮಾಚಲ ಪ್ರದೇಶದ ವಿಧಾನಸಭೆಗೆ ಗುರುವಾರ ಮತದಾನ ನಡೆದಿದ್ದು, ದಾಖಲೆಯ ಶೇ. 74ರಷ್ಟು ಜನ ಮತ ಚಲಾಯಿಸಿದ್ದಾರೆ. ಶಾಂತಿ ಯುತವಾಗಿ ಮತದಾನ ನಡೆದಿದೆ. ಎಲ್ಲ 68 ವಿಧಾನಸಭಾ ಕ್ಷೇತ್ರಗಳಲ್ಲೂ ಇದೇ ಮೊದಲ ಬಾರಿಗೆ 11,283 ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾ ಗಿತ್ತು. ಹಲವೆಡೆ ಮತ ದೃಢೀಕರಣ ಪತ್ರ ನೀಡುವಲ್ಲಿ ಯಂತ್ರ ಕೈಕೊಟ್ಟಿತ್ತು. ಹೀಗಾಗಿ 297 ಯಂತ್ರಗಳನ್ನು ಬದಲಿಸ ಬೇಕಾಯಿತು. ಇವೆಲ್ಲವೂ ತಾಂತ್ರಿಕ ಸಮಸ್ಯೆಗಳಾಗಿದ್ದವು ಎಂದು ಚುನಾ ವಣಾ ಆಯೋಗ ಹೇಳಿದೆ. ಮತ ಎಣಿಕೆ ಡಿ.18ರಂದು ನಡೆಯಲಿದೆ.
ಈ ಬಾರಿ ಶೇ. 74ರಷ್ಟು ಮತದಾನವಾಗಿದ್ದು ದಾಖಲೆಯಾಗಿದೆ. 2012ರ ಚುನಾವಣೆಯಲ್ಲಿ ಶೇ.73.5ರಷ್ಟು ಮತದಾನ ನಡೆದಿತ್ತು. ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಶೇ.64.45 ಮತದಾನ ನಡೆದಿತ್ತು.
29ನೇ ಬಾರಿಗೆ ಮತ!
ಭಾರತದ ಪ್ರಥಮ ಮತದಾರ ಶ್ಯಾಮ್ ಸರಣ್ ನೇಗಿ ಹಿಮಾಚಲ ಪ್ರದೇಶದಲ್ಲಿ ಗುರುವಾರ ಮತ ಚಲಾಯಿಸಿದರು. 100 ವರ್ಷ ಪೂರೈಸಿದ ನೇಗಿಯವರನ್ನು ಮತಗಟ್ಟೆ ಅಧಿಕಾರಿಗಳು ಕೈ ಹಿಡಿದು, ಕೆಂಪುಹಾಸಿನ ಮೇಲೆ ವಾದ್ಯಮೇಳ ದೊಂದಿಗೆ ಮತಗಟ್ಟೆಗೆ ಕರೆತಂದರು. 1951 ರಿಂದ ತಪ್ಪದೇ ಎಲ್ಲ ಚುನಾವಣೆಗಳಲ್ಲೂ ಮತ ಚಲಾವಣೆ ಮಾಡುತ್ತಿದ್ದು, 29ನೇ ಬಾರಿಗೆ ಮತ ಚಲಾವಣೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ