ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಕಾಂಗ್ರೆಸ್ ಆಸ್ತಿ: ರಾಹುಲ್ ಗಾಂಧಿ
Team Udayavani, Nov 28, 2022, 9:15 PM IST
ಇಂದೋರ್: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಾಜಿ ಡಿಸಿಎಂ ಸಚಿನ್ ಪೈಲಟ್ ಇಬ್ಬರೂ ಕಾಂಗ್ರೆಸ್ ಆಸ್ತಿ ಎಂದಿದ್ದಾರೆ ವಯನಾಡ್ ಸಂಸದ ರಾಹುಲ್ ಗಾಂಧಿ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಮಾತನಾಡಿದ ಅವರು ಇಬ್ಬರ ನಡುವಿನ ಜಟಾಪಟಿಯಿಂದ ಭಾರತ್ ಜೋಡೋ ಯಾತ್ರೆಗೆ ಹಾನಿಯಾಗುವುದಿಲ್ಲ. ಇಬ್ಬರು ನಾಯಕರು ಪಕ್ಷದ ಆಸ್ತಿಯಾಗಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಹುಲ್, “ಈ ಬಗ್ಗೆ ಒಂದು ಅಥವಾ ಒಂದುವರೆ ವರ್ಷದ ನಂತರ ತೀರ್ಮಾನಿಸಲಾಗುವುದು. ಪ್ರಸ್ತುತ ನನ್ನ ಗಮನ ಎಲ್ಲವೂ ಭಾರತ್ ಜೋಡೋ ಯಾತ್ರೆ ಕುರಿತಾಗಿದೆ,’ ಎಂದು ಹೇಳಿದರು.
ವಯನಾಡ್ ಸಂಸದರಾಗಿರುವ ರಾಹುಲ್ ಗಾಂಧಿ, 2019ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಲ್ಲಿ ಸ್ಮತಿ ಇರಾನಿ ವಿರುದ್ಧ ಪರಾಭವಗೊಂಡಿದ್ದರು. ಇದೇ ವೇಳೆ, ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಂದರ್ಶನವನ್ನು ಗಂಭೀರವಾಗಿ ಪರಿಗಣಿಸಿದೆ. ಶಿಸ್ತಿನ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನೂ ಸಂಸದ ಜೈರಾಮ್ ರಮೇಶ್ ನೀಡಿದ್ದಾರೆ.