ದೇಶದ ಶೇ.99 ಮಂದಿ ಬಳಿ ಇದೆ ಆಧಾರ್
Team Udayavani, Jan 29, 2017, 3:45 AM IST
ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡುವ ಆಧಾರ ಕಾರ್ಡ್ ದೇಶದ ಶೇ.99 ಮಂದಿ ಬಳಿ ಇದೆ. ಈ ಬಗ್ಗೆ ಯುಐಡಿಎಐ ಮೂಲಗಳೇ ತಿಳಿಸಿವೆ. ಸಾಂಖೀಕವಾಗಿ ಹೇಳುವುದಿದ್ದರೆ 121 ಕೋಟಿ ಜನಸಂಖ್ಯೆಯ ಪೈಕಿ 18 ವರ್ಷಕ್ಕಿಂತ ಮೇಲ್ಪಟ್ಟ 111 ಕೋಟಿ ದೇಶವಾಸಿಗಳಲ್ಲಿ ಈಗ ಆಧಾರ ಕಾರ್ಡ್ ಇದೆ. ಕಳೆದ ವರ್ಷದ ನ.8ರಂದು ನೋಟುಗಳ ಅಪನಗದೀಕರಣ ಘೋಷಣೆ ಮಾಡಿದ ಬಳಿಕ ಕೇಂದ್ರ ನಗದು ರಹಿತ ವಹಿವಾಟಿಗೆ ಹೆಚ್ಚಿನ ಒತ್ತು ನೀಡಲಾರಂಭಿಸಿತು. ಇದಾದ ಬಳಿಕ ವ್ಯಾಪಾರ ವಹಿವಾಟಿಗೆ ಅನುಕೂಲವಾಗುವಂತೆ ಆಧಾರ ನೋಂದಣಿಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆ, ಗೃಹೋಪಯೋಗಿ ಎಲ್ಪಿಜಿ ಸಹಾಯ ಧನ ವಿತರಿಸಲು ಯುಐಡಿಎಐ ಗುರುತಿನ ಚೀಟಿ ಬಳಕೆ ಮಾಡಿದ್ದರಿಂದ ಕೇಂದ್ರದ ಬೊಕ್ಕಸಕ್ಕೆ 36 ಸಾವಿರ ಕೋಟಿ ರೂ.ಉಳಿತಾಯವಾಗಿದೆ. ಭಿಮ್ ಆ್ಯಪ್ ಮೂಲಕ ಆಧಾರ್ ಕಾರ್ಡ್ ನೆರವಿನೊಂದಿಗೆ ವಹಿವಾಟು ಮಾಡುವ ವ್ಯವಸ್ಥೆ ಈಗಾಗಲೇ ಹಲವು ಬ್ಯಾಂಕುಗಳಲ್ಲಿ ಜಾರಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ