ಕೊನೆಗೂ ಮಹಾಘಟಬಂಧನ್‌ಗೆ ಸೇರುವುದಿಲ್ಲ ಎಂದ ನವೀನ್‌ ಪಟ್ನಾಯಕ್‌ 

Team Udayavani, Jan 9, 2019, 10:38 AM IST

ಭುವನೇಶ್ವರ: ಬಿಜು ಜನತಾ ದಳ ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನ್‌ಗೆ ಸೇರ್ಪಡೆಯಾಗುವುದಿಲ್ಲ ಎಂದು ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಬುಧವಾರ ಹೇಳಿದ್ದಾರೆ. 

ಮಂಗಳವಾರ ಮಹಾಘಟಬಂಧನ್‌ ಕುರಿತು ನಾಳೆ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದ ಪಟ್ನಾಯಕ್‌ ಅವರು ಇಂದು ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ  ಬಿಜೆಡಿ ಸಮಾನ ಅಂತರ ಕಾಯ್ದುಕೊಳ್ಳುತ್ತೇವೆ ಎಂದಿದ್ದಾರೆ.

ಬಿಜೆಡಿ ಜೊತೆ ಕೈಜೋಡಿಸುವುದಿಲ್ಲ
ಇನ್ನೊಂದೆಡೆ ಬಿಜೆಪಿ ನಾಯಕ,ಕೇಂದ್ರ ಪೆಟ್ರೋಲಿಯಂ ಸಚಿವ  ಧರ್ಮೇಂದ್ರ ಪ್ರಧಾನ್‌ ಒಡಿಶಾದಲ್ಲಿ ಬಿಜೆಪಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಾಂಗಿಯಾಗಿ ಎದುರಿಸಲಿದ್ದು, ಯಾವುದೇ ಕಾರಣಕ್ಕೂ ಬಿಜೆಡಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. 

ನವೀನ್‌ ಪಟ್ನಾಯಕ್‌ ಅವರು ಸಂಪೂರ್ಣವಾಗಿ ವಿಫ‌ಲವಾಗಿದ್ದು , ತಮ್ಮ ವೈಫ‌ಲ್ಯತೆಯನ್ನು  ಮುಚ್ಚಿ ಹಾಕಲು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.

2014 ರ ಚುನಾವಣೆಯಲ್ಲಿ 21 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಡಿ 20 ಸ್ಥಾನಗಳನ್ನು ಬಾಚಿಕೊಂಡಿದ್ದರೆ ಬಿಜೆಪಿ 1 ಕ್ಷೇತ್ರ ಮಾತ್ರ ಗೆದ್ದುಕೊಂಡಿತ್ತು. 
 
 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ