ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ: ಮಾ. 31 ಕೊನೇ ದಿನ
Team Udayavani, Dec 14, 2017, 6:25 AM IST
ಹೊಸದಿಲ್ಲಿ: ಬ್ಯಾಂಕ್ ಖಾತೆ ತೆರೆಯಲು, ಹಾಲಿ ಖಾತೆಗಳಿಗೆ ಮತ್ತು ಪಾನ್ ಕಾರ್ಡ್ಗೆ ಆಧಾರ್ ಜೋಡಣೆ ದಿನಾಂಕ ಮಾ.31ಕ್ಕೆ ವಿಸ್ತರಣೆಯಾಗಿದೆ. ಈ ಬಗ್ಗೆ ಕೇಂದ್ರ ಸರಕಾರ ಬುಧವಾರ ಆದೇಶ ಹೊರಡಿಸಿದೆ. ಈ ನಿಯಮ ಆಧಾರ್ ಜೋಡಣೆ ಮಾಡಬೇಕೆಂದು ಹೇಳಲಾಗಿರುವ ಹಣಕಾಸು ಸೇವೆ ಗಳಿಗೂ ಅನ್ವಯವಾಗುತ್ತದೆ. ಹೀಗಾಗಿ ಲಿಂಕ್ಗಾಗಿ 3 ತಿಂಗಳ ಅವಧಿ ಸಿಕ್ಕಿ ದಂತಾಗಿದೆ. ಸರಕಾರಿ ಸ್ವಾಮ್ಯದ ಬ್ಯಾಂಕ್ಗಳು ಮತ್ತು ಹಣಕಾಸು ಕ್ಷೇತ್ರದ ವಲಯದಿಂದ ಬಂದ ಮನವಿಯ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುವುದು ಸರಕಾರದ ಹೇಳಿಕೆ.