ಡಾರ್ಜಿಲಿಂಗ್ನಲ್ಲಿ ಬಾಂಬ್ ಸ್ಫೋಟ; ಜೀವಹಾನಿ, ಗಾಯ ಇಲ್ಲ
Team Udayavani, Aug 19, 2017, 12:28 PM IST
ಡಾರ್ಜಿಲಿಂಗ್ : ಪಶ್ಚಿಮ ಬಂಗಾಲದ ಹಿಲ್ ಸ್ಟೇಶನ್ ಎಂದೇ ಖ್ಯಾತಿವೆತ್ತಿರುವ ಡಾರ್ಜಿಲಿಂಗ್ನಲ್ಲಿ ಇಂದು ಶನಿವಾರ ನಸುಕಿನ ವೇಳೆ ಬಾಂಬ್ ಸ್ಫೋಟ ಸಂಭವಿಸಿ ಕೆಲವು ಅಂಗಡಿಗಳು ಹಾನಿಗೊಂಡವೆಂದು ಪೊಲೀಸರು ತಿಳಿಸಿದ್ದಾರೆ.
ಬಾಂಬ್ ಸ್ಫೋಟದಿಂದ ಜನರು ತೀವ್ರ ಭಯಗ್ರಸ್ತರಾದರೂ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಡಾರ್ಜಿಲಿಂಗ್ ಮೋಟಾರ್ ಸ್ಟಾಂಡ್ ಪ್ರದೇಶದಲ್ಲಿ ಮಧ್ಯ ರಾತ್ರಿ ಕಳೆದು ನಸುಕಿನ ವೇಳೆ ಬಾಂಬ್ ಸ್ಫೋಟ ಸಂಭವಿಸಿತು. ಆಗ ಆ ಪ್ರದೇಶವು ಸಂಪೂರ್ಣವಾಗಿ ಖಾಲಿ ಇತ್ತು; ಹಾಗಾಗಿ ಯಾರಿಗೂ ಗಾಯಗಳಾಗಿಲ್ಲ; ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಪೊಲೀಸ್ ಸುಪರಿಂಟೆಂಡೆಂಟ್ ಅಖೀಲೇಶ್ ಕುಮಾರ್ ಚತುರ್ವೇದಿ ತಿಳಿಸಿದ್ದಾರೆ.
ಪ್ರತ್ಯೇಕ ಗೋರ್ಖಾ ಲ್ಯಾಂಡ್ ರಾಜ್ಯ ರಚನೆಯನ್ನು ಆಗ್ರಹಿಸಿ ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಕರೆ ನೀಡಿರುವ ಅನಿರ್ದಿಷ್ಟಾವಧಿ ಬಂದ್ನ 69ನೇ ದಿನವಾದ ಇಂದು ಈ ಬಾಂಬ್ ಸ್ಫೋಟ ಸಂಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್