Breaking news :ಜಾಮೀನು ಅರ್ಜಿ ವಜಾ : ಶಾರುಖ್ ಪುತ್ರನಿಗೆ ಜೈಲುವಾಸವೇ ಗತಿ
Team Udayavani, Oct 8, 2021, 5:06 PM IST
ಮುಂಬೈ : ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಬಂಧಿತನಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಜಾಮೀನು ಅರ್ಜಿ ವಜಾಗೊಂಡಿದ್ದು, ಜೈಲು ವಾಸ ಮುಂದುವರೆದಿದೆ.
ಜಾಮೀನು ಕೋರಿ ಆರ್ಯನ್ ಖಾನ್ ಪರ ವಕೀಲ ಸಲ್ಲಿಸಿದ್ದ ಎರಡು ( ಮಧ್ಯಂತರ ಹಾಗೂ ಪೂರ್ಣ ಪ್ರಮಾಣ) ಅರ್ಜಿಗಳನ್ನು ಮುಂಬೈನ ಕಿಲ್ಲಾ ನ್ಯಾಯಾಲಯ, ಗುರುವಾರ ಸೆಷೆನ್ಸ್ ಕೋರ್ಟ್ ಗೆ ವರ್ಗಾವಣೆ ಮಾಡಿತ್ತು. ಇಂದು ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ,ಜಾಮೀನು ನೀಡಲು ನಿರಾಕರಿಸಿತು.
ಕಳೆದ ಶನಿವಾರ (ಅ.2) ರಾತ್ರಿ ಮುಂಬೈನ ಕಡಲ ತೀರ ಪ್ರದೇಶದ ಐಷಾರಾಮಿ ‘ಕ್ರೂಸ್’ಹಡಗಿನಲ್ಲಿ ನಡೆದಿದ್ದ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಹಾಗೂ ಇತರ ಏಳು ಆರೋಪಿಗಳನ್ನು ಕಿಲ್ಲಾ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಗುರುವಾರ ಆದೇಶ ಹೊರಡಿಸಿತು. ಅದರಂತೆ ಶುಕ್ರವಾರ (ಅ.8) ಆರ್ಯನ್ ಖಾನ್ ಸೇರಿದಂತೆ ಏಳು ಜನರನ್ನು ವೈದ್ಯಕೀಯ ಪರೀಕ್ಷೆಯ ನಂತರ ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲಿನ ಸುಪರ್ದಿಗೆ ಒಪ್ಪಿಸಲಾಗಿದೆ.
ಇನ್ನು ಜೈಲಿನಲ್ಲಿ ಎಲ್ಲ ಆರೋಪಿಗಳನ್ನು 5 ರಿಂದ 6 ದಿನಗಳ ವರೆಗೆ ಕ್ವಾರಂಟೈನ್‍ನಲ್ಲಿ ಇಡಲಾಗುತ್ತದೆ ಎಂದು ಜೈಲಿನ ಠಾಣಾಧಿಕಾರಿ ನಿತೀನ್ ಹೇಳಿದ್ದಾರೆ.