ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸುವ ಔಷಧಿ ಆಂಫೊಟೆರಿಸಿನ್ ಬಿ ಪ್ರತಿ ಬಾಟಲಿಗೆ 1200 ರೂ..!


Team Udayavani, May 27, 2021, 7:10 PM IST

Black fungus drug Amphotericin B to be priced at Rs 1200 for each vial in India

ನವ ದೆಹಲಿ : ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ  ಬಳಸಲಾಗುವ ಇಂಜೆಕ್ಶನ್ ನನ್ನು ಮಹಾರಾಷ್ಟ್ರ ಮೂಲದ ಜೆನೆಟಿಕ್ ಲೈಫ್ ಸೈನ್ಸಸ್ ಗುರುವಾರ(ಮೇ. 27) ಹೆಚ್ಚುವರಿ ಆಂಫೊಟೆರಿಸಿನ್ ಬಿ ಎಮ್ಯುಲ್ಶನ್ ಇಂಜೆಕ್ಶನ್ ತಯಾರಿಸಲು ಪ್ರಾರಂಭಿಸಿದೆ.

ಕೋವಿಡ್ ಸೋಂಕಿನ ಆತಂಕದ ನಡುವೆ ಬ್ಲ್ಯಾಕ್ ಫಂಗಸ್ ಕೂಡ ದೇಶದ ಹಲವು ರಾಜ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಕೋವಿಡ್ ಸೋಂಕಿನ ಭಯದೊಂದಿಗೆ ಮತ್ತೊಂದು ಭಯ ಹುಟ್ಟಿಕೊಂಡಿದೆ.

ಇಂತಹ ವೈದ್ಯಕೀಯ ಬಿಕ್ಕಟ್ಟಿನ ನಡುವೆ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಇಂತಹ ಕಾಯಿಲೆಯನ್ನು ಹೋಗಲಾಡಿಸಲು ಹರಸಾಹಸ ಪಡುತ್ತಿದೆ.

ಇದನ್ನೂ ಓದಿ : ಎರಡು ವಿಭಿನ್ನ ಕೋವಿಡ್ ಲಸಿಕೆ ಪಡೆದರೆ ಏನಾಗುತ್ತದೆ…ಡಾ.ವಿಕೆ ಪೌಲ್ ಹೇಳಿದ್ದೇನು?

ಭಾರತದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕೊಂಚ ಮಟ್ಟಿಗೆ ಇಳಿಕೆಯಾಗುತ್ತಿದ್ದರೂ ಕೂಡ ಬ್ಲ್ಯಾಕ್ ಫಂಗಸ್ ಆತಂಕ ಹುಟ್ಟಿಸುತ್ತಿದೆ. ಸದ್ಯ ಭಾರತದಲ್ಲಿ ಬ್ಲಾಕ್ ಫಂಗಸ್  ಬ್ಲ್ಯಾಕ್ ಫಂಗಸ್  ರೋಗಶಾಸ್ತ್ರವನ್ನು ಪತ್ತೆ ಹಚ್ಚಲು ಕೆಒಎಚ್ ಸ್ಟೇನಿಂಗ್, ಮೈಕ್ರೋಸ್ಕೋಪಿ, ಫಂಗಲ್ ಕಲ್ಚರ್, ಬಯೋಕ್ಸಿ, ಮಾಲ್ಡಿಟಾಫ್ (MALDITOF) ನಂತಹ ಪರೀಕ್ಷೆಗಳು ಇದ್ದರೂ ಕೂಡ ರೋಗದ ಸೂಕ್ತವಾದ ಚುಚ್ಚುಮದ್ದು ಅಥವಾ ಇಂಜೆಕ್ಶನ್  ಇಲ್ಲ. ಇಂತಹ ಪರಿಸ್ಥಿತಿಯ ನಡುವೆ ಮಹಾರಾಷ್ಟ್ರ ಮೂಲದ ಜೆನೆಟಿಕ್ ಲೈಫ್ ಸೈನ್ಸಸ್  ಇಂಜೆಕ್ಶನ್ ಉತ್ಪಾದನೆಗೆ ಮುಂದಾಗಿರುವುದು ಆಶಾವಾದದ ಬೆಳವಣಿಗೆಯಾಗಿದೆ.

ಆಂಫೊಟೆರಿಸಿನ್ ಬಿ ಎಮ್ಯುಲ್ಶನ್ ಇಂಜೆಕ್ಶನ್ ಬೆಲೆ ಎಷ್ಟು..?

ಜೆನೆಟಿಕ್ ಲೈಫ್ ಸೈನ್ಸಸ್ ತಯಾರಿಸಿದ ಆಂಫೊಟೆರಿಸಿನ್ ಬಿ ಎಮ್ಯುಲ್ಶನ್ ಇಂಜೆಕ್ಶನ್ ನವೊಂದರ  1,200 ರೂ. ಎಂದು ಕೇಂದ್ರ ಸಚಿವಾಲಯ ಹೇಳಿದೆ.

ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ, ಜೆನೆಟಿಕ್ ಲೈಫ್ ಸೈನ್ಸಸ್ ಅವರ ಪ್ರಯತ್ನದಿಂದ, ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಗಾಗಿ ಆಂಫೊಟೆರಿಸಿನ್ ಬಿ ಎಮ್ಯುಲ್ಶನ್ ಇಂಜೆಕ್ಶನ್ ತಯಾರಿಸಿದ್ದಾರೆ. ಸದ್ಯದ ಮಟ್ಟಿಗೆ ಈ ಔಷಧವನ್ನು ಕೇವಲ ಒಂದು ಕಂಪನಿ ಉತ್ಪಾದಿಸುತ್ತಿದೆ” ಎಂದು  ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

“ಈ ಔಷಧಿಗಳ ಒಂದು ಬಾಟಲಿಗೆ 1,200 ರೂ. ನಂತೆ ವಿತರಣೆಯು ಬರುವ ಸೋಮವಾರದಿಂದ ಆರಂಭವಾಗಲಿದೆ.  ಪ್ರಸ್ತುತ, ಬಾಟಲುಗಳನ್ನು 7,000 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ” ಎಂದು ವಿವರಿಸಲಾಗಿದೆ.


ಇದನ್ನೂ ಓದಿ : ತರುಣ್ ತೇಜ್‍ಪಾಲ್ ಪ್ರಕರಣ : ಜೂನ್ 2ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

11 ರಾಜ್ಯಗಳು ಸೇರಿ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಔಷಧಿ ಕೊರತೆ ..!

ಇನ್ನು, ದೇಶದಲ್ಲಿ ಮ್ಯೂಕೋರ್ಮೈಕೋಸಿಸ್ ಅನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿದ ಹನ್ನೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಸಾಂಕ್ರಾಮಿಕ ರೋಗಗಳ ಕಾಯ್ದೆ, 1897 ರ ಅಡಿಯಲ್ಲಿ) ಆಂಫೊಟೆರಿಸಿನ್-ಬಿ ಯ ತೀವ್ರ ಕೊರತೆಯನ್ನು ಅನುಭವಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಜೆನೆಟಿಕ್ ಲೈಫ್ ಸೈನ್ಸಸ್ ತಯಾರಿಸುತ್ತಿರುವ ಆಂಫೊಟೆರಿಸಿನ್-ಬಿ ಇಂಜೆಕ್ಶನ್ ಎಲ್ಲಾ ರೀತಿಯ ಶಿಲೀಂಧ್ರ ರೋಗಕ್ಕೆ ಚಿಕಿತ್ಸೆ ನೀಡಲು ಬಳಸುವ ಶಿಲೀಂಧ್ರ ವಿರೋಧಿ ಔಷಧವಾಗಿದೆ.

ದೆಹಲಿ, ಬಿಹಾರ, ಹರಿಯಾಣ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ತಮಿಳುನಾಡು, ಮಹಾರಾಷ್ಟ್ರ ಮತ್ತು ತೆಲಂಗಾಣವು ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ನನ್ನು ಸಾಂಕ್ರಾಮಿಕ ರೋಗವೆಂದು ಘೋಷಣೆ ಮಾಡಿವೆ.

ಇನ್ನು, ಚಿಕಿತ್ಸೆಯಲ್ಲಿರುವ ರೋಗಿಗಳ ಸಂಖ್ಯೆಯನ್ನು ಆಧರಿಸಿ ಆಂಫೊಟೆರಿಸಿನ್ ಬಿ ನ ಹೆಚ್ಚುವರಿ 29,250 ಬಾಟಲುಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಸದಾನಂದ ಗೌಡ ಬುಧವಾರ ಹೇಳಿದ್ದರು.

ಇದಕ್ಕೂ ಮೊದಲು ಮೇ 24 ರಂದು ಆಂಫೊಟೆರಿಸಿನ್-ಬಿ ನ ಹೆಚ್ಚುವರಿ 19,420 ಬಾಟಲುಗಳನ್ನು ಹಂಚಿಕೆ ಮಾಡಲಾಗಿದ್ದು, ಮೇ 21 ರಂದು ದೇಶಾದ್ಯಂತ ಔಷಧದ 23,680 ಬಾಟಲುಗಳನ್ನು ಸರಬರಾಜು ಮಾಡಲಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : ಮೇಕೆದಾಟು ಯೋಜನೆ ವಿವಾದದ ಬಗ್ಗೆ ರಾಜ್ಯ ಸರ್ಕಾರದಿಂದ ಕಾನೂನು ಹೋರಾಟ: ಬೊಮ್ಮಾಯಿ 

ಟಾಪ್ ನ್ಯೂಸ್

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.