ಲಕ್ಸಂಬರ್ಗ್ ಶೈತ್ಯ ಶ್ರೀರಕ್ಷೆ!
ದಿಲ್ಲಿಗೆ ಬಂದಿಳಿದ "ಬಿ ಮೆಡಿಕಲ್ ಸಿಸ್ಟಮ್ಸ್' ಅಧಿಕಾರಿಗಳು
Team Udayavani, Dec 5, 2020, 7:46 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಲಸಿಕೆಗಳ ಉತ್ಕೃಷ್ಟ ಸಂಗ್ರಾಹಕ ವ್ಯವಸ್ಥೆಗೆ ಖ್ಯಾತಿ ಪಡೆದ ಲಕ್ಸಂಬರ್ಗ್‌ನ “ಬಿ ಮೆಡಿಕಲ್ ಸಿಸ್ಟಮ್ಸ್’ ಸಂಸ್ಥೆ ಜತೆಗಿನ ಮಹತ್ವದ ಮಾತುಕತೆಗೆ ಭಾರತ ಸನ್ನದ್ಧವಾಗಿದೆ. ಕೋವಿಡ್ ಲಸಿಕೆ ಲಭ್ಯವಾದ ಬಳಿಕ ಭಾರತದಾದ್ಯಂತ ಸುಸಜ್ಜಿತ ಶೈತ್ಯಾಗಾರ ವ್ಯವಸ್ಥೆ ಕಲ್ಪಿಸುವ ಹೊಣೆಯನ್ನು ಪ್ರಧಾನಿ ಮೋದಿ “ಬಿ ಮೆಡಿಕಲ್ ಸಿಸ್ಟಮ್ಸ್’ಗೆ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಇಬ್ಬರು ಉನ್ನತಾಧಿಕಾರಿಗಳು ಹೊಸದಿಲ್ಲಿ ತಲುಪಲಿದ್ದು, ಇವರೊಂದಿಗೆ ಹಿರಿಯ ಸರಕಾರಿ ಅಧಿಕಾರಿಗಳು, ವಿಜ್ಞಾನಿಗಳು ಮತ್ತು ರಾಜತಾಂತ್ರಿಕ ಅಧಿಕಾರಿಗಳು ಮಾತುಕತೆ ಆರಂಭಿಸಲಿದ್ದಾರೆ.
ಏನೇನು ಚರ್ಚೆ?: ಭಾರತ ಸಂಶೋಧಿಸುತ್ತಿರುವ ಲಸಿಕೆ ಜತೆಗೆ, ಕೇಂದ್ರ ಸರಕಾರ ಒಪ್ಪಂದ ಮಾಡಿಕೊಳ್ಳುವ ವಿದೇಶಿ ಲಸಿಕೆ ಸಂರಕ್ಷಣೆಗೆ ಅಗತ್ಯವಿರುವ ಶೈತ್ಯಾಗಾರಗಳು, ಅವುಗಳನ್ನು ನಿರ್ವಹಿಸುವ ಕುರಿತು ಸಭೆ ಚರ್ಚಿಸಲಿದೆ. ಅಗತ್ಯವಿರುವ ಸಾಗಾಟ ಬಾಕ್ಸ್‌ಗಳು, ಫ್ರೀಝರ್‌ಗಳ ಲೆಕ್ಕವನ್ನೂ ಸರಕಾರದ ಟೀಂ, ಲಕ್ಸಂಬರ್ಗ್ ಸಂಸ್ಥೆಯ ಮುಂದಿಡಲಿದೆ. ಈ ಇಬ್ಬರು ಅಧಿಕಾರಿಗಳು ಗುಜರಾತ್‌ನ ಝೈಡಸ್ ಕ್ಯಾಡೆಲಾ ಲಸಿಕೆ ಉತ್ಪಾದನ ಘಟಕಗಳಿಗೂ ಭೇಟಿ ನೀಡುವ ಸಾಧ್ಯತೆ ಇದೆ.
ಇದೇ ವೇಳೆ, ಜಗತ್ತಿನಲ್ಲೇ ಅತೀ ಹೆಚ್ಚು ಲಸಿಕೆ ಖರೀದಿಸುತ್ತಿರುವ ದೇಶವಾಗಿ ಭಾರತ ಹೊರಹೊಮ್ಮಿದೆ. 1.6 ಶತಕೋಟಿ ಡೋಸ್ ಲಸಿಕೆಯನ್ನು ಭಾರತ ಖರೀದಿಸಿ, 80 ಕೋಟಿ ಮಂದಿಗೆ ವಿತರಿಸಲಿದೆ ಎಂದು ಜಾಗತಿಕ ವಿಶ್ಲೇಷಕರು ಅಂದಾಜಿಸಿದ್ದಾರೆ.
ಅಗರ್ಭ ಶ್ರೀಮಂತರ ಸಾಲಿಗೆ “ಫೈಜರ್’ ಒಡೆಯ!
ಫೈಜರ್ ಲಸಿಕೆಗೆ ಬ್ರಿಟನ್ ಅನುಮೋದಿಸುತ್ತಿದ್ದಂತೆ ಅದರ ಪೋಷಕ ಸಂಸ್ಥೆ ಬಯೋನ್‌ಟೆಕ್‌ನ ಸಂಸ್ಥಾಪಕ ಯೂಗರ್ ಸಾಹಿನ್ ಜಗತ್ತಿನ ಟಾಪ್ 500 ಅಗರ್ಭ ಶ್ರೀಮಂತರ ಪಟ್ಟಿ ಸೇರಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪಟ್ಟಿಯಲ್ಲಿ 5.1 ಬಿಲಿಯನ್ ಡಾಲರ್ ಒಡೆಯನಾದ ಜರ್ಮನಿಯ ಯೂಗರ್ ದಿಢೀರನೆ 493ನೇ ರ್‍ಯಾಂಕ್‌ಗೆ ಏರಿದ್ದಾರೆ. ಒಂದು ವಾರದಲ್ಲಿ ಬಯೋನ್‌ಟೆಕ್ ಷೇರುಗಳು ಶೇ.8ರಷ್ಟು ಏರಿಕೆ ಕಂಡಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ
ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್
ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ
ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,
ಹೊಸ ಸೇರ್ಪಡೆ
ಎಂಬುಲ್ದೇನಿಯ-ರೂಟ್ ಗ್ರೇಟ್ ಫೈಟ್
ಮಂಗಳೂರು ಪ್ಲಾಸ್ಟಿಕ್ ಪಾರ್ಕ್ಗೆ ಕೇಂದ್ರದಿಂದ 40 ಕೋ.ರೂ. : ಡಿವಿಎಸ್
ನಮ್ಮ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಓದಬೇಕು : ಬಿ.ಸಿ.ಪಾಟೀಲ್
ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು
ಭಾರೀ ಚರ್ಚೆಗೆ ಗ್ರಾಸವಾದ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರ ಮೈತ್ರಿ ಧರ್ಮಪಾಲನೆ ಆಣೆ ಪ್ರಮಾಣ