ಲೈನ್ ಇನ್ಸ್ಪೆಕ್ಟರ್ ಬಳಿ 100 ಕೋಟಿ
Team Udayavani, Jun 23, 2018, 6:00 AM IST
ನೆಲ್ಲೂರು: ಆಂಧ್ರಪ್ರದೇಶದ ವಿದ್ಯುತ್ ವಿತರಣಾ ಇಲಾಖೆಯಲ್ಲಿ ಲೈನ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ 100 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ.
ಗುರುವಾರ ನೆಲ್ಲೂರು ಹಾಗೂ ಪ್ರಕಾಶಂ ಜಿಲ್ಲೆಯಲ್ಲಿರುವ ಮನೆ, ಕಚೇರಿ ಮೇಲೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಎಸ್ ಲಕ್ಷ್ಮಿ ರೆಡ್ಡಿ(56) ಅಕ್ರಮ ಆಸ್ತಿ ದಾಖಲೆ ಪಡೆದಿದ್ದಾರೆ.
57.50 ಎಕರೆ ಕೃಷಿ ಭೂಮಿ, 6 ಐಷಾರಾಮಿ ಮನೆಗಳು, 2 ಪ್ಲಾಟ್, 9.95 ಲಕ್ಷ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಲಕ್ಷ್ಮಿರೆಡ್ಡಿ ಹೊಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಈವರೆಗೆ ಸಿಕ್ಕ ಅಂದಾಜಿನ ಪ್ರಕಾರ ಆಸ್ತಿ ಮೌಲ್ಯ 100 ಕೋಟಿ ರೂ. ಆಗಿದ್ದು, ಇನ್ನೂ ಹೆಚ್ಚಾ ಇರಬಹುದು ಎನ್ನಲಾಗಿದೆ. 1993ರಲ್ಲಿ ಆಂಧ್ರ ಎಸ್ಪಿಡಿಸಿಎಲ್ ಕಚೇರಿಯ ಕಾವಲಿ ಸಬ್ ಸ್ಟೇಷನ್ನಲ್ಲಿ ಸಹಾಯಕನಾಗಿ ಅವರು ನೇಮಕ ವಾಗಿದ್ದರು. ನಂತರ 1996ರಲ್ಲಿ ಸಹಾಯಕ ಲೈನ್ಮನ್ ಹಾಗೂ 1997ರಲ್ಲಿ ಲೈನ್ಮನ್ ಆಗಿದ್ದರು.