ಆಧಾರ್ ಕಡ್ಡಾಯಗೊಳಿಸೋದು ದೇಶದ ಭದ್ರತೆಗೆ ಅಪಾಯ: ಸ್ವಾಮಿ

Team Udayavani, Oct 31, 2017, 12:46 PM IST

aadhaar-swamy.jpg

ನವದೆಹಲಿ:ಆಧಾರ್ ಅನ್ನು ಕಡ್ಡಾಯಗೊಳಿಸುವುದು ದೇಶದ ಭದ್ರತೆಗೆ ದೊಡ್ಡ ಅಪಾಯ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಮಂಗಳವಾರ ತಿಳಿಸಿದ್ದು, ಸುಪ್ರೀಂಕೋರ್ಟ್ ಸಂವಿಧಾನ ಪೀಠದಲ್ಲಿ ನಡೆಯಲಿರುವ ವಿಚಾರಣೆಯಲ್ಲಿ ಆಧಾರ್ ಕಡ್ಡಾಯ ಎಂಬುದನ್ನು ರದ್ದುಪಡಿಸುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ಆಧಾರ್ ಅನ್ನು ಕಡ್ಡಾಯಗೊಳಿಸುವುದರಿಂದ ದೇಶದ ಭದ್ರತೆಗೆ ಯಾವ ರೀತಿಯಲ್ಲಿ ದೊಡ್ಡ ಮಟ್ಟದ ಅಪಾಯ ತಂದೊಡ್ಡಲಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ದೀರ್ಘ ವಿವರಣೆ ನೀಡುವುದಾಗಿ ಸ್ವಾಮಿ ಹೇಳಿದ್ದಾರೆ.

ಸರ್ಕಾರದ ವಿವಿಧ ಸೇವೆಗಳು ಮತ್ತು ಕಲ್ಯಾಣ ಕಾರ್ಯಕ್ರಮ ಯೋಜನೆಗಳನ್ನು ಪಡೆಯಲು ಆಧಾರ್‌ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಎಲ್ಲ ದೂರುಗಳ ವಿಚಾರಣೆಗಾಗಿ ಸುಪ್ರೀಂಕೋರ್ಟ್‌ ಸಂವಿಧಾನ ಪೀಠವನ್ನು ರಚಿಸಿದೆ. ನವೆಂಬರ್‌ ಕೊನೆಯ ವಾರದಂದು ಈ ಪೀಠ ವಿಚಾರಣೆ ಆರಂಭಿಸಲಿದೆ ಎಂದು ಮುಖ್ಯ ನ್ಯಾ.ದೀಪಕ್‌ ಮಿಶ್ರಾ, ನ್ಯಾ ಎ.ಎಂ.ಖನ್ವಿಲ್ಕರ್‌ ಮತ್ತು ಡಿ.ವೈ.ಚಂದ್ರಚೂಡ್‌ ಹೇಳಿದ್ದಾರೆ. ಇದರಿಂದ ಆಧಾರ್‌ಗೆ ಸಂಬಂಧಿಸಿದ ಎಲ್ಲ ದೂರುಗಳನ್ನೂ ಒಂದೇ ವೇದಿಕೆಯಲ್ಲಿ ವಿಚಾರಣೆ ನಡೆಸಲು ಸಾಧ್ಯವಾಗಲಿದೆ.

ಈ ಹಿಂದೆ ಖಾಸಗಿತನ ಕುರಿತ ಅರ್ಜಿಯ ವಿಚಾರಣೆ ನಡೆಸಿದ್ದ ಒಂಬತ್ತು ನ್ಯಾಯಮೂರ್ತಿಗಳಿದ್ದ ಪೀಠವು, ಸಂವಿಧಾನದ ಪ್ರಕಾರ ಖಾಸಗಿತನದ ಹಕ್ಕು ಮೂಲಭೂತ ಹಕ್ಕಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಖಾಸಗಿತನದ ಹಕ್ಕನ್ನು ಆಧಾರ್‌ ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಹಲವರು ಈಗಾಗಲೇ ದೂರು ಸಲ್ಲಿಸಿದ್ದಾರೆ. ಇನ್ನೊಂದೆಡೆ, ಮೊಬೈಲ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಲಿಂಕ್‌ ಮಾಡುವುದಕ್ಕೆ ಸಂಬಂಧಿಸಿದಂತೆ ಡಿ. 31 ಕೊನೆಯ ದಿನವಾಗಿದ್ದು, ಆಧಾರ್‌ ಇಲ್ಲದವರಿಗೆ ಮುಂದಿನ ವರ್ಷದ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ದಿನಾಂಕದಲ್ಲಿ ಯಾವುದೇ ಬದಲಿಲ್ಲ ಎಂದಿದೆ.

ಟಾಪ್ ನ್ಯೂಸ್

Belthangady: ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ

Road mishap: ಕಾರು – ಟ್ರ್ಯಾಕ್ಟರ್ ಟ್ರಾಲಿ ಅಪಘಾತ; ಸಚಿವರ ತಲೆಗೆ ತೀವ್ರಗಾಯ

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಶತಾಬ್ದಿ ರೈಲು ಮೂರೂವರೆ ಗಂಟೆ ತಡ

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

ರಾತ್ರೋ ರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ

ಬೃಹತ್‌ ಅನ್ಯ ಗ್ರಹ ಪತ್ತೆ: ಭಾರತದ ವಿಜ್ಞಾನಿಗಳಿಂದ ಈ ಸಾಧನೆ

manish sisodia

ಸಿಸೋಡಿಯಾಗಿಲ್ಲ ಜಾಮೀನು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road mishap: ಕಾರು – ಟ್ರ್ಯಾಕ್ಟರ್ ಟ್ರಾಲಿ ಅಪಘಾತ; ಸಚಿವರ ತಲೆಗೆ ತೀವ್ರಗಾಯ

Road mishap: ಕಾರು – ಟ್ರ್ಯಾಕ್ಟರ್ ಟ್ರಾಲಿ ಅಪಘಾತ; ಸಚಿವರ ತಲೆಗೆ ತೀವ್ರಗಾಯ

ಬೃಹತ್‌ ಅನ್ಯ ಗ್ರಹ ಪತ್ತೆ: ಭಾರತದ ವಿಜ್ಞಾನಿಗಳಿಂದ ಈ ಸಾಧನೆ

ಬೃಹತ್‌ ಅನ್ಯ ಗ್ರಹ ಪತ್ತೆ: ಭಾರತದ ವಿಜ್ಞಾನಿಗಳಿಂದ ಈ ಸಾಧನೆ

manish sisodia

ಸಿಸೋಡಿಯಾಗಿಲ್ಲ ಜಾಮೀನು

ರಕ್ಷಣ ಸರಕು ರಫ್ತಿನಲ್ಲಿ ಭಾರತ ಸಾರ್ವಕಾಲಿಕ ದಾಖಲೆ: 10 ವರ್ಷಗಳಲ್ಲಿ 23 ಪಟ್ಟು ಹೆಚ್ಚಳ

ABDUL SAEED

26/11 ಉಗ್ರರ ತರಬೇತುದಾರನ ಹತ್ಯೆ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ