ಗೋವಾ ತೀರದಲ್ಲಿ ‘ಬ್ಲೂ ಬಟನ್‌’

Team Udayavani, Sep 2, 2019, 5:42 AM IST

ಪಣಜಿ: ಜೆಲ್ಲಿ ಫಿಶ್‌ ಜಾತಿಗೆ ಸೇರಿದ ‘ಪೋರ್ಪಿಟಾ ಪೋರ್ಪಿಟಾ’ ಎಂಬ ಮೀನುಗಳು ಗೋವಾದ ಕರಾ ವಳಿಯುದ್ದಕ್ಕೂ ಹೇರಳವಾಗಿ ಕಂಡುಬಂದಿವೆ ಎಂದು ಗೋವಾ ಕರಾವಳಿಗೆ ಕಾವಲು ಸೇವೆ ಸಲ್ಲಿಸುವ ದೃಷ್ಟಿ ಮರೈನ್‌ ಸರ್ವೀಸಸ್‌ ಸಂಸ್ಥೆ ಹೇಳಿದೆ.

ಈ ಮೀನುಗಳು ಮಾನವರಿಗೆ ಸೋಕಿದ ಕೂಡಲೇ ಸೋಕಿದ ಜಾಗದಲ್ಲಿ ಕೆರೆತ ಉಂಟಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಬ್ಲೂ ಬಟನ್‌ ಎಂದು ಕರೆಯಲ್ಪಡುವ ಇವು, ಉಷ್ಣ ವಲಯದ ಸಮುದ್ರಗಳಲ್ಲಿ ಕಾಣಸಿಗುತ್ತವೆ. ಹಾಗಾಗಿ, ಪೆಸಿಫಿಕ್‌, ಅಟ್ಲಾಂಟಿಕ್‌ ಹಾಗೂ ಭಾರತದ ಸುತ್ತಲಿರುವ ಸಮುದ್ರ ತೀರಗಳಲ್ಲಿ ಇವು ಹೆಚ್ಚಾಗಿರುತ್ತವೆ ಎಂದು ಸಂಸ್ಥೆ ಹೇಳಿದೆ.

”ನಮ್ಮ ಸಿಬ್ಬಂದಿಯು, ಬ್ಲೂ ಬಟನ್‌ ಮಾದರಿಯ ಮೀನು ಗಳು ಉತ್ತರ ಹಾಗೂ ದಕ್ಷಿಣ ಗೋವಾದ ಸಮುದ್ರ ತೀರಗಳಲ್ಲಿ ಅಲೆಗಳ ಮೂಲಕ ಕೊಚ್ಚಿಕೊಂಡು ಬಂದಿ ರುವುದನ್ನು ಗಮನಿಸಿದ್ದಾರೆ. ಅವುಗಳನ್ನು ಮುಟ್ಟುವುದರಿಂದ ಚರ್ಮದ ತುರಿಕೆ ಉಂಟಾಗಬಹುದು” ಎಂದು ಸಂಸ್ಥೆ ಹೇಳಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ