ಎಟಿಎಂನಲ್ಲಿ ನಗದು ಇಲ್ಲದಿದ್ದರೆ ಬ್ಯಾಂಕ್ಗೆ ದಂಡ: ಆರ್ಬಿಐ
Team Udayavani, Aug 12, 2021, 7:15 AM IST
ಹೊಸದಿಲ್ಲಿ: ಗ್ರಾಹಕರಿಗೆ ತೊಂದರೆ ಯಾಗುವುದನ್ನು ತಪ್ಪಿಸುವುದಕ್ಕಾಗಿ ನಗದು ಹೊಂದಿರದ ಎಟಿಎಂಗಳ ಬ್ಯಾಂಕ್ಗಳಿಗೆ ದಂಡ ವಿಧಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ.
ಅ. 1ರಿಂದ ಇದು ಜಾರಿಗೆ ಬರಲಿದೆ. ಒಂದು ತಿಂಗಳ ಅವಧಿಯಲ್ಲಿ ಒಟ್ಟು 10 ತಾಸುಗಳಿಗಿಂತ ಹೆಚ್ಚು ಕಾಲ ಎಟಿಎಂನಲ್ಲಿ ನಗದು ಇಲ್ಲದೆ ಇದ್ದರೆ ಆ ಎಟಿಎಂ ಸ್ಥಾಪಿಸಿದ ಬ್ಯಾಂಕ್ಗೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಈ ದಂಡವನ್ನು ಆಯಾ ಎಟಿಎಂನ ಬ್ಯಾಂಕುಗಳು ಪಾವತಿಸಬೇಕಾಗುತ್ತದೆ.
ಈ ನಿಯಮ ವಿವಿಧ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿರುವ ಎಟಿಎಂ ಗಳಿಗೂ ಅನ್ವಯವಾಗುತ್ತದೆ.