ಮಾರ್ಚ್ 31ರ ವರೆಗೂ ಆಧಾರ್ ಲಿಂಕಿಂಗ್ ವಿಸ್ತರಣೆ?
Team Udayavani, Nov 28, 2017, 6:40 AM IST
ಹೊಸದಿಲ್ಲಿ: ವಿವಿಧ ಯೋಜನೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ನಿಗದಿಸಲಾಗಿರುವ ಅವಧಿಯನ್ನು ಮುಂದಿನ ವರ್ಷದ ಮಾರ್ಚ್ 31ರ ವರೆಗೂ ವಿಸ್ತರಿಸಲು ಸಿದ್ಧರಿದ್ದೇವೆ ಎಂದು ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ ಹೇಳಿದೆ. ಈ ಮಧ್ಯೆ ದೆಹಲಿ ಮತ್ತು ಕೇಂದ್ರದ ನಡುವಿನ ಪ್ರಕರಣಗಳ ವಿಚಾರಣೆ ಬಳಿಕ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಹೇಳಿದೆ. ದೆಹಲಿ ರಾಜ್ಯವಲ್ಲ, ಇದು ರಾಜ್ಯಪಾಲರು ಕೇಂದ್ರಾಡಳಿತ ಪ್ರದೇಶದ ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ ಎಂದಿತ್ತು ಸುಪ್ರೀಂ.